ಕುಂದಾಪುರ: ತ್ರಾಸಿ ಗ್ರಾಮ ಪಂಚಾಯತಿಯ ಮಹಿಳಾ ಮತ್ತು ಮಕ್ಕಳ ಗ್ರಾಮಸಭೆ

ಕುಂದಾಪುರ : ತ್ರಾಸಿ ಗ್ರಾಮ ಪಂಚಾಯತಿಯ 2019-20ನೇ ಸಾಲಿನ ಮಹಿಳಾ ಮತ್ತು ಮಕ್ಕಳ ಗ್ರಾಮಸಭೆ ತ್ರಾಸಿ ಗ್ರಾಮ ಪಂಚಾಯತಿಯ ಅಂಬೇಡ್ಕರ್ ಸಭಾಭವನದಲ್ಲಿ ಶುಕ್ರವಾರ ಜರಗಿತು.

ತ್ರಾಸಿ ಗ್ರಾಮ ಪಂಚಾಯತ್ ಅಧ್ಯಕ್ಷ ಸುಧಾಕರ ಆಚಾರ್ಯ ಗ್ರಾಮ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಕೃಷಿ ಅಧಿಕಾರಿ ಮಮತಾ ನೊಡೆಲ್ ಅಧಿಕಾರಿಯಾಗಿದ್ದರು. ಗಂಗೊಳ್ಳಿ ಪೊಲೀಸ್ ಠಾಣೆಯ ಉಪನಿರೀಕ್ಷಕ ವಾಸಪ್ಪ ನಾಯ್ಕ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸವಿತಾ, ಆರೋಗ್ಯ ಇಲಾಖೆಯ ರಾಜೇಶ್ವರಿ ಇಲಾಖೆಯ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.

ಜಿಲ್ಲಾ ಪಂಚಾಯತ್ ಸದಸ್ಯೆ ಶೋಭಾ ಜಿ.ಪುತ್ರನ್, ತಾಲೂಕು ಪಂಚಾಯತ್ ಸದಸ್ಯ ನಾರಾಯಣ ಕೆ. ಗುಜ್ಜಾಡಿ, ಗ್ರಾಪಂ ಉಪಾಧ್ಯಕ್ಷೆ ಸುಧಾ ಖಾರ್ವಿ, ಸದಸ್ಯರಾದ ರವೀಂದ್ರ ಖಾರ್ವಿ, ವಿಜಯ ಪೂಜಾರಿ, ರತ್ನಾವತಿ, ಜಯಲಕ್ಷ್ಮೀ, ಜೀತಾ ಡಿಸಿಲ್ವಾ, ಮಕ್ಕಳ ಮಿತ್ರ ಶÀರತ್ ಮತ್ತಿತರರು ಉಪಸ್ಥಿತರಿದ್ದರು.

ಬೈಂದೂರು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಪ್ರೇಮಾನಂದ ಕಲ್ಮಾಡಿ ಸಂಪನ್ಮೂಲ ವ್ಯಕ್ತಿಯಾಗಿದ್ದರು. ಮಾಸ್ಸಿಮ್ ಒಲಿವೇರಾ ಆನಗೋಡು ಗಿಡಮೂಲಿಕೆ ಔಷಧ ಬಗ್ಗೆ ಮಾಹಿತಿ ನೀಡಿದರು.

ಗ್ರಾಪಂ ಅಭಿವೃದ್ಧಿ ಅಧಿಕಾರಿ ಶೋಭಾ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.