“ಬ್ರಹ್ಮಾವರದ ಎನ್. ಎನ್. ಇನ್ಫ್ರಾಸ್ಟ್ರಕ್ಚರ್ ಡೆವಲಪರ್ಸ್: ಬ್ಲೂಬೆರ್ರಿ ಹಿಲ್ಸ್‌ ವಸತಿ ಸಮುಚ್ಚಯ ಉದ್ಘಾಟನೆ”.

ಬ್ರಹ್ಮಾವರ: ಇಲ್ಲಿನ ನಿರ್ಮಾಣ ಸಂಸ್ಥೆ ಎನ್. ಎನ್. ಇನ್ಫ್ರಾಸ್ಟ್ರಕ್ಚರ್ ಡೆವಲಪರ್ಸ್‌ ಅವರಿಂದ ಬ್ರಹ್ಮಾವರದ ಹೃದಯ ಭಾಗದಲ್ಲಿ ನಿರ್ಮಾಣಗೊಂಡ ಬ್ಲೂಬೆರ್ರಿ ಹಿಲ್ಸ್ ವಸತಿ ಸಮುಚ್ಚಯ (ಬ್ಲಾಕ್ ಎ) ಗುರುವಾರ ಉದ್ಘಾಟನೆಗೊಂಡಿತು.
ಹೋಲಿ ಫ್ಯಾಮಿಲಿ ಚರ್ಚ್‌ನ ರೆ! ಫಾ। ಜಾನ್ ಫೆರ್ನಾಂಡಿಸ್, ಅವರು ಆಶೀರ್ವಚಿಸಿ, ಕೆಲಸದಲ್ಲಿ ಬದ್ಧತೆ, ದೃಢ ನಿರ್ಧಾರ ಇದ್ದಾಗ ಮಾತ್ರ ಯೋಜನೆ ಪೂರ್ಣಗೊಳ್ಳಲು ಸಾಧ್ಯ. ಸಮಯ ಪರಿಪಾಲನೆ, ಗುಣಮಟ್ಟದಿಂದ ಗ್ರಾಹಕರ ವಿಶ್ವಾಸ ದೊರೆಯುತ್ತದೆ. ಈ ನಿಟ್ಟಿನಲ್ಲಿ ಸಂಸ್ಥೆಯ ನಿಯೋನ್ಸ್ ಡಿ’ಸೋಜಾ ಅವರ ಕಾರ್ಯತತ್ಪರತೆ ಯುವಜನತೆಗೆ ಮಾದರಿಯಾಗಿದೆ. ಸಮುಚ್ಚಯ ನಿರ್ಮಾಣಕ್ಕೆ ಸಹಕರಿಸಿದ ಸರ್ವರಿಗೂ ಒಳಿತಾಗಲಿ, ನಿವಾಸಿಗಳು ಶಾಂತಿ, ನೆಮ್ಮದಿಯಿಂದ ನೆಲೆಸುವಂತಾಗಲಿ ಎಂದು ಹೇಳಿದರು.
ಎನ್. ಎನ್. ನಿಯೋನ್ಸ್‌ಡಿ’ಸೋಜಾ,
ಮಿಲ್‌ಗ್ರಿಡ್ ಡಿ’ಸೋಜಾ, ಪೀಟರ್ ಉಪಸ್ಥಿತರಿದ್ದರು. ಡಿ’ಸೋಜಾ, ಈವೆಟ್ ಡಿ’ಸೋಜಾ, ಮೈಕಲ್, ಗ್ರೇಸಿ, ನಿಶಾನ್ ಡಿ’ಸೋಜಾ, ಕುಟುಂಬಿಕರು, ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ನಿರೂಪಿಸಿದರು. ಶರಣ್ ಪ್ರಾಸ್ತಾವಿಸಿ, ಸ್ಟೀವನ್ ಕುಲಾಸೋ
3ನೇ ಕೊಡುಗೆ
ಎನ್. ಎನ್. ಸಂಸ್ಥೆಯಿಂದ ಬ್ರಹ್ಮಾವರದಲ್ಲಿ 3ನೇ ಆಗಿ ನಿರ್ಮಾಣಗೊಂಡ ಬ್ಲೂಬೆರ್ರಿ ವಸತಿ ಸಮುಚ್ಚಯವು ಆಧುನಿಕ ಯೋಜನೆ ಸೌಲಭ್ಯಗಳನ್ನು ಹೊಂದಿದ್ದು, ವಿವಿಧ
ಅವಶ್ಯ ಸೇವೆಗಳಿಗೆ ಸಮೀಪದಲ್ಲಿದೆ. ಹಸುರು ವಾತಾವರಣಕ್ಕೆ ಆದ್ಯತೆ, ಇನ್‌ಡೋರ್‌ಜಿಮ್, ಕ್ಲಬ್ ಹೌಸ್, ಎಸ್.ಟಿ.ಪಿ. ಯುನಿಟ್, ಭದ್ರತ ವ್ಯವಸ್ಥೆ ಸೌಲಭ್ಯ, ತೆರೆದ ಜಾಗ, ವಾಕಿಂಗ್, ಜಾಗಿಂಗ್ ಟ್ರ್ಯಾಕ್, ಮಕ್ಕಳ ಆಟದ ಪ್ರದೇಶ, ಪವರ್‌ಬ್ಯಾಕ್‌ಅಪ್, ಮಳೆ ವಿಶಾಲ ಪಾರ್ಕಿಂಗ್ ನೀರು ಕೊಯ್ದು ಇವಿ ಚಾರ್ಜಿಂಗ್ ಇತ್ಯಾದಿ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. 48 ಫ್ಯಾಟ್‌ಗಳನ್ನು ಹೊಂದಿದ್ದು, ಬಹುತೇಕ ಬುಕ್ ಆಗಿರುವುದಾಗಿ ಸಂಸ್ಥೆಯ ಪ್ರಕಟನೆ ತಿಳಿಸಿದೆ.