ಉಡುಪಿ: ನಮ್ಮ ಸಿನಿಮಾದ ಭಾಷೆ ನಾಟ್ಯ ಶಾಸ್ತ್ರದ ಭಾಷೆಯಾಗಿದೆ. ತಾರತಮ್ಯ, ಕೊಳ್ಳುತನ, ಪ್ರಚಾರ, ಧರ್ಮ, ಜಾತಿಗಳ ಶ್ರೇಣೀಕರಣದಿಂದಾಗಿ ಭಾರತೀಯ ಸಿನಿಮಾಗಳು ಧರ್ಮ ಕೇಂದ್ರೀಕೃತವಾಗಿವೆ. ಇತ್ತೀಚಿಗೆ ತೆರೆಕಂಡ ಧುರಂದರ ಸಿನಿಮಾವು ಏಕಮುಖವಾದ ಅಂತಹ ಸಿದ್ಧಾಂತದ ರಕ್ತಮಯ ಹುಸಿ ವಾಸ್ತವಿಕತೆಯ ದೃಶ್ಯಾವಳಿ ಹೊಂದಿದೆ.
ಈ ಸಿನಿಮಾ ಉಗ್ರ ರಾಷ್ಟ್ರವಾದದ ಸಂಕೇತ ಎಂದು ರಾಷ್ಟ್ರ ಪ್ರಶಸ್ತಿ ವಿಜೇತ ಸಿನೆಮಾ ನಿರ್ದೇಶಕ ಪಿ.ಎನ್.ರಾಮಚಂದ್ರ ಹೇಳಿದ್ದಾರೆ.
ರಥಬೀದಿ ಗೆಳೆಯರು ಉಡುಪಿ ವತಿಯಿಂದ ಉಡುಪಿ ಎಂಜಿಎಂ ಕಾಲೇಜಿನ ಧ್ವನ್ಯಾಲೋಕದಲ್ಲಿ ಆಯೋಜಿಸಲಾದ ಕಾರ್ಯಕ್ರಮ ದಲ್ಲಿ ಅವರು ಚಲನಚಿತ್ರಗಳ ರಾಜಕೀಯ ನೆರಳು ಕುರಿತು ವಿಶೇಷ ಉಪನ್ಯಾಸ ನೀಡಿದರು.
ಭಾರತೀಯ ಚಿತ್ರಗಳು ಏಕತೆಯನ್ನು ಭಂಗಪಡಿಸುವ ಮುಖ್ಯ ಕತೆಗೆ ಭಿನ್ನವಾಗಿ ನಿಲ್ಲುವ ಹಾಸ್ಯ ಪ್ರೇಕ್ಷಕರ ಆಕರ್ಷಣೆಗೆಯನ್ನೇ ಮುಖ್ಯವಾಗಿಸುತ್ತಿವೆ ಎಂದರು.
ರಥಬೀದಿ ಗೆಳೆಯರು ಅಧ್ಯಕ್ಷ ಉದ್ಯಾವರ ನಾಗೇಶ್ ಕುಮಾರ್ ಸ್ವಾಗತಿಸಿದರು. ನಾಟಕ ವಿಭಾಗದ ಸಂಚಾಲಕ ಸಂತೋಷ್ ನಾಯಕ್ ಪಟ್ಲ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಸುಬ್ರಹ್ಮಣ್ಯ ಜೋಶಿ ವಂದಿಸಿದರು.

















