ಉಡುಪಿ: ಉಡುಪಿ ಪೂರ್ಣಪ್ರಜ್ಞ ಇನ್ಸ್ಟಿಟ್ಯೂಟ್ ಆಫ್ ಮ್ಯೂನೇಜ್ಮೆಂಟ್, ಉಡುಪಿ ಮ್ಯೂನೇಜ್ಮೆಂಟ್ ಅಸೋಸಿಯೇಷನ್ ಸಹಯೋಗದಲ್ಲಿ, 2026ರ ಏ. 24 ಮತ್ತು 25 ರಂದು “ಜಾಗತಿಕ ವ್ಯಾಪಾರ ವೃದ್ಧಿ ಮತ್ತು ಉದ್ಯಮಶೀಲ ಅಭಿವೃದ್ಧಿಗೆ ತಂತ್ರಜಾನವು ಉತ್ತೇಜಕ ಶಕ್ತಿಯಾಗಿ” ಎಂಬ ವಿಷಯದ ಮೇಲೆ ಎರಡು ದಿನನಗಳ ಅಂತರಾಷ್ಟ್ರೀಯ ಸಮ್ಮೇಳನವನ್ನು ಯಶಸ್ಟಿಯಾಗಿ ಆಯೋಜಿಸಿತು.
ಈ ಸಮ್ಮೇಳನವನ್ನು ಉಡುಪಿ ಶ್ರೀ ಅದಮಾರು ಮಠ ಎಜುಕೇಶನ್ ಕೌನ್ಸಿಲ್ ನ ಅಧ್ಯಕ್ಷರು ಶ್ರೀ ಶ್ರೀ ಪ್ರಿಯತೀರ್ಥ ಸ್ವಾಮೀಜಿ ಅವರುಸಂಪ್ರದಾಯಬದ್ದ ದೀಪ ಪ್ರಜ್ವಲನೆ ಮೂಲಕ ಉದ್ಘಾಟಿಸಿದರು.

ಸ್ವಾಮೀಜಿಗಳು ಸಮಾರಂಭವನ್ನು ಆಶೀರ್ವದಿಸಿ, ಸಂಶೋಧನೆ ನವೀನತೆ ಮತ್ತು ಮೌಲ್ಯಧಾರಿತ ಶಿಕ್ಷಣದ ಮಹತ್ವವನ್ನು ಒತ್ತಿ ಹೇಳಿದರು. ಅವರು ವಿದ್ಯಾರ್ಥಿಗಳು ಮತ್ತು ಸಂಶೋಧಕರನ್ನು ಸಂಶೋಧನಾ ಕೇಂದ್ರೀಕೃತ ಹಾಗೂ ನವೀನ ಶೈಕ್ಷಣಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಪ್ರೇರೇಪಿಸಿದರು.
ಉದ್ಘಾಟನಾ ಸಮಾರಂಭವು ಪೂರ್ಣಪ್ರಜ್ಞ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ನ ನಿರ್ದೇಶಕರಾದ ಡಾ. ಪಿಎಸ್ ಐತಾಳ್ ಅವರ ಸ್ವಾಗತ ಭಾಷಣದಿಂದ ಆರಂಭವಾಯಿತು. ಈ ಸಂದರ್ಭದಲ್ಲಿ ಸ್ವಾಮೀಜಿಗಳು ಮೂರು ಪ್ರಮುಖ ಪ್ರಕಟಣೆಗಳನ್ನು ಬಿಡುಗಡೆ ಮಾಡಿದರು.
- ಸಾರಾಂಶಗಳ ಪುಸ್ತಕ
- ಡಿಸೆಂಬರ್ 2025 ರಲ್ಲಿ ನಡೆದ ಸಮ್ಮೇಳನದ ಪ್ರೊಸಿಡಿಂಗ್ಸ್
- ಡಾಕ್ಟರ್ ಪಿಎಸ್ ಐತಾಳ್ ಮತ್ತು ಡಾ. ರಾಮನಾಥನ್ ಶ್ರೀನಿವಾಸನ್ ರಚಿಸಿದ ‘ದಿ ಪಾತ್ ಆಫ್ ಮೋಕ್ಷ ಫಾರ್ ಅಲ್ಟಿಮೇಟ್ ಲಿಬರೇಷನ್’ ಪುಸ್ತಕ
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಬ್ರಿಗೇಡಿಯರ್ ಡಾ. ಸುರ್ಜಿತ್ ಸಿಂಗ್ ಪಬ್ಲಾ, ಮಣಿಪಾಲ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್ ಅಧ್ಯಕ್ಷರು, ತಮ್ಮ ರಕ್ಷಣಾ ಕ್ಷೇತ್ರದ ಅನುಭವಗಳನ್ನು ಹಂಚಿಕೊಂಡರು. ಅವರು ಜೀವನ ಪರ್ಯಂತ ಕಲಿಕೆಯ ಮಹತ್ವವನ್ನು ವಿವರಿಸಿ ವಿದ್ಯಾರ್ಥಿಗಳು ತಮ್ಮ ಕೌಶಲ್ಯ ಮತ್ತು ಜ್ಞಾನವನ್ನು ನಿರಂತರವಾಗಿ ವೃದ್ಧಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಇತರೆ ಗಣ್ಯ ಅತಿಥಿಗಳಲ್ಲಿ:
- ಡಾ. ಎಮ್ ಬಿ ಭಟ್ (ಬೆಂಗಳೂರು, ಯುಎಸ್ಸಿಎಂಇಸಿ ಗೌರವ ಕಾರ್ಯದರ್ಶಿ) – ಆಧುನಿಕ ಆರ್ಥಿಕತೆಯಲ್ಲಿ ತಂತ್ರಜ್ಞಾನದ ರೂಪಾಂತರಕಾರಿ ಪಾತ್ರ
- ಡಾ. ಚಂದ್ರಶೇಖರ್ (ಪಿಎಮ್ಐ ಗೌರವ ಕಾರ್ಯದರ್ಶಿ) – ಇಂದಿನ ತಲೆಮಾರಿನ ಮೇಲೆ ಕೃತಕ ಬುದ್ಧಿಮತೆಯ ಪ್ರಭಾವ
- ಸಿಎಟಿ. ಪ್ರಶಾಂತ ಹೊಳ್ಳ( ಪಿಎಮ್ಐ ಗೌರವ ಖಜಾಂಚಿ) – ಶೈಕ್ಷಣಿಕ ಸಹಕಾರ ಮತ್ತು ಜ್ಞಾನ ಹಂಚಿಕೆಯಲ್ಲಿ ಸಮ್ಮೇಳನಗಳ ಮಹತ್ವ.
- ಡಾ. ರಾಮು – ಸಂಶೋಧನೆಯಲ್ಲಿ ವಿದ್ಯಾರ್ಥಿಗಳ ಭಾಗವಹಿಸುವಿಕೆಯ ಅಗತ್ಯತೆ
- ಪ್ರೊಫೆಸರ್ ಡಾಕ್ಟರ್ ರಾಮನಾಥನ್ ಶ್ರೀನಿವಾಸನ್ ( ಶಿಮ್ಲಾ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡಿ ಫೆಲೋ) ಡಿಜಿಟಲ್ ಇಂಡಿಯಾ ಯುಗದಲ್ಲಿ ಸೈಬರ್ ವಂಚನೆ ಕುರಿತು ಆಳವಾದ ಉಪನ್ಯಾಸ ನೀಡಿದರು.
ಪೂರ್ವ ಉದ್ಘಾಟನಾ ಅಧಿವೇಶನದಲ್ಲಿ ಮಣಿಪಾಲ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ನ ಮಾಜಿ ನಿರ್ದೇಶಕರಾದ ಡಾ. ಕೆವಿ ಎಂ ವಾರಂಬಳ್ಳಿ, ತಂತ್ರಜ್ಞಾನ ಅಭಿವೃದ್ಧಿಯ ಆರ್ಥಿಕ ಆಯಾನಗಳ ಕುರಿತು ವಿವರಿಸಿದರು.

ಉದ್ಘಾಟನೆಯ ನಂತರ ನಡೆದ ಅಧಿವೇಶನಗಳಲ್ಲಿ ಹಲವಾರು ತಜ್ಞರ ಪ್ರಮುಖ ಉಪನ್ಯಾಸಗಳು ನಡೆದವು.
- ಪ್ರೊಫೆಸರ್ ಹರಿಕೃಷ್ಣ ಭಟ್ (ಎಚ್ ಸಿ ಎಲ್ ಜಪಾನ್ ಸಿಇಓ) – ಡಿಜಿಟಲ್ ಪರಿವರ್ತನೆ ಮತ್ತು ಜಾಗತಿಕ ಸ್ಪರ್ಧಾತ್ಮಕತೆ
- ಡಾ. ಮೈಕಲ್ ಸೋನಿ ( ಆಕ್ಸ್ಫರ್ಡ್ ಬ್ರೋಕನ್ ಯೂನಿವರ್ಸಿಟಿ, ಯುಕೆ)
- ಡಾ. ಪ್ರಾಂತೋಷ್ ಕೆ. ಪಾಲ್ – ಸಸ್ಟೈನಬಿಲಿಟಿ ಕ್ಷೇತ್ರಗಳಲ್ಲಿ ಎಐ ಪ್ರಭಾವ
- ಪ್ರೊಫೆಸರ್ ಅಂಜಯ್ ಕುಮಾರ್ ಮಿಶ್ರಾ (ನೇಪಾಳ) – ಲೆಕ್ಕಪತ್ರ ಕಾರ್ಯಾಚರಣೆಗಳ ಭವಿಷ್ಯ ಸಮ್ಮೇಳನದಲ್ಲಿ ಪ್ಯಾನೆಲ್ ಚರ್ಚೆಗೂ ನಡೆಯಿತು. ಇದರಲ್ಲಿ ಎನ್ ಆರ್ ವಾಸುದೇವ್, ಪ್ರೋ. ಎಚ್‌ವಿ ಸೋಮಯಾಜಿ, ಡಾ. ಕೃಷ್ಣ ಕೊಥೈ, ಪ್ರೊ. ರಾಮನಾಥನ್ ಶ್ರೀನಿವಾಸನ್, ಶ್ರೀಕಾಂತ್ ಡಾ. ವಿನಯ್ ಪ್ರಭು ಭಾಗವಹಿಸಿದರು.
ಈ ಚರ್ಚೆಯನ್ನು ಡಾ. ಭಾರತಿ ಕಾರಂತ್ ಸಂಯೋಜಿಸಿದರು ಮತ್ತು ಸಮ್ಮೇಳನದ ಉದ್ದೇಶ ಹಾಗೂ ಮಹತ್ವವನ್ನು ವಿವರಿಸಿದರು.
ಕಾರ್ಯಕ್ರಮವನ್ನು ರಾಮಕೃಷ್ಣ ನಾಯಕ್ ನಿರೂಪಿಸಿದರು. ಡಾ. ಡಯಾನ ಸಲ್ದಾನ್ಹಾ ಪ್ರಮುಖ ಉಪನ್ಯಾಸಗಳನ್ನು ಆಯೋಜಿಸಿ, ಧನ್ಯವಾದ ಸಮರ್ಪಿಸಿದರು. ಪ್ರಾಧ್ಯಾಪಕ ಮತ್ತು ಸಿಬ್ಬಂದಿ ಹಾಗೂ ವಿದ್ಯಾರ್ಥಿ ಸ್ವಯಂಸೇವಕರು ಕಾರ್ಯಕ್ರಮದ ಯಶಸ್ವಿಗೆ ಮಹತ್ತರ ಪಾತ್ರ ವಹಿಸಿದರು.
ಈ ಸಮ್ಮೇಳನ ವಿವಿಧ ಸಂಸ್ಥೆಗಳ ಅಧ್ಯಾಪಕರು ಸಂಶೋಧಕರು, ಕೈಗಾರಿಕಾ ತಜ್ಞರು ಮತ್ತು ವಿದ್ಯಾರ್ಥಿಗಳನ್ನು ಒಟ್ಟುಗೂಡಿಸಿ ಜಾಗತಿಕ ವ್ಯಾಪಾರ ಮತ್ತು ಉದ್ಯಮಶೀಲತೆಯಲ್ಲಿ ತಂತ್ರಜ್ಞಾನದ ರೂಪಾಂತರಕಾರಿ ಪಾತ್ರವನ್ನು ಚರ್ಚಿಸಲು ಒಂದು ಚೈತನ್ಯಮಯ ವೇದಿಕೆಯನ್ನು ಒದಗಿಸಿತು.

















