ಕಾರ್ಕಳ: ದೇವರ ಸೇವೆಯಿಂದ ಪುಣ್ಯ ಪ್ರಾಪ್ತಿ ಸಿಧ್ಧಿಯಾಗುತ್ತದೆ ಎಂದು ಶ್ರೀ ಶ್ರೀ ಶಿವಾನಂದ ಸರಸ್ವತಿ ಸ್ವಾಮಿಜಿ ಹೇಳಿದರು.
ಕಾರ್ಕಳ ಹಿರ್ಗಾನ ದ ಶಿವಾನಂದ ಸರಸ್ವತಿ ಸಭಾಭವನದಲ್ಲಿ ನಡೆದ ಉದಾರ ದಾನಿಗಳಿಗೆ ಹಾಗೂ ಕರಸೇವಕರಿಗೆ ಅಭಿನಂದನ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡುತ್ತಾ ಮಾತನಾಡಿ, ಉತ್ತಮ ಸಂಸ್ಕಾರ ವೈದಿಕ ಸಂಸ್ಕಾರ ಯಜ್ಞ ಯಾಗಾದಿಗಳನ್ನು ಮಾಡುವುದರಿಂದ ಸಮಾಜದಲ್ಲಿ ಉನ್ನತ ಮಟ್ಟದಲ್ಲಿ ಗುರುತಿಸಲು ಸಾಧ್ಯ ಎಂದರು.
ಅಧ್ಯಕ್ಷ ತೆ ವಹಿಸಿದ್ದ ಸಮಿತಿ ಅಧ್ಯಕ್ಷ ಗೋಕುಲ್ ದಾಸ್ ನಾಯಕ್ ಮಾತನಾಡಿ, ಕರ ಸೇವೆಯನ್ನು ಎಲ್ಲರಿಗೂ ಹಂಚಿಕೊಂಡು ಮಾಡಿದರ ಫಲವಾಗಿ ಸುಸಜ್ಜಿತ ಸಭಾಂಗಣ ನಿರ್ಮಾಣವಾಗಿದೆ. ಹಂಚಿಕೊಂಡು ಕಾರ್ಯ ಮಾಡುವ ಮೂಲಕ ಮನಸ್ಸಿಗೆ ಸಂತೃಪ್ತಿ ದೊರೆತಂತಾಗುತ್ತದೆ ಎಂದರು.
ಸಭೆಯಲ್ಲಿ ಮಾಜಿಮೊಕ್ತೆಸರ ನಾರಾಯಣ ಗವಳ್ಖರ್ , ಎರಡನೆ ಆಡಳಿತ ಮೊಕ್ತೆಸರ ಪಾಂಡುರಂಗ ನಾಯಕ್ ಕಡ್ತಲ, ಭವಾನಿಶಂಕರ್ ನಾಯಕ್ , ಶಿವಾನಂದ ನಾಯಕ್, ಉದ್ಯಮಿ ಬಾಲಕೃಷ್ಣ ನಾಯಕ್ , ವಿಷ್ಣುಮೂರ್ತಿ ನಾಯಕ್, ಪ್ರಕಾಶ್ ನಾಯಕ್, ಶಂಕರ್ ನಾಯಕ್, ಸುರೇಶ್ ನಾಯಕ್, ಕಛೇರಿ ಸದಾನಂದ ನಾಯಕ್, ರಾಜಪುರ ಸಾರಸ್ವತ ಸಂಘದ ಅಧ್ಯಕ್ಷ ಅಶೋಕ್ ನಾಯಕ್, ದೇವಸ್ಥಾನ ಆಡಳಿತ ಮೊಕ್ತೆಸರ ರಘುರಾಮ ಪ್ರಭು, ಸಮಿತಿ ಯ ಕಾರ್ಯಾಧ್ಯಕ್ಷ ಸಂತೋಷ್ ವಾಗ್ಳೆ, ಮೊದಲಾದವರು ಉಪಸ್ಥಿತರಿದ್ದರು
ಸಂತೋಷ್ ವಾಗ್ಳೆ, ಸ್ವಾಗತಿಸಿ ದರು. ಕರ ಸೇವಕರನ್ನು ಹಾಗೂ ದಾನಿಗಳನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಮಹಾಲಕ್ಷ್ಮಿ ದೇವಸ್ಥಾನದ ಆಡಳಿತ ಮೊಕ್ತೇಸರ ರಘುರಾಮ ಪ್ರಭು ಅಂಡಾರು ಪ್ರಾಸ್ತಾವಿಕ ಮಾತನಾಡಿದರು. ಬಾಲಕೃಷ್ಣ ನಾಯಕ್ ಹಾಗೂ ನಿತ್ಯಾನಂದ ನಾಯಕ್ ಕಾರ್ಯಕ್ರಮ ನಿರೂಪಿಸಿದರು.