ಕುಂದಾಪುರ: ಉದಯ್ ಕುಮಾರ್ ಎಂ ಸಿ ಅವರಿಗೆ ಸನ್ಮಾನ.

ಮೂಡ್ಲಕಟ್ಟೆ ಎಂ.ಐ.ಟಿ ಕುಂದಾಪುರದ ಸಾವಿಷ್ಕರ್-2026 ಎರಡನೇ ದಿನದ ಸಂಜೆಯ ಕಾರ್ಯಕ್ರಮದಲ್ಲಿ ಬೈಂದೂರಿನ ಗವರ್ನಮೆಂಟ್ ಪಿ ಯು ಕಾಲೇಜಿನ ರಾಜ್ಯ ಪ್ರಶಸ್ತಿ ಪುರಸ್ಕೃತ ಫಿಸಿಕ್ಸ್ ಪ್ರಾಧ್ಯಾಪಕರಾದ ಉದಯ್ ಕುಮಾರ್ ಎಂ ಸಿ ಅವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಐ ಎಂ ಜೆ ವಿದ್ಯಾಸಂಸ್ಥೆಗಳ ಚೇರ್ಮನ್ ರಾದ ಶ್ರೀ ಸಿದ್ಧಾರ್ಥ ಜೆ ಶೆಟ್ಟಿ, ಐ ಎಂ ಜೆ ಸಂಸ್ಥೆಗಳ ಶೈಕ್ಷಣಿಕ ನಿರ್ದೇಶಕರಾದ ಡಾ. ಎಸ್ ಎನ್ ಭಟ್ ಹಾಗೂ ಎಂ ಐ ಟಿ ಕುಂದಾಪುರದ ಪ್ರಾಂಶುಪಾಲರಾದ ಡಾ. ರಾಮಕೃಷ್ಣ ಹೆಗಡೆ ಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.