ಉಡುಪಿ: ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳಾದ ಶ್ರಿ. ಪಿ ಪ್ರಮೋದ್ ರಾವ್, ಶ್ರಿ ಸಾಗರ್ ಎಸ್, ಶ್ರಿ ಮೋಹಿತ್ ಕೋಟ್ಯಾನ್ ಮತ್ತು ಶ್ರೀ ಪ್ರದ್ಯುನ್ಮಾ ಶೆಟ್ಟಿಗಾರ್ ಇವರು “ಸೃಷ್ಟಿ ೨೦೨೬” ಎಂಬ ರಾಜ್ಯ ಮಟ್ಟದ ತಾಂತ್ರಿಕ ಪ್ರಾಜೆಕ್ಟ್ ಪ್ರದರ್ಶನ ಮತ್ತು ಸ್ಪರ್ಧೆ ಹ್ಯಾಕಥಾನ್‌ನಲ್ಲಿ ದ್ವಿತೀಯ ಬಹುಮಾನವನ್ನು ಪಡೆದಿರುತ್ತಾರೆ.
ಈ ಸ್ಪರ್ಧೆಯನ್ನು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜ್ ಆಫ್ ಇಂಜಿನಿಯರಿoಗ್ ಆ್ಯಂಡ್ ಟೆಕ್ನಾಲಜಿಯು ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಇದರ ಸಹಯೋಗದೊಂದಿಗೆ ಸೃಷ್ಟಿ ಇನೋವೇಟಿವ್ ಎಕ್ಸ್ಚೇಂಜ್ ೨೦೨೬ ಕಾರ್ಯಕ್ರಮದ ಅಂಗವಾಗಿ ಎ. ೨೮ ರಿಂದ ೩೦ ರವರೆಗೆ ಆಯೋಜಿಸಲಾಗಿತ್ತು.
ವಿದ್ಯಾರ್ಥಿಗಳು ಆಧುನಿಕ ತಂತ್ರಜ್ಞಾವನ್ನು ಬಳಸಿಕೊಂಡು ಅಭಿವೃದ್ಧಿಪಡಿಸಿದ ಈ ಪ್ರಾಜೆಕ್ಟ್ ಆರೋಗ್ಯ ಸೇವೆಯಲ್ಲಿ ಎದುರಾಗುವ ಸವಾಲುಗಳನ್ನು ಪರಿಹರಿಸುವ ಮೂಲಕ ಸೇವೆಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಉದ್ದೇಶವನ್ನು ಹೊಂದಿದೆ.
ವಿದ್ಯಾರ್ಥಿಗಳ ಈ ಸಾಧನೆಗೆ ಸಂಸ್ಥೆಯ ಆಡಳಿತ ಮಂಡಳಿಯವರು, ಪ್ರಾoಶುಪಾಲರು ಹೃತ್ಪೂರ್ವಕ ಅಭಿನಂದನೆಗಳನ್ನು ವ್ಯಕ್ತಪಡಿಸಿರುತ್ತಾರೆ. ಈ ರೀತಿಯ ಯಶಸ್ಸು ವಿದ್ಯಾರ್ಥಿಗಳ ನಿಷ್ಠೆ, ಶ್ರಮ ಹಾಗೂ ಶಿಕ್ಷಣದ ಗುಣಮಟ್ಟವನ್ನು ಪ್ರತಿಬಿಂಬಿಸುತ್ತದೆ ಎoದು ತಿಳಿಸಿದ್ದಾರೆ.

















