ಮಾನವೀಯ ಮೌಲ್ಯಗಳನ್ನು ರೂಢಿಸಿ ಬದುಕುವುದೇ ಮಾನವ ಧರ್ಮ: ಶ್ರೀ ಶ್ರೀ ಶಿವಾನಂದ ಸರಸ್ವತಿ ಸ್ವಾಮೀಜಿ

 

https://youtu.be/T6MYZvayicA

ಕಾರ್ಕಳ ; ಮಾನವೀಯ ಮೌಲ್ಯಗಳನ್ನು ರೂಡಿಸಿ ಬದುಕುವುದೇ  ಮಾನವ ಧರ್ಮ ಎಂದು ಶ್ರೀ ಶ್ರೀ ಶಿವಾನಂದ ಸರಸ್ವತಿ ಸ್ವಾಮಿಜಿ ಹೇಳಿದರು.

ಕಾರ್ಕಳ ಹಿರ್ಗಾನ ದ ಶಿವಾನಂದ ಸರಸ್ವತಿ ಸಭಾಭವನದ ಉದ್ಘಾಟಿಸಿ ಆಶೀರ್ವಚನ ನೀಡುತ್ತಾ ಮಾತನಾಡಿ,

ಗುರುಪರಂಪರೆಯನ್ನು ಗೌರವಿಸುತ್ತಾ ಅದನ್ನು ರೂಢಿಸಿಕೊಂಡು ಬರುವುದು ಹೆಮ್ಮೆಯ ವಿಚಾರವಾಗಿದ್ದು ಭವಿಷ್ಯದಲ್ಲಿ ಧರ್ಮದ ಉಳಿವಿಗೆ ಮುನ್ನುಡಿ ಬರೆದಂತೆ, ಅದರ ಜೊತೆಗೆ ಸಿಧ್ದಿ ಬುಧ್ಧಿಯನ್ನು ರೂಢಿಸಿಕೊಂಡು ಬದುಕಿ ನಡೆದರೆ ಜೀವನ ಪಾವನ ವಾಗುವುದು, ಜೀವನವನ್ನು ತಿದ್ದಿ ಬದುಕಿ ನಡೆಯಿರಿ ಎಲ್ಲೆಡೆಯೂ ಗೌರವವು ಪ್ರಾಪ್ತಿಯಾಗುವುದು ಎಂದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಮಾಜಿ‌ಮುಖ್ಯಮಂತ್ರಿ ವೀರಪ್ಪಮೊಯಿಲಿ ಮಾತನಾಡಿ, ಸರಸ್ವತಿ ಹಾಗೂ ಲಕ್ಷ್ಮಿಯ ಸಂಗಮ ಸ್ಥಳವಾಗಿದ್ದು ಸಾರಸ್ವತ ಸಮಾಜದವು ಹೃದಯ ಶ್ರೀಮಂತಿಕೆಯ ಪ್ರತೀಕವಾಗಿದೆ ಎಂದರು.

ಶಾಸಕ ವಿ ಸುನೀಲ್ ಕುಮಾರ್ ಮಾತನಾಡಿ, ಸನ್ಮಾರ್ಗ ಸಂತೃಪ್ತಿಯಿಂದ ಬಾಳುವ ಸಮಾಜವೆಂದರೆ ಸಾರಸ್ವತ ಸಮಾಜ, ಸಾಮಾಜಿಕವಾಗಿ ತೊಡಗಿಸಿಕೊಂಡು ಸಹಬಾಳ್ವೆಯನ್ನು ಪಾಲಿಸಿಕೊಂಡು ಬಂದವರು, ಇತಿಹಾಸದಲ್ಲು ವಿದೇಶಿಯರ ದಾಳಿಗೊಳಗಾಗಿದ್ದರೂ ಮತಾಂತರಗೊಳ್ಳದೆ ಸಂಸ್ಕೃತಿಯ ಧರ್ಮವನ್ನು ಅನುಸರಿಸಿಕೊಂಡು ಉಳಿಸಿಕೊಂಡು ಗುರುಗಳ ‌ಆಶೀರ್ವಚನವನ್ನು ಪಾಲಿಸಿಕೊಂಡು ಬಂದವರು ನಿಷ್ಠೆಯ ಜೀವನವನ್ನು ನಡೆಸಿಕೊಂಡು ಬಂದವರು ಎಂದು ಹೇಳಿದರು.

ಅಧ್ಯಕ್ಷ ತೆ ವಹಿಸಿದ್ದ ಸಮಿತಿ ಅಧ್ಯಕ್ಷ ಗೋಕುಲ್ ದಾಸ್ ನಾಯಕ್ ಮಾತನಾಡಿ, ಶ್ರಮದಾನಿಗಳ ಶ್ರಮವನ್ನು ಸ್ಮರಿಸಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು.

ಸನ್ಮಾನ: ಶಾಸಕ ವಿ.ಸುನೀಲ್ ಕುಮಾರ್ ,ಮಾಳ ಸದಾನಂದ ನಾಯಕ್, ಗೋಕುಲ ದಾಸ್ ನಾಯಕ್ ಹಾಗೂ ಸಹೊದರರು, ಅಶೋಕ್ ನಾಯಕ್ ದಂಪತಿಗಳು, ನೀರೆ ಗೋವಿಂದ ವಾಗ್ಳೆ ದಂಪತಿಗಳು , ಸತೀಶ್ ಅಂಬೆಲ್ಕರ್, ಕೊರಗಪ್ಪ ನಾಯಕ್ ದಂಪತಿಗಳು, ಅಂಡಾರು ಕಮಲಾಕ್ಷಿ ನಾಯಕ್, ಗೋವಿಂದ ನಾಯಕ್ ಶೆಟ್ಟಿ ಬೆಟ್ಟು ,ಬಾಲಕೃಷ್ಣ ನಾಯಕ್ ದಂಪತಿಗಳು, ಹಾಗೂ ಇತರ ದಾನಿಗಳನ್ನು ಸನ್ಮಾನಿಸಲಾಯಿತು

ವಲಯ ಅರಣ್ಯಾಧಿಕಾರಿ ಜಿ.ಡಿ.ದಿನೇಶ್, ಹಿರ್ಗಾನ ಗ್ರಾ.ಪಂ. ಅಧ್ಯಕ್ಷ ಸಂತೋಷ ನಾಯಕ್,ಅಪರ ಜಿಲ್ಲಾಧಿಕಾರಿ ಸದಾಶಿವ ನಾಯಕ್ ಎಳ್ಳಾರೆ, ತಾ.ಪಂ ಮಾಜಿ ಅಧ್ಯಕ್ಷೆ ಮಾಲಿನಿ ಜೆ.ಶೆಟ್ಟಿ. ಖ್ಯಾತ ಚಿತ್ರ ಕಲಾವಿದ ವಿಲಾಸ್ ನಾಯಕ್ ,ರಾಜಪುರ ಸಾರಸ್ವತ ಸಂಘದ ಅಧ್ಯಕ್ಷ ಅಶೋಕ್ ನಾಯಕ್, ಮಹಿಳಾ ಮಂಡಳಿ ಯ ಅಧ್ಯಕ್ಷೆ ಉಷಾ ನಾಯಕ್ , ದೇವಸ್ಥಾನ ಆಡಳಿತ ಮೊಕ್ತೆಸರ ರಘುರಾಮ ಪ್ರಭು, ಸಮಿತಿ ಯ ಕಾರ್ಯಾಧ್ಯಕ್ಷ ಸಂತೋಷ್ ವಾಗ್ಳೆ, ಉದ್ಯಮಿ ಆರ್ ಕೆ ನಾಯಕ್ ,ಮೊದಲಾದವರು ಉಪಸ್ಥಿತರಿದ್ದರು.

ನಿತ್ಯಾನಂದ ನಾಯಕ್ ಪ್ರಾಸ್ತಾವಿಕ ಮಾತನಾಡಿ ದರು, ಪ್ರದೀಪ್ ನಾಯಕ್ ಬೈಲುರು ಕಾರ್ಯಕ್ರಮ ನಿರೂಪಿಸಿದರು.