ಮಣಿಪಾಲ: ಮಣಿಪಾಲ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್ (MSDC) ವತಿಯಿಂದ ವಿದ್ಯಾರ್ಥಿಗಳಿಗಾಗಿ ವಿಶೇಷ ‘ರೆಸಿನ್ ಆರ್ಟ್’ ಸಮರ್ ಕ್ಯಾಂಪ್ ನ್ನು ಮೇ 11ರಿಂದ ಮೇ 15ರವರೆಗೆ ಆಯೋಜಿಸಲಾಗಿದೆ. ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ತರಗತಿಗಳು ನಡೆಯಲಿವೆ. ಸೃಜನಶೀಲತೆಯನ್ನು ಉತ್ತೇಜಿಸುವ ಉದ್ದೇಶದಿಂದ ಈ ಶಿಬಿರವನ್ನು ನಡೆಸಲಾಗುತ್ತಿದ್ದು, ವಿದ್ಯಾರ್ಥಿಗಳಿಗೆ ಇಲ್ಲಿ ಅತ್ಯುತ್ತಮ ಕರಕುಶಲ ಕಲೆಗಳನ್ನು ಕಲಿಯುವ ಅವಕಾಶ ದೊರೆಯಲಿದೆ.
ಈ ಶಿಬಿರದಲ್ಲಿ ಓಶನ್ ಆರ್ಟ್, ಕೋಸ್ಟರ್ಸ್ ಮತ್ತು ಕೀಚೇನ್ಸ್ ತಯಾರಿ, ಬುಕ್‌ಮಾರ್ಕ್ಸ್ ಹಾಗೂ ಡೆಕರ್ ವಸ್ತುಗಳ ನಿರ್ಮಾಣ, ಹ್ಯಾಂಡ್ಸ್-ಆನ್ ರೆಸಿನ್ ವರ್ಕ್ ಸೇರಿದಂತೆ ಹಲವು ಕೌಶಲ್ಯಗಳನ್ನು ಕಲಿಸಲಾಗುತ್ತದೆ.
9ನೇ ತರಗತಿ ಮತ್ತು ಅದಕ್ಕೂ ಮೇಲಿನ ವಿದ್ಯಾರ್ಥಿಗಳು ಈ ಶಿಬಿರದಲ್ಲಿ ಭಾಗವಹಿಸಬಹುದು. ಶಿಬಿರ ಶುಲ್ಕ ರೂ.2,500 ಆಗಿದ್ದು, ಅಗತ್ಯ ಸಾಮಗ್ರಿಗಳ ವೆಚ್ಚ ಇದರಲ್ಲಿ ಒಳಗೊಂಡಿದೆ. MSDC ‘ರೆಸಿನ್ ಆರ್ಟ್’ ಸಮರ್ ಕ್ಯಾಂಪ್ ನಲ್ಲಿ ನಿಮ್ಮ ಮಕ್ಕಳ ಕ್ರಿಯೇಟಿವಿಟಿಯನ್ನು ಹೆಚ್ಚಿಸಲು ಇದೊಳ್ಳೆ ಅವಕಾಶವಾಗಿದೆ. ಹೆಚ್ಚಿನ ಮಾಹಿತಿಗಾಗಿ -8123165069 ಸಂಪರ್ಕಿಸಬಹುದು. ನೋಂದಣಿಗಾಗಿ www.msdcskills.org ವೆಬ್‌ಸೈಟ್‌ಗೆ ಭೇಟಿ ನೀಡಬಹುದು.

















