ಇಂದಿನ ಡಿಜಿಟಲ್ ಯುಗದಲ್ಲಿ ಕಂಪ್ಯೂಟರ್ ಕೀಬೋರ್ಡ್ ನಮ್ಮ ದಿನನಿತ್ಯದ ಕೆಲಸಗಳಲ್ಲಿ ಅತ್ಯಂತ ಮುಖ್ಯ ಸಾಧನವಾಗಿದೆ. ನಾವು ದಿನವೂ ಬಳಸುವ ಈ ಕೀಬೋರ್ಡ್ ಮೇಲೆ ಧೂಳು, ಮಣ್ಣು, ಆಹಾರದ ತುಂಡುಗಳು ಹಾಗೂ ಬ್ಯಾಕ್ಟೀರಿಯಾ ಕೂಡ ಸೇರುತ್ತವೆ. ಆದ್ದರಿಂದ ನಿಯಮಿತವಾಗಿ ಕೀಬೋರ್ಡ್ ಕ್ಲೀನ್ ಮಾಡುವುದು ಅತ್ಯಗತ್ಯ.
ಯಾಕೆ ಕೀಬೋರ್ಡ್ ಕ್ಲೀನ್ ಮಾಡಬೇಕು?
ಕೀ ಬೋರ್ಡ್ ಸಂದುಗಳಲ್ಲಿ ಕುಳಿತುಕೊಲ್ಳುವ ಧೋಳು ಹಾಗೂ ಕಸಗಳಿಂದ ಕೀಬೋರ್ಡ್ ನಲ್ಲಿ ಬ್ಯಾಕ್ಟೀರಿಯಾ ಮತ್ತು ಜರ್ಮ್ಸ್ ಕಾಣಿಸಿಕೊಳ್ಳಬಹುದು. ಇದರಿಂದಾಗಿ ಕೀಲಿಗಳು ಸರಿ ಕೆಲಸ ಮಾಡದೇ ಬೇಗ ಹಾಳಾಗುವ ಸಾಧ್ಯತೆ ಇರುತ್ತದೆ. ಕೀಬೋರ್ಡ್ ದೀರ್ಘಾವಧಿ ಬಾಳಿಕೆ ಬರಲು ಹಾಗೂ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಕೀಬೋರ್ಡ್ ಸ್ವಚ್ಛತೆಯಿಂದಿಡಬೇಕು.
- ಸಾಮಾನ್ಯ ಬಳಕೆದಾರರು – ವಾರಕ್ಕೆ ಒಂದು ಬಾರಿ
- ಹೆಚ್ಚು ಬಳಕೆ ಮಾಡಿದರೆ 2–3 ದಿನಕ್ಕೊಮ್ಮೆ
- ಆಫೀಸ್ ಬಳಕೆ – ಪ್ರತಿದಿನ ಸ್ವಲ್ಪ ಮಟ್ಟಿಗೆ ಕ್ಲೀನ್ ಮಾಡುವುದು ಉತ್ತಮ
ಕ್ಲೀನ್ ಮಾಡುವ ಮೊದಲು ಗಮನಿಸಬೇಕಾದ ಅಂಶಗಳು
- ಕಂಪ್ಯೂಟರ್ ಅಥವಾ ಲ್ಯಾಪ್‌ಟಾಪ್ ಅನ್ನು ಸಂಪೂರ್ಣವಾಗಿ ಆಫ್ ಮಾಡಿ
- ಕೀಬೋರ್ಡ್ ಅನ್ನು ಪವರ್ ಸೋರ್ಸ್‌ನಿಂದ ಡಿಸ್ಕನೆಕ್ಟ್ ಮಾಡಿ
- ತೇವಾಂಶ ಹೆಚ್ಚಾಗದಂತೆ ಜಾಗ್ರತೆ ವಹಿಸಿ
ಕೀಬೋರ್ಡ್ ಕ್ಲೀನ್ ಮಾಡುವ ವಿಧಾನಗಳು
1. ಕೀಬೋರ್ಡ್ ಅನ್ನು ತಿರುಗಿಸಿ ಶೇಕ್ ಮಾಡುವುದು
ಕೀಬೋರ್ಡ್ ಅನ್ನು ಸ್ವಲ್ಪ ತಿರುಗಿಸಿ ನಿಧಾನವಾಗಿ ತಟ್ಟಿ. ಇದರಿಂದ ಒಳಗೆ ಸಿಕ್ಕಿಕೊಂಡಿರುವ ಧೂಳು ಮತ್ತು ಕಸದ ತುಂಡುಗಳು ಹೊರಬರುತ್ತವೆ.
2. ಬ್ರಶ್ ಅಥವಾ ಏರ್ ಬ್ಲೋವರ್ ಬಳಸಿ
ಸಾಫ್ಟ್ ಬ್ರಶ್ ಅಥವಾ ಏರ್ ಬ್ಲೋವರ್ ಬಳಸಿ ಕೀಲಿಗಳ ನಡುವಿನ ಧೂಳನ್ನು ತೆಗೆಯಬಹುದು. ಇದು ಅತ್ಯಂತ ಸುರಕ್ಷಿತ ಹಾಗೂ ಸುಲಭ ವಿಧಾನ
3. ಮೈಕ್ರೋಫೈಬರ್ ಕ್ಲಾತ್ ಬಳಸಿ
ಸ್ವಲ್ಪ ತೇವವಾಗಿರುವ ಮೈಕ್ರೋಫೈಬರ್ ಬಟ್ಟೆಯಿಂದ ಕೀಬೋರ್ಡ್ ವರೆಸಿ ಸ್ವಚ್ಛಗೊಳಿಸಿ. ಹೆಚ್ಚು ನೀರನ್ನು ಬಳಸಬೇಡಿ
4. ಆಲ್ಕೋಹಾಲ್ ಅಥವಾ ಡಿಸ್ಇನ್ಫೆಕ್ಟಂಟ್ ಬಳಕೆ
70% ಐಸೋಪ್ರೋಪೈಲ್ ಆಲ್ಕೋಹಾಲ್ ಬಳಸಬಹುದು ಅದನ್ನು ಕಾಟನ್ ಅಥವಾ ಕ್ಲಾತ್‌ಗೆ ಸ್ವಲ್ಪ ಹಚ್ಚಿ ಕ್ಲೀನ್ ಮಾಡಿ. ನೇರವಾಗಿ ಕೀಬೋರ್ಡ್ ಮೇಲೆ ಹಾಕಬೇಡಿ.
5. ಡೀಪ್ ಕ್ಲೀನಿಂಗ್ (ಆವಶ್ಯಕವಾದರೆ)
ಮೆಕ್ಯಾನಿಕಲ್ ಕೀಬೋರ್ಡ್‌ಗಳಲ್ಲಿ ಕೀಲಿಗಳನ್ನು ತೆಗೆದು ಕ್ಲೀನ್ ಮಾಡಬಹುದು. ಆದರೆ ಲ್ಯಾಪ್‌ಟಾಪ್ ಕೀಬೋರ್ಡ್‌ಗಳಲ್ಲಿ ಸಾಧ್ಯವಿಲ್ಲ.
ಈ ಎಚ್ಚರಿಕೆ ತೆಗೆದುಕೊಳ್ಳಲೇಬೇಕು
- ಹೆಚ್ಚು ನೀರು ಬಳಸಬೇಡಿ
- ಕೀಬೋರ್ಡ್ ಮೇಲೆ ನೇರವಾಗಿ ಲಿಕ್ವಿಡ್ ಹಾಕಬೇಡಿ
- ಹಾರ್ಡ್ ಬ್ರಶ್ ಬಳಸಬೇಡಿ
- ಕ್ಲೀನಿಂಗ್ ಸಮಯದಲ್ಲಿ ಪವರ್ ಆನ್ ಮಾಡಬೇಡಿ
ಕಂಪ್ಯೂಟರ್ ಕೀಬೋರ್ಡ್ ಕ್ಲೀನ್ ಮಾಡುವುದು ಒಂದು ಸಣ್ಣ ಅಭ್ಯಾಸವಾದರೂ, ಇದು ನಿಮ್ಮ ಸಾಧನದ ಆಯುಷ್ಯ ಹೆಚ್ಚಿಸುವುದರ ಜೊತೆಗೆ ನಿಮ್ಮ ಆರೋಗ್ಯವನ್ನೂ ಕಾಪಾಡುತ್ತದೆ. ಸರಿಯಾದ ವಿಧಾನಗಳನ್ನು ಅನುಸರಿಸಿದರೆ ಕೀಬೋರ್ಡ್ ಯಾವಾಗಲೂ ಹೊಸದರಂತೆ ಕಾಣುತ್ತದೆ.

















