ಮೂವಿ ಮಸಾಲ: ನಿರ್ದೇಶಕ ಶ್ರೀಶಾ ಎಳ್ಳಾರೆ ನಿರ್ದೇಶನದಲ್ಲಿ ಕಾಮಿಡಿ ಹಾರರ್ ತುಳುಫಿಲಂ ಶಕ ಲಕ ಬೂ0 ಬೂ0 ತೆರೆಯಮೇಲೆ ಬರಲು ಸಿದ್ಧವಾಗುತ್ತಿದೆ. ವಿಶೇಷವೆಂದರೆ ಇದು ಕನ್ನಡ ಭಾಷೆಗೂ ಡಬ್ ಆಗಲಿದೆ. ಸಿನಿಮಾ ಶೂಟಿಂಗ್ ಬೇಗ ಮುಗಿಸುವ ಯೋಚನೆ ಚಿತ್ರ ತಂಡಕ್ಕಿದ್ದು, ಅದಕ್ಕಾಗಿ ಸಿದ್ಧತೆ ಮಾಡಿಕೊಳ್ಳುತ್ತಿದೆ.
ಚಿತ್ರದ ಮುಹೂರ್ತ ಕಾರ್ಯಕ್ರಮವನ್ನು ಖ್ಯಾತ ಯಕ್ಷಗಾನ ಕಲಾವಿದ ನೀಲ್ಕೋಡು ಶಂಕರ್ ಹೆಗಡೆಯವರು ನೆರೆವೇರಿಸಿ ಚಿತ್ರ ತಂಡಕ್ಕೆ ಶುಭಹಾರೈಸಿದ್ದಾರೆ.
ವಿವಿದೆಡೆ ಚಿತ್ರೀಕರಣ : ಸಿನಿಮಾ ಶೂಟಿಂಗ್ ಡಿಸೆಂಬರ್ ನಲ್ಲಿ ಆರಂಭಗೊಳ್ಳುತ್ತಿದ್ದು ಉಡುಪಿ, ಚಿಕ್ಕಮಗಳೂರು, ಮಂಗಳೂರು, ಶಿವಮೊಗ್ಗ, ಮಡಿಕೇರಿ ಭಾಗಗಳಲ್ಲಿ ಶೂಟಿಂಗ್ ನಡೆಯಲಿದೆ.
ಸಿನಿಮಾದಲ್ಲಿ ನಾಯಕನಾಗಿ ಗಾದ್ವಿನ್ ಸ್ಪಾರ್ಕ್ ಲ್ ನಟಿಸುತ್ತಿದ್ದು ನಾಯಕಿಯಾಗಿ ಲಕ್ಷ ಶೆಟ್ಟಿ ನಟಿಸುತ್ತಿದ್ದಾರೆ. ಇದು ಇವರ ತುಳು ಚಿತ್ರರಂಗದ ಮೊದಲ ಸಿನಿಮಾ.
ಎಲ್ಲೊ ವಾಸವಿದ್ದ 5 ಜನರು ತಪ್ಪಿ ಬಂದು ಒಂದು ಮನೆಯಲ್ಲಿ ಸೇರಿರುತ್ತಾರೆ. ಈ ಜನರ ಕಥೆಯು ಆ ಮನೆಯಲ್ಲಿದ್ದ ಒಂದು ವಸ್ತುವಿನಿಂದ ಶುರುವಾಗುವುದು.
ಚಿತ್ರನಿರ್ಮಾಣದ ಸಂಪೂರ್ಣ ಜವಾಬ್ದಾರಿಯನ್ನು ನರಸಿಂಗೆ ನಿತ್ಯಾನಂದ ನಾಯಕ್ ಹಾಗೂ ಉಮೇಶ್ ಪ್ರಭು ಹೊತ್ತಿದ್ದಾರೆ ಹಾಗೂ ಚಿತ್ರಕಥೆಯನ್ನು ಎಸ್.ಪಿ.ಎಲ್ ಬರೆದಿದ್ದಾರೆ ಮತ್ತು ಅರ್ಜುನ್ ಲೂಯಿಸ್ ಅವರ ಸಂಭಾಷಣೆ ಇದೆ.
ಸಾಹಿತ್ಯವನ್ನು ಎಸ್.ಪಿ.ಎಲ್, ಚೇತನ್ ಪೂಜಾರಿ, ಜಿ.ಎಸ್.ಗುರುಪುರ, ಕಾರ್ತಿಕ್ ಮೂಲ್ಕಿ ಹೆಣೆದಿದ್ದಾರೆ.
ಈ ಚಲನಚಿತ್ರದಲ್ಲಿ ಕೋಸ್ಟಲ್ ವುಡ್ ಹಾಗೂ ಸ್ಯಾಂಡಲ್ ವುಡ್ ಸ್ಟಾರ್ ಗಳಾದ ಅರವಿಂದ್ ಬೋಳಾರ್, ಉಮೇಶ್ ಮಿಜಾರ್, ರವಿರಾಮ ಕುಂಜ, ರೂಪಶ್ರೀ ವರ್ಕಾಡಿ, ವಸಂತ ಮುನಿಯಾಲ್, ಮನೋಹರ್ ನಂದಳಿಕೆ (ಮುಂಬೈ) ಹಾಗೂ ಇನ್ನಿತರು ನಟಿಸಲಿದ್ದಾರೆ. ವಿಶೇಷವೆಂದರೆ ಅರವಿಂದ್ ಬೋಳಾರ್ ಅವರು ಮೊದಲ ಬಾರಿಗೆ ಜೀನಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ತುಳು ಚಿತ್ರರಂಗದಲ್ಲಿ ಭಾರಿ ಸಂಚಲನ ಮೂಡಿಸುತ್ತಿರುವ ಈ ಸಿನಿಮಾವು ಯಶಸ್ವಿಯಾಗಿ ತೆರೆಗೆ ಬಂದು ಗೆಲುವಿನ ಹಾದಿಯಲ್ಲಿ ಸಾಗಲಿ ಎನ್ನುವುದು ನಮ್ಮ ಹಾರೈಕೆ.
-ದೀಪಕ್ ಕಾಮತ್ ಎಳ್ಳಾರೆ