ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಏ.22 ರಂದು ಕನ್ನಡ ಸೇರಿದಂತೆ, 23 ಹಾಗೂ 24 ರಂದು ಸಿಇಟಿ ಪರೀಕ್ಷೆ ನಡೆಯಲಿದೆ. Karnataka CET Exam 2026ಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ Karnataka Examinations Authority ಸಂಪೂರ್ಣ ಸಿದ್ಧತೆ ಮಾಡಿಕೊಂಡಿದೆ. ರಾಜ್ಯದ 745 ಕೇಂದ್ರಗಳಲ್ಲಿ ಸುಮಾರು 3.30 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಈ ಬಾರಿ ಪರೀಕ್ಷೆಯನ್ನು ಕಟ್ಟುನಿಟ್ಟಾಗಿ ನಡೆಸಲು ವಸ್ತ್ರಸಂಹಿತೆ Dress Code ಜಾರಿಗೊಳಿಸಲಾಗಿದೆ. ಎಲ್ಲಾ ಕೇಂದ್ರಗಳಲ್ಲಿ ಸಿಸಿ ಕ್ಯಾಮೆರಾ ಹಾಗೂ ಸ್ಕ್ಯಾನಿಂಗ್ ವ್ಯವಸ್ಥೆ ಇರಲಿದೆ.
ಪುರುಷ ಅಭ್ಯರ್ಥಿಗಳಿಗೆ ನಿಯಮಗಳು
- ಪೂರ್ಣ ತೋಳಿನ ಶರ್ಟ್ಗಳಿಗೆ ಅವಕಾಶ ಇಲ್ಲ; ಅರ್ಧ ತೋಳಿನ ಶರ್ಟ್ ಧರಿಸಬೇಕು
- ಕಾಲರ್ ಇಲ್ಲದ ಸರಳ ಟೀ-ಶರ್ಟ್ ಅಥವಾ ಶರ್ಟ್ ಧರಿಸುವುದು ಉತ್ತಮ
- ಕಡಿಮೆ ಜೇಬುಗಳಿರುವ ಸರಳ ಪ್ಯಾಂಟ್ ಧರಿಸಬೇಕು
- ಜೀನ್ಸ್ ಮತ್ತು ಕುರ್ತಾ-ಪೈಜಾಮಾ ಅನುಮತಿ ಇಲ್ಲ
- ದೊಡ್ಡ ಬಟನ್, ಜಿಪ್ ಅಥವಾ ಕಸೂತಿ ಇರುವ ಬಟ್ಟೆಗಳನ್ನು ತೊಡಬಾರದು
- ಶೂಗಳನ್ನು ಧರಿಸಲು ಅವಕಾಶ ಇಲ್ಲ; ಸ್ಯಾಂಡಲ್ ಅಥವಾ ಚಪ್ಪಲಿ ಮಾತ್ರ ಧರಿಸಬೇಕು
- ಯಾವುದೇ ಲೋಹದ ಆಭರಣ (ಉಂಗುರ, ಚೈನ್, ಕಿವಿಯೋಲೆ) ನಿಷೇಧ
ಮಹಿಳಾ ಅಭ್ಯರ್ಥಿಗಳಿಗೆ ನಿಯಮಗಳು
- ಕಸೂತಿ, ದೊಡ್ಡ ಬಟನ್ ಅಥವಾ ಅಲಂಕಾರ ಇರುವ ಬಟ್ಟೆಗಳಿಗೆ ಅವಕಾಶ ಇಲ್ಲ
- ಪೂರ್ಣ ತೋಳಿನ ಬಟ್ಟೆ ಮತ್ತು ಜೀನ್ಸ್ ಧರಿಸಬಾರದು; ಅರ್ಧ ತೋಳಿನ ಬಟ್ಟೆ ಧರಿಸಬೇಕು
- ಹೈ ಹೀಲ್ಸ್ ಅಥವಾ ಶೂಗಳು ಧರಿಸುವಂತಿಲ್ಲ, ಸರಳ ಚಪ್ಪಲಿ ಧರಿಸಬೇಕು
- ಲೋಹದ ಆಭರಣ ಧರಿಸಲು ಅವಕಾಶ ಇಲ್ಲ (ಮಂಗಳಸೂತ್ರ, ಕಾಲುಂಗುರ ಹೊರತುಪಡಿಸಿ)
ನಿಷೇಧಿತ ವಸ್ತುಗಳು
- ಮೊಬೈಲ್, ಇಯರ್ಫೋನ್, ಬ್ಲೂಟೂತ್, ಪೆನ್ ಡ್ರೈವ್, ಗಡಿಯಾರ ಮುಂತಾದ ಎಲೆಕ್ಟ್ರಾನಿಕ್ ವಸ್ತುಗಳು
- ಆಹಾರ ಪದಾರ್ಥಗಳು
- ಬಣ್ಣದ ಅಥವಾ ಲೋಹದ ನೀರಿನ ಬಾಟಲಿ
- ಪೆನ್ಸಿಲ್, ಪೇಪರ್, ಎರೇಸರ್, ಜ್ಯಾಮಿಟ್ರಿ ಬಾಕ್ಸ್
- ಟೋಪಿ, ಹ್ಯಾಟ್ ಮತ್ತು ಮುಖ ಮುಚ್ಚುವ ಮಾಸ್ಕ್
ತರಬೇಕಾದ ವಸ್ತುಗಳು
- ಪ್ರವೇಶ ಪತ್ರ (Hall Ticket) ಕಡ್ಡಾಯ
- ಸರ್ಕಾರ ಮಾನ್ಯತೆ ಪಡೆದ ಗುರುತಿನ ಚೀಟಿ
ಗಮನಿಸಿ:
ಪರೀಕ್ಷಾ ಕೇಂದ್ರದಲ್ಲೇ ಕುಡಿಯುವ ನೀರಿನ ವ್ಯವಸ್ಥೆ ಇರುತ್ತದೆ. ಪರೀಕ್ಷೆ ಮುಗಿಯುವವರೆಗೆ ಯಾರಿಗೂ ಹೊರಗೆ ಹೋಗಲು ಅವಕಾಶ ಇರುವುದಿಲ್ಲ. ಅಲ್ಲದೇ ವಸ್ತ್ರಸಂಹಿತೆ ಪಾಲಿಸದಿದ್ದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ.

















