ದೇಶದ ರೈತರಿಗಾಗಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪ್ರಮುಖ ಯೋಜನೆ ಪಿಎಂ ಕಿಸಾನ್ ಸಮ್ಮಾನ್. ಈ ಯೋಜನೆಯಡಿ ವರ್ಷಕ್ಕೆ 6,000 ರೂ.ವನ್ನು ಮೂರು ಕಂತುಗಳಲ್ಲಿ (ಪ್ರತಿ ಕಂತು 2,000 ರೂ.) ರೈತರ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡಲಾಗುತ್ತದೆ. ಈಗಾಗಲೇ 22 ಕಂತುಗಳು ಬಿಡುಗಡೆಯಾಗಿದ್ದು, 23ನೇ ಕಂತಿನ ಹಣಕ್ಕಾಗಿ ರೈತರು ಕಾಯುತ್ತಿದ್ದಾರೆ.
23ನೇ ಕಂತು ಯಾವಾಗ ಬರಬಹುದು?
ಸಿಕ್ಕಿರುವ ಮಾಹಿತಿಯ ಪ್ರಕಾರ, 2026ರ ಮೇ ಅಥವಾ ಜೂನ್ ತಿಂಗಳಲ್ಲಿ 23ನೇ ಕಂತಿನ ಹಣ ಜಮೆಯಾಗುವ ಸಾಧ್ಯತೆ ಇದೆ. ಬಿತ್ತನೆ ಸಮಯದಲ್ಲಿ ಈ ಹಣ ರೈತರಿಗೆ ಸಹಾಯವಾಗಲಿದೆ.
ಎಲ್ಲರಿಗೂ ಹಣ ಸಿಗಲ್ಲ!
- ಆದಾಯ ತೆರಿಗೆ ಪಾವತಿಸುವವರು
- ಮನೆಯಲ್ಲಿ ಸರ್ಕಾರಿ ನೌಕರರು, ವೈದ್ಯರು, ಎಂಜಿನಿಯರ್‌ಗಳು ಇದ್ದವರು
ಇವರು ಅನರ್ಹರು.
ಈ ಕೆಲಸ ಮಾಡ್ಲಿಲ್ಲ ಅಂದ್ರೆ ಹಣ ಬರುವುದಿಲ್ಲ
- e-KYC ಪೂರ್ಣಗೊಳಿಸದಿರುವುದು
- ಆಧಾರ್, ಬ್ಯಾಂಕ್ ಖಾತೆಗೆ ಲಿಂಕ್ ಮಾಡದೇ ಇರುವುದು
ಸರ್ಕಾರದ ದೊಡ್ಡ ಪರಿಶೀಲನೆ
ಫಲಾನುಭವಿಗಳ ಪಟ್ಟಿಯನ್ನು ಸರ್ಕಾರ ಮರು ಪರಿಶೀಲನೆ ಮಾಡಿದ್ದು, ಅನರ್ಹರಾದ ಲಕ್ಷಾಂತರ ಹೆಸರುಗಳನ್ನು ತೆಗೆದುಹಾಕಲಾಗಿದೆ.
ನಿಮ್ಮ ಸ್ಟೇಟಸ್ ಹೇಗೆ ಚೆಕ್ ಮಾಡೋದು?
- pmkisan.gov.in ವೆಬ್‌ಸೈಟ್‌ಗೆ ಹೋಗಬೇಕು
- “Know Your Status” ಆಯ್ಕೆ ಮಾಡಬೇಕು
- ಮೊಬೈಲ್ ನಂಬರ್ ಅಥವಾ ರಿಜಿಸ್ಟ್ರೇಶನ್ ಸಂಖ್ಯೆ ಹಾಕಬೇಕು
- OTP ನಮೂದಿಸಿ ನಂತರ ಸ್ಟೇಟಸ್ ಪರಿಶೀಲಿಸಬಹುದು
ಲ್ಯಾಂಡ್ ಸೀಡಿಂಗ್ ಮುಖ್ಯ!
ಹಣ ಬಾರದ ಮತ್ತೊಂದು ಪ್ರಮುಖ ಕಾರಣ: Land Seeding “No” ಅಂತ ಇರಬಾರದು. ಅಂದರೆ ನಿಮ್ಮ ಭೂ ದಾಖಲೆಗಳು ಡಿಜಿಟಲ್ ಪೋರ್ಟಲ್‌ಗೆ ಲಿಂಕ್ ಆಗಿರಬೇಕು. ಇಲ್ಲದಿದ್ದರೆ ತಕ್ಷಣ ಕೃಷಿ ಕಚೇರಿಯಲ್ಲಿ ಸರಿಪಡಿಸಿಕೊಳ್ಳಿ.
ಕೊನೆಯದಾಗಿ 23ನೇ ಕಂತಿನ ಹಣ ಮಿಸ್ ಆಗಬಾರದು ಅಂದ್ರೆ ಆದಷ್ಟು ಶೀಘ್ರದಲ್ಲಿ e-KYC ಆಗಿಲ್ಲದಿದ್ದಲ್ಲಿ ಪೂರ್ಣಗೊಳಿಸಿ. ಆಧಾರ್ ಲಿಂಕ್ ಖಚಿತಪಡಿಸಿ ಹಾಗೂ ಭೂ ದಾಖಲೆಗಳನ್ನು ಅಪ್‌ಡೇಟ್ ಮಾಡಿ. 2,000 ರೂ. ಸಣ್ಣ ಮೊತ್ತವಾದರೂ, ಕೃಷಿಗೆ ಇದು ದೊಡ್ಡ ನೆರವು. ಆದ್ದರಿಂದ ಈಗಲೇ ನಿಮ್ಮ ದಾಖಲೆಗಳನ್ನು ಚೆಕ್ ಮಾಡಿ, ಹಣ ಸುರಕ್ಷಿತವಾಗಿ ಪಡೆಯಿರಿ.

















