ಪ್ಲಾಸ್ಟಿಕ್ ಬಿಡಿ, ಬಟ್ಟೆ ಚೀಲ ಹಿಡಿ ಎಂದ ಗೆಳೆಯರ ಕೇಂದ್ರ ಸಂಸ್ಥೆ: ಈಗ ಕುಂದಾಪುರವನ್ನು ಪರಿಸರ ಸ್ನೇಹಿ ಮಾಡುವ ಕನಸು

ದಿನೇ ದಿನೇ ಪ್ಲಾಸ್ಟಿಕ್ ಬಳಕೆ ಅತೀಯಾಗುತ್ತಿದೆ. ಪ್ಲಾಸ್ಟಿಕ್ ನಮ್ಮ ಆರೋಗ್ಯವನ್ನು ಕೆಡಿಸುವುದರ ಜೊತಜೊತೆಗೆ ನಮ್ಮ ಪರಿಸರವನ್ನೂ ಕೆಡಿಸುತ್ತಿದೆ. ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಮತ್ತು ಸುಂದರ ಪರಿಸರ ನಿರ್ಮಾಣಗೊಳಿಸುವ ಧ್ಯೇಯದೊಂದಿದೆ. 2013 ರಲ್ಲಿ ಮುಂಬೈನಲ್ಲಿ ಆರಂಭವಾದ ಸಂಸ್ಥೆಯೇ ಗೆಳೆಯರ ಕೇಂದ್ರ.

ಪ್ಲಾಸ್ಟಿಕ್ ಬಳಕೆಯ ಅಪಾಯವನ್ನು ಮನಗಂಡು ಹಾಗೂ ಮಹಿಳೆಯರ ಬಿಡುವಿನ ವೇಳೆಯ ಸದುಪಯೋಗ ಮಾಡಿ ಅವರಿಗೆ  ಆರ್ಥಿಕವಾಗಿ ನೆರವಾಗಲು ಆರಂಭಗೊಂಡ ಸಂಸ್ಥೆ ಇದೀಗ ಪರಿಸರ ಉಳಿಸುವಲ್ಲಿ ಮಾತ್ರ ಹೆಜ್ಜೆ ಇಡುತ್ತಿಲ್ಲ, ಸಾವಿರಾರು ಮಹಿಳೆಯರಿಗೆ ನೌಕರಿ ನೀಡುವ ಮೂಲಕ  ಅವರಿಗೆ ಸ್ವಾವಲಂಬಿ ಬದುಕು ನೀಡಿದೆ.ಇದೀಗ ಕುಂದಾಪುರದಲ್ಲಿ  ನ.22, 23 ರಂದು ಮಾನಂದ ಭಟ್ ವಠಾರ, ರಾಮಮಂದಿರ ಮಾರ್ಗ, ವಿಜಯ ಗಾರ್ಮೆಂಟ್ಸ್ ಎದುರು, ಹೊಸ ಬಸ್ಟ್ಯಾಂಡ್ ಹತ್ತಿರ ಪ್ರದರ್ಶನ ಮತ್ತು ಮಾರಾಟ ಾಯೋಜಿಸಿರುವ ಸಂಸ್ಥೆ  ಪರಿಸರ ಸ್ನೇಹಿ ಕುಂದಾಪುರ ನಿರ್ಮಾಣ ಮಾಡಲು ಹೊರಟಿದೆ.

 

ಸ್ವಾವಲಂಬನೆಗೊಂದು ದಾರಿ:

ಉದ್ಯೋಗವಿಲ್ಲವೆನ್ನುವ ಚಿಂತೆ ಬಿಟ್ಟು ಮಹಿಳೆಯರು ,ಪುರುಷರು ಬಟ್ಟೆ ಚೀಲಗಳನ್ನು ಹೊಲಿದು, ಸ್ವತಂತ್ರವಾಗಿ ಸ್ವಾವಲಂಬಿ ಸ್ವಾವಲಂಬಿಗಳಾಗಿ ಸ್ವಾಭಿಮಾನದಿಂದ ಜೀವಿಸಬೇಕ್ಕೆನ್ನುವುದೇ ಈ ಕೇಂದ್ರ ಉದ್ದೇಶ. ಹೊಲಿದ ಪ್ರತಿ ಚೀಲಕ್ಕೆ ರೂಪಾಯಿ ರೂ.4ರಿಂದ ರೂ.15ರ ತನಕ ಅವುಗಳ ವಿನ್ಯಾಸದ ಆಧಾರದಲ್ಲಿ ಸಂಭಾವನೆ ನೀಡಲಾಗುತ್ತಿದೆ.

ಆರ್ಥಿಕವಾಗಿ ಸಂಕಷ್ಟದಲ್ಲಿದ್ದ 30ಕ್ಕೂ ಹೆಚ್ಚು ಮಹಿಳೆಯರಿಗೆ ಹಾಗೂ 3-4 ಸಂಘ-ಸಂಸ್ಥೆ, ಶಾಲೆ, ಮಠಗಳಿಗೆ ಹೊಲಿಗೆ ಯಂತ್ರಗಳನ್ನು ಉಚಿತವಾಗಿಯೂ ಕಂತಿನಲ್ಲಿ ಇಲ್ಲಿ ತನಕ ನೀಡಿದೆ, ಮುಂದೆಯೂ ನೀಡುವ ಉದ್ದೇಶ ಈ ಕೇಂದ್ರಕ್ಕೆ ಇದೆ.

 

ಪ್ರತಿಯೊಂದು ಮನೆಯಲ್ಲಿ 5-10 ಬಟ್ಟೆ ಚೀಲಗಳಿರಲಿ:

ಪ್ಲಾಸ್ಟಿಕ್ ಒಂದು ಮಹಾಮಾರಿಯಾಗಿ ಪರಿಸರವನ್ನು ಕೆಡಿಸುತ್ತಿದೆ. ಮನುಷ್ಯನಿಗಲ್ಲದೆ ಎಲ್ಲಾ ಜೀವಜಂತುಗಳಿಗೆ ಅದು ಮಾರಕವಾಗಿದೆ. ಅದರ ಬಳಕೆಯು ಈ ಆಧುನಿಕ ಯುಗದಲ್ಲಿ ಅನಿವಾರ್ಯವಾದರೂ ಬಟ್ಟೆ ಚೀಲದ ಬಳಕೆಯಿಂದ ಅದನ್ನು ಕಡಿಮೆ ಮಾಡಲು ಸಾಧ್ಯವಿದೆ. ಪ್ರತಿಯೊಂದು ಮನೆಯಲ್ಲಿ 5-10 ಬಟ್ಟೆ ಚೀಲಗಳು ಇರಬೇಕು ಹಾಗೂ ಹೊರಗೆ ಹೋಗುವಾಗ ನೆನಪಿಟ್ಟು ಚೀಲಗಳನ್ನು ಒಯ್ಯಬೇಕು. ಈ ಎಲ್ಲಾ ಉದ್ದೇಶದಿಂದ ಫ್ರೆಂಡ್ಸ್ ಸ್ವಾವಲಂಬನಾ ಸಂಸ್ಥೆಯನ್ನು 2013ರಲ್ಲಿ ಹುಟ್ಟುಹಾಕಿದೆ ಎನ್ನುತ್ತಾರೆ ಸಂಚಾಲಕರಾದ ವೆಂಕಟೇಶ್ ಪೈ.

 

ಮೂಲತಃ ಕುಂದಾಪುರದ ಸೂರ್ನಳ್ಳಿ ವೆಂಕಟೇಶ್ ಪೈ ಅವರು ತಮ್ಮ 10ನೇ ತರಗತಿಯ ವಿದ್ಯಾಭ್ಯಾಸದ ನಂತರ ಮುಂಬೈಗೆ ತೆರಳಿ ಉನ್ನತ ಶಿಕ್ಷಣವನ್ನು ಪಡೆದು ಸರಕಾರಿ ಮಹಾ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರದ ಪ್ರಾಧ್ಯಾಪಕರಾಗಿ 34 ವರ್ಷಗಳ ಸೇವೆಯ ನಂತರ 2017ರಲ್ಲಿ ಸೇವಾ ನಿವೃತ್ತರಾದರು.

ನಿವೃತ್ತಿಯ ಮೊದಲೇ ಫ್ರೆಂಡ್ಸ್ ಸ್ವಾವಲಂಬನಾ ಕೇಂದ್ರವನ್ನು ಪ್ರಾರಂಭಿಸಿದ ಅವರು, ಮುಂಬಯಿಯ ಡೊಂಬಿವಿಲಿಯಲ್ಲಿ ಅಲ್ಲದೆ ಮಹಾರಾಷ್ರದ ಚಾಲೀಸ್ಸಾಂವ್, ತಮ್ಮ ಹೂಟ್ಟೂರು ಕುಂದಾಪುರ ಮತ್ತು ಹಲವು ಕಡೆಗಳಲ್ಲಿ ತಮ್ಮ ಸಂಸ್ಥೆಯ ಶಾಖೆಗಳನ್ನು ಸ್ಥಾಪಿಸಿದ್ದಾರೆ‌.

ಪ್ಲಾಸ್ಟಿಕ್ ಮುಕ್ತ ಕುಂದಾಪುರ: ಪರಿಸರ ಸ್ನೇಹಿ ಬಟ್ಟೆಯ ಚೀಲಗಳ ಪ್ರದರ್ಶನ ಹಾಗೂ ಮಾರಾಟ

ಅಂದ ಹಾಗೆ ಈ ಸಂಸ್ಥೆಯಿಂದ ತಯಾರಾದ ಬಟ್ಟೆ ಚೀಲಗಳು ಕುಂದಾಪುರದಲ್ಲಿ ಲಭ್ಯವಿದೆ.

ಸ್ಥಳ: ರಮಾನಂದ ಭಟ್ ವಠಾರ, ರಾಮಮಂದಿರ ಮಾರ್ಗ, ವಿಜಯ ಗಾರ್ಮೆಂಟ್ಸ್ ಎದುರು, ಹೊಸ ಬಸ್ಟ್ಯಾಂಡ್ ಹತ್ತಿರ, ಕುಂದಾಪುರ
ಸಮಯ: ಬೆಳಿಗ್ಗೆ 10 ರಿಂದ 12-30 ಸಂಜೆ: 3 ರಿಂದ 6
ದಿನಾಂಕ: 22, 23 ನವೆಂಬರ್ (ಶುಕ್ರವಾರ, ಶನಿವಾರ)
ವಿ.ಸೂ: ಬಟ್ಟೆ ಚೀಲ ಹೊಲಿದವರಿಗೆ, ಮಾರಾಟ ಮಾಡಿದವರಿಗೆ, ಯೋಗ್ಯ ಸಂಭಾವನೆಯನ್ನು ನೀಡಲಾಗುತ್ತಿದೆ.
2 ಕೆ.ಜಿ. ಹಳೆ ನ್ಯೂಸ್ ಪೇಪರ್, ಮ್ಯಾಗಜೀನ್ ನೀಡಿದಲ್ಲಿ ರೂ. 20ರ ಒಂದು ಬಟ್ಟೆಯ ಚೀಲವನ್ನು ಉಚಿತವಾಗಿ ನೀಡುತ್ತೆವೆ.
1ಕೆ.ಜಿ. ಪ್ಲಾಸ್ಟಿಕ್ ಬ್ಯಾಗುಗಳನ್ನು ನೀಡಿದಲ್ಲಿ ರೂ. 20ರ ಬಟ್ಟೆಯ ಚೀಲವನ್ನು ಉಚಿತವಾಗಿ ನೀಡುತ್ತೆವೆ.
2ಕೆ.ಜಿ. ಉಪಯೋಗಿಸಿದ ಬಿಸ್ಲೇರಿ ಇತರ ನೀರಿನ ಬಾಟಲ್ ಗಳನ್ನು ನೀಡಿದ್ದಲ್ಲಿ ರೂ. 20ರ ಬಟ್ಟೆಯ ಚೀಲವನ್ನು ಉಚಿತವಾಗಿ ನೀಡಲಾಗುವುದು.
ಮಾಹಿತಿಗಾಗಿ: 9869921397

ನಾವು ನಮ್ಮ ಪರಿಸರವನ್ನು ರಕ್ಷಿಸುವ ಕೆಲಸ ಈ ಬಟ್ಟೆ ಚೀಲಗಳಿಂದಲೇ ಆರಂಭವಾಗಲಿ ಪ್ಲಾಸ್ಟಿಕ್ ಬಿಡಿ. ಇಂದೇ ಬಟ್ಟೆ ಚೀಲ ಕೊಂಡುಕೊಳ್ಳಿ