ಉಡುಪಿ: ದೆಂದೂರುಕಟ್ಟೆ ಮನೋಜ್ ಬಾರ್ ಮಾಲೀಕ, ಗ್ರಾಮೀಣ ಬಂಟರ ಸಂಘದ ಮಾಜಿ ಅಧ್ಯಕ್ಷ ಸಕಾರಾಮ್ ಶೆಟ್ಟಿ ನಿಧನ

ಉಡುಪಿ: ಉದ್ಯಮಿ, ದೆಂದೂರುಕಟ್ಟೆ ಮನೋಜ್ ಬಾರ್ ಮಾಲೀಕ, ಗ್ರಾಮೀಣ ಬಂಟರ ಸಂಘದ ಮಾಜಿ ಅಧ್ಯಕ್ಷ ಸಕಾರಾಮ್ ಶೆಟ್ಟಿ(65) ಅಲ್ಪಕಾಲದ ಅಸೌಖ್ಯದಿಂದ ಚಿಕಿತ್ಸೆ ಫಲಕಾರಿಯಾಗದೆ ಇಂದು ನಿಧನರಾಗಿದ್ದಾರೆ.

ದೊಂದೂರುಕಟ್ಟೆ, ಮಣಿಪುರ ಭಾಗದಲ್ಲಿ ಸಾಮಾಜಿಕ, ಧಾರ್ಮಿಕ, ಕ್ರೀಡಾ ಪ್ರೋತ್ಸಾಹಕರಾಗಿ ತನ್ನನ್ನು ತಾನು ತೊಡಗಿಸಿಕೊಂಡ ಸಕಾರಾಮ್ ಶೆಟ್ಟಿ ಅವರು ಕೊಡುಗೈ ದಾನಿಯಾಗಿದ್ದರು.

ದೆಂದೂರುಕಟ್ಟೆಯ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾಗಿ, ಖಾಸಗಿ ಬಸ್ ಮತ್ತು ಪೆಟ್ರೋಲ್ ಪಂಪ್ ಮಾಲಕರಾಗಿ, ಹಲವಾರು ಶಿಕ್ಷಣ ಸಂಸ್ಥೆಗಳಲ್ಲಿ ಆಡಳಿತ ಮಂಡಳಿ ಸದಸ್ಯರಾಗಿ ದುಡಿದಿದ್ದರು.

ಮೃತರು ಪತ್ನಿ ಓರ್ವ ಪುತ್ರ, ಪುತ್ರಿ ಸಹಿತ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.