ಉಡುಪಿ: ಉಪೇಂದ್ರ ಪೈ ಮೆಮೊರಿಯಲ್ ಕಾಲೇಜು (ಯುಪಿಎಂಸಿ), ಉಡುಪಿ ವತಿಯಿಂದ ವಿದ್ಯಾರ್ಥಿಗಳಿಗೆ ವೃತ್ತಿ ಮಾರ್ಗದರ್ಶನ ಒದಗಿಸುವ ಉದ್ದೇಶದಿಂದ ವಿಶೇಷ “Career Counselling” ಕಾರ್ಯಕ್ರಮವನ್ನು ಏಪ್ರಿಲ್ 18 ರಂದು ಬೆಳಿಗ್ಗೆ 9:30ರಿಂದ ಉಡುಪಿ ಕುಂಜಿಬೆಟ್ಟು ಉಪೇಂದ್ರ ಪೈ ಮೆಮೊರಿಯಲ್ ಕಾಲೇಜು ಕ್ಯಾಂಪಸ್‌ನಲ್ಲಿ ಆಯೋಜಿಸಲಾಗಿದೆ.
ಈ ಕಾರ್ಯಕ್ರಮವನ್ನು ವಿ ರೀಚ್ ಅಕಾಡೆಮೆ V Reach Academy, ಉಡುಪಿ ವತಿಯಿಂದ ನಡೆಸಲಾಗುತ್ತಿದ್ದು, Chartered Accountancy (CA), Company Secretary (CS) ಮತ್ತು Cost and Management Accounting (CMA) ಕ್ಷೇತ್ರಗಳಲ್ಲಿ ವೃತ್ತಿ ಅವಕಾಶಗಳ ಕುರಿತು ಸಮಗ್ರ ಮಾಹಿತಿ ನೀಡಲಾಗುತ್ತದೆ.
ವಿದ್ಯಾರ್ಥಿಗಳಿಗೆ ವೃತ್ತಿ ಸ್ಪಷ್ಟತೆ, ಮಾರ್ಗಸೂಚಿ ರೂಪರೇಖೆ, ತಜ್ಞರಿಂದ ಸಲಹೆಗಳು, ಕೋರ್ಸ್ ಆಯ್ಕೆ ಮತ್ತು ತಯಾರಿ ಕುರಿತು ಮಾರ್ಗದರ್ಶನ ನೀಡಲಾಗುತ್ತದೆ. ಜೊತೆಗೆ ವಾಣಿಜ್ಯ ಮತ್ತು ನಿರ್ವಹಣಾ ಕ್ಷೇತ್ರಗಳಲ್ಲಿ ಭವಿಷ್ಯದ ಅವಕಾಶಗಳ ಬಗ್ಗೆ ವಿವರಿಸಲಾಗುತ್ತದೆ.
ಕಾರ್ಯಕ್ರಮದ ನೋಂದಣಿ QR Code ಮೂಲಕ ಮಾಡಿಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ 7204824879 ಸಂಖ್ಯೆಯನ್ನು ಸಂಪರ್ಕಿಸಬಹುದು.

















