ಪ್ರತಿದಿನ ಸಂಜೆಯಾಗ್ತಿದ್ದ ಹಾಗೆ ಮನೆಯ ಗೃಹಿಣಿಯರಿಗೆ ಮುಖ್ಯವಾಗಿ ಕಾಡುವ ಚಿಂತೆ ಏನಂದ್ರೆ ನಾಳೆ ಬೆಳಗ್ಗಿನ ತಿಂಡಿಗೇನು ಮಾಡೋದು? ಮನೆಯ ಎಲ್ಲರ ತಲೆತಿಂದರೂ ಈ ಪ್ರಶ್ನೆಗೆ ಸಮಾಧಾನವಾದ ಉತ್ತರ ಸಿಗದೇ ಕೊನೆಗೆ ಮನೆಯೊಡತಿ ಅವಳಿಗೆ ತೋಚಿದಾ, ಸುಲಭವೆನಿಸಿದ ತಿಂಡಿಯನ್ನೇ ಮಾಡೋದು ಅನ್ನೋ ಸೀಕ್ರೆಟ್ ಮನೆಮಂದಿಗೆಲ್ಲಾ ಗೊತ್ತು. ಅದರಲ್ಲೂ ಗಂಡ, ಮಕ್ಕಳು, ಮನೆಯ ಹಿರಿಯರು ಎಲ್ಲರಿಗೂ ಒಪ್ಪೋ ತಿಂಡಿ ಮಾಡೋದು ಸವಾಲೇ ಸರಿ. ಇನ್ನು ಬ್ಯಾಚುಲರ್ಸ್ ಅಥವಾ ಕೆಲಸಕ್ಕೆ ಹೋಗೋ ಮಹಿಳೆಯರಿಗಂತೂ ಆದಷ್ಟು ಬೇಗ ರೆಡಿಯಾಗುವಂತಹಾ ತಿಂಡಿ ಲಿಸ್ಟ್ ಸಿಕ್ಕಿದ್ರೆ ಸ್ವರ್ಗ ಸಿಕ್ಕಂತೇ ಸರಿ.
ಹಾಗಾದ್ರೆ ಬನ್ನಿ ಬೆಳಗ್ಗಿನ ತಿಂಡಿಗೆ ಏನೇನ್ ಮಾಡ್ಬೋದು ನೋಡಣ
ದಿಢೀರ್ ರೆಸಿಪಿ
- ರವೆ ಇಡ್ಲಿ
- ಗೊಜ್ಜು ಅವಲಕ್ಕಿ
- ಮೊಸರವಲಕ್ಕಿ
- ತರಕಾರಿ- ಒಗ್ಗರಣೆ ಅವಲಕ್ಕಿ
- ಗೋಧಿ/ ಬಾಂಬೆ ರವೆ ಉಪ್ಪಿಟ್ಟು
- ಸಜ್ಜಿಗೆ-ಬಜಿಲು
- ಗೋಧಿ/ ಅಕ್ಕಿ ಶ್ಯಾವಿಗೆ ಉಪ್ಪಿಟ್ಟು
- ಸೀಮೆಅಕ್ಕಿ/ ಸಾಬಕ್ಕಿ ಒಗ್ಗರಣೆ
- ಮಂಡಕ್ಕಿ ಒಗ್ಗರಣೆ
- ಗೋಧಿ/ ರಾಗಿ ಹಿಟ್ಟು ಕದಡಿ ದೋಸೆ
- ಮೈದಾ ದೋಸೆ
- ರವೆ ದೋಸೆ
- ರವೆ/ ಸಜ್ಜಿಗೆ ರೊಟ್ಟಿ
- ಅಕ್ಕಿ ರೊಟ್ಟಿ
- ರಾಗಿ ರೊಟ್ಟಿ
- ಚಪಾತಿ
- ಪೂರಿ
- ಆಮ್ಲೆಟ್
- ಬ್ರೆಡ್ ಆಮ್ಲೆಟ್
ದೋಸೆ ಐಟಂ ಗಳು
- ಉದ್ದಿನ ದೋಸೆ
- ಉತ್ತಪ್ಪ
- ನೀರು ದೋಸೆ
- ಮಸಾಲಾ ದೋಸೆ
- ಅವಲಕ್ಕಿ ದೋಸೆ
- ಸಾದಾ ದೋಸೆ
- ಬ್ರೆಡ್ ದೋಸೆ
- ತರಕಾರಿ ದೋಸೆ
- ಸೊಪ್ಪಿನ ದೋಸೆ
- ಮಸಾಲಾ ನೀರುದೋಸೆ
- ಗೋಧಿ, ಜೋಳ, ರಾಗಿ ಮಿಕ್ಸ್ ದೋಸೆ
ರೈಸ್ ಐಟಂ
- ವಾಂಗಿಬಾತ್
- ತೊಂಡೆಕಾಯಿ ಬಾತ್
- ಘೀ ರೈಸ್
- ಆನಿಯನ್ ರೈಸ್
- ಟೊಮ್ಯಾಟೋ ರೈಸ್
- ಪುಳಿಯೋಗರೆ
- ಮಸಾಲಾ ರೈಸ್
- ತರಕಾರಿ ಬಾತ್
- ಬಿಸಿಬೇಳೆ ಬಾತ್
- ಚಿತ್ರಾನ್ನ
- ಫ್ರೈಡ್ ರೈಸ್
- ಒಗ್ಗರಣೆ ಅನ್ನ
- ಪಲಾವ್
- ಜೀರಾ ರೈಸ್
- ಬಿರಿಯಾನಿ
- ಗಂಜಿ
ಸ್ವಲ್ಪ ತಯಾರಿ ಬೇಡುವ ತಿಂಡಿಗಳು
- ಇಡ್ಲಿ- ವಡಾ
- ಕಡುಬು
- ಅಪ್ಪ/ಪಡ್ಡು/ಎರಿಯಪ್ಪ
- ಬಾಳೆ ಎಲೆ ಕಡುಬು
- ಹಲಸಿನ ಎಲೆ ಕೊಟ್ಟೆ ಕಡುಬು
- ಅಕ್ಕಿ ಒತ್ತು ಶ್ಯಾವಿಗೆ
- ಜೋಳದ ರೊಟ್ಟಿ
- ಅಕ್ಕಿ ಹಿಟ್ಟು ಉಕ್ಕರಿಸಿದ ರೊಟ್ಟಿ
- ಬನ್ಸ್
- ಸೂರ್ನಳ್ಳಿ
- ಸುರ್ಳಿ ಬಕ್ರಿ
- ಪರೋಟಾ(ಆಲೂ, ಮೆಂತ್ಯ, ಮಿಕ್ಸ್ಡ್ ವೆಜ್, ಪನೀರ್)
- ಮೊಳಕೆ ಬರಿಸಿದ ಕಾಳುಗಳ ಉಸಳಿ

















