Pan Card- ಪ್ಯಾನ್ ಕಾರ್ಡ್ ಸಂಬಂಧಿತ ನಿಯಮಗಳಲ್ಲಿ ಬದಲಾವಣೆ- ವ್ಯವಹಾರ ನಡೆಸುವ ಮುನ್ನ ಈ ವಿಷಯ ತಿಳಿದಿರಲಿ

ಪ್ಯಾನ್ ಕಾರ್ಡ್ (PAN Card) ಎಂದರೆ Permanent Account Number, ಇದು ಆದಾಯ ತೆರಿಗೆ ಇಲಾಖೆ ನೀಡುವ ಒಂದು ವಿಶಿಷ್ಟ ಗುರುತು ಸಂಖ್ಯೆ. ಒಬ್ಬ ವ್ಯಕ್ತಿಯ ಹಣಕಾಸು ವ್ಯವಹಾರಗಳಲ್ಲಿ ಪಾರ್ದರ್ಶಕತೆ ತರುವುದು, ತೆರಿಗೆ ವ್ಯವಸ್ಥೆಯನ್ನು ಸುವ್ಯವಸ್ಥಿತಗೊಳಿಸಲು ಹಾಗೂ ಆರ್ಥಿಕ ಅವ್ಯವಹಾರಗಳನ್ನು ತಡೆಗಟ್ಟಲು ಪ್ಯಾನ್ ಕಾರ್ಡ್ ಮುಖ್ಯ ಪಾತ್ರವಹಿಸುತ್ತದೆ. ಪ್ರಸ್ತುತ ಹೊಸ ಅದಾಯ ತೆರಿಗೆ ಕಾನೂನಿನ ಸೆಕ್ಷನ್ 159ನ್ನು (ಹಳೆಯ ಸೆಕ್ಷನ್ 114ಬಿ), ಯಂತೆ ಪ್ಯಾನ್ ಕಾರ್ಡ್ ಬಳಕೆಯ ಸಂದರ್ಭ ಹಾಗೂ ಆರ್ಥಿಕ ವ್ಯವಹಾರಗಳ ಮಿತಿಯಲ್ಲಿ ಹಲವಾರು ಬದಲಾವಣೆಗಳಾಗಿವೆ.

ನಗದು ಹಿಂಪಡೆಯುವಿಕೆ (Cash Withdrawal)

  • ಹಿಂದಿನ ಮಿತಿ: ₹20 ಲಕ್ಷ
  • ಹೊಸ ಮಿತಿ: ₹10 ಲಕ್ಷ (ವಾರ್ಷಿಕ)

ಒಂದು ಹಣಕಾಸು ವರ್ಷದಲ್ಲಿ ಇದನ್ನು ಮೀರಿದರೆ ಪ್ಯಾನ್ ಕಾರ್ಡ್ ಕಡ್ಡಾಯ

ನಗದು ಜಮಾ (Cash Deposit)

  • ಹಳೆಯ ಮಿತಿ: ದಿನಕ್ಕೆ ₹50,000 ಮೀರಿದರೆ ಪ್ಯಾನ್ ಕಡ್ಡಾಯ
  • ಹೊಸ ಮಿತಿ: ದಿನದ ಲೆಕ್ಕವಿಲ್ಲ, ಬದಲಿಗೆ ವರ್ಷಕ್ಕೆ ₹10 ಲಕ್ಷ ಮೀರಿದರೆ ಪ್ಯಾನ್ ಕಡ್ಡಾಯ

ಸ್ಥಿರಾಸ್ತಿ ವ್ಯವಹಾರ (Property Deal)

  • ಹಳೆಯ ಮಿತಿ: ₹10 ಲಕ್ಷ
  • ಹೊಸ ಮಿತಿ: ₹20 ಲಕ್ಷ

ಇದನ್ನು ಮೀರಿದರೆ ಪ್ಯಾನ್ ಕಡ್ಡಾಯ

ವಾಹನ ಖರೀದಿ/ಮಾರಾಟ (Vehicle Purchase/Sale)

  • ಹಿಂದಿನ ನೀತಿ: ಬಹುತೇಕ ಎಲ್ಲಾ ವಾಹನಗಳಿಗೆ ಕಡ್ಡಾಯವಿತ್ತು
  • ಹೊಸ ನೀತಿ: ₹5 ಲಕ್ಷ ಮೀರಿದರೆ ಮಾತ್ರ ಪ್ಯಾನ್ ನೀಡಿದರೆ ಸಾಕು
  • ಕೃಷಿ ಉದ್ದೇಶದ ಟ್ರ್ಯಾಕ್ಟರ್‌ಗಳಿಗೆ ವಿನಾಯಿತಿ ಇದೆ

ಹೋಟೆಲ್ / ಲಾಡ್ಜ್ ಪಾವತಿ

  • ಹಳೆಯ ಮಿತಿ: ₹50,000
  • ಹೊಸ ಮಿತಿ: ₹1 ಲಕ್ಷ