ಮಂಗಳೂರು: ಪದವಿ ಪೂರ್ವ ಶಿಕ್ಷಣ ಮಂಡಳಿ ನಡೆಸಿದ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ಪರೀಕ್ಷೆಯಲ್ಲಿ ಮಂಗಳೂರಿನ ಎಕ್ಸ್ಪರ್ಟ್ ಪದವಿ ಪೂರ್ವ ಕಾಲೇಜಿನ ನಂದನ್ ನಾಯಕ್ ಹಾಗೂ ಸಮನ್ಯೂ ಎಸ್. ಶೆಟ್ಟಿ ಅವರು 600ರಲ್ಲಿ 598 ಅಂಕಗಳನ್ನು ಪಡೆದು ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿದ್ದಾರೆ.
ಕಾಲೇಜಿನ ಇತರ ವಿದ್ಯಾರ್ಥಿಗಳಲ್ಲಿ ಐವರು ವಿದ್ಯಾರ್ಥಿಗಳು 596 ಅಂಕ, ಮೂವರು ವಿದ್ಯಾರ್ಥಿಗಳು 595 ಅಂಕ, ಐವರು ವಿದ್ಯಾರ್ಥಿಗಳು 594 ಅಂಕ, ಐವರು ವಿದ್ಯಾರ್ಥಿಗಳು 593 ಅಂಕ, ಆರು ವಿದ್ಯಾರ್ಥಿಗಳು 592 ಅಂಕ, ಆರು ವಿದ್ಯಾರ್ಥಿಗಳು 591 ಅಂಕ ಹಾಗೂ ಎಂಟು ವಿದ್ಯಾರ್ಥಿಗಳು 590 ಅಂಕಗಳನ್ನು ಪಡೆದು ಸಂಸ್ಥೆಯ ಒಟ್ಟಾರೆ ಶೈಕ್ಷಣಿಕ ಶ್ರೇಷ್ಠತೆಯನ್ನು ತೋರಿಸಿದ್ದಾರೆ.
ಒಟ್ಟು 1,569 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಎಲ್ಲ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಶೇ.99ಕ್ಕಿಂತ ಅಧಿಕ ಅಂಕಗಳನ್ನು 11 ವಿದ್ಯಾರ್ಥಿಗಳು ಪಡೆದಿದ್ದಾರೆ. ಶೇ.98ಕ್ಕಿಂತ ಅಧಿಕ ಅಂಕಗಳನ್ನು 77 ವಿದ್ಯಾರ್ಥಿಗಳು, ಶೇ.97ಕ್ಕಿಂತ ಅಧಿಕ ಅಂಕಗಳನ್ನು 173 ವಿದ್ಯಾರ್ಥಿಗಳು, ಶೇ.96ಕ್ಕಿಂತ ಅಧಿಕ ಅಂಕಗಳನ್ನು 325 ವಿದ್ಯಾರ್ಥಿಗಳು ಹಾಗೂ ಶೇ.95ಕ್ಕಿಂತ ಅಧಿಕ ಅಂಕಗಳನ್ನು 497 ವಿದ್ಯಾರ್ಥಿಗಳು ಪಡೆದಿದ್ದಾರೆ.
ಕಾಲೇಜಿನ ಅಧ್ಯಕ್ಷ ಪ್ರೊ. ನರೇಂದ್ರ ಎಲ್. ನಾಯಕ್ ಎಲ್ಲರಿಗೂ ಶುಭಹಾರೈಸಿದ್ದಾರೆ.

















