ಮೂಡುಬಿದಿರೆ: ಆಳ್ವಾಸ್ ಪದವಿಪೂರ್ವ ಕಾಲೇಜು ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ 2026ರಲ್ಲಿ ಸಾಧನೆಗೈದಿದ್ದಾರೆ. ರಾಜ್ಯದ ರ‍್ಯಾಂಕ್ ಪಟ್ಟಿಯ ಟಾಪ್ 10ರಲ್ಲಿ 95 ವಿದ್ಯಾರ್ಥಿಗಳಿದ್ದು, ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ದಿಶಾ 600ರಲ್ಲಿ 600 ಅಂಕಗಳನ್ನು ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದಾಳೆ. ವಿಜ್ಞಾನ ವಿಭಾಗದಲ್ಲಿ ರಕ್ಷಿತಾ ಮಂಜುನಾಥ್ ಎಸ್ 598 ಅಂಕಗಳನ್ನು ಪಡೆದು ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿರುತ್ತಾರೆ.
ಒಟ್ಟು ಫಲಿತಾಂಶದಲ್ಲೂ ಮೇಲುಗೈ
687 ವಿದ್ಯಾರ್ಥಿಗಳು 95% ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದ್ದು, 1557 ವಿದ್ಯಾರ್ಥಿಗಳು 90% ಕ್ಕಿಂತ ಅಧಿಕ, 1892 ವಿದ್ಯಾರ್ಥಿಗಳು 85% ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದ್ದಾರೆ. 285 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಪಲ್ಲವಿ ಕೆ.ಸಿ (597), ಅಂಕಿತಾ ಬಸಪ್ಪ ಕೊನ್ನೂರ (596), ದಿಶಾ ಎಚ್ ಶೆಟ್ಟಿ (596), ಜ್ಞಾನಶ್ರೀ ಡಿ ಅರಳ (596), ಆದರ್ಶ್ ಬಾಲಚಂದ್ರ ಹೆಗಡೆ (596), ಲಿಜ್ವಿತಾ ವರ್ಜೀನಿಯಾ ಡಿ ಮೆಲ್ಲೋ (596), ನೇಹಾ ಪಿ ಕಕರಡ್ಡಿ (596), ಐಶ್ವರ್ಯ (595), ಮಾನವಿ ಡಿ ಎಸ್ (595), ನಿರಾಳಿ ಹೆಗ್ಗರ್ (595), ಜಶ್ ಕಾವೇರಿಯಪ್ಪ ಎ.ಎಂ (595), ವೈಷ್ಣವಿ ರಾವ್ (595), ಅಕ್ಷಯಕುಮಾರ್ ಸೋಮಶೇಖರ ಗುಗ್ಗಾರಿ (595) ಅಂಕಗಳನ್ನು ಪಡೆದು ಸಾಧನೆ ಮೆರೆದಿದ್ದಾರೆ.
ವಿಷಯವಾರು ಶತಪ್ರತಿಶತ ಅಂಕಗಳು
ಗಣಿತ – 199, ಸಂಸ್ಕೃತ – 122, ಬಿಸಿನೆಸ್ ಸ್ಟಡೀಸ್ – 86, ಕಂಪ್ಯೂಟರ್ ಸೈನ್ಸ್ – 86, ಭೌತಶಾಸ್ತ್ರ – 85, ಕನ್ನಡ – 82, ಬೇಸಿಕ್ ಮ್ಯಾಥ್ಸ್ – 54, ಅಕೌಂಟೆನ್ಸಿ – 53, ಜೀವಶಾಸ್ತ್ರ – 49, ಸಂಖ್ಯಾಶಾಸ್ತ್ರ – 45, ಅರ್ಥಶಾಸ್ತ್ರ – 36, ರಸಾಯನಶಾಸ್ತ್ರ – 21, ಹಿಂದಿ – 13, ಎಲೆಕ್ಟ್ರಾನಿಕ್ಸ್ – 6, ಇಂಗ್ಲೀಷ್ – 3, ಸಮಾಜಶಾಸ್ತ್ರ – 2, ರಾಜ್ಯಶಾಸ್ತ್ರ – 1, ಅರೇಬಿಕ್ – 1 ವಿದ್ಯಾರ್ಥಿಗಳು ನೂರಕ್ಕೆ ನೂರು ಅಂಕಗಳನ್ನು ಗಳಿಸಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಅಧ್ಯಾಪಕ ವೃಂದ ಪ್ರಶಂಸಿಸಿದ್ದಾರೆ.















