ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜು: ದ್ವಿತೀಯ ಪಿಯುಸಿಯಲ್ಲಿ ಶೇ.100 ಫಲಿತಾಂಶ, ರಾಜ್ಯದ ಟಾಪ್ 10ರಲ್ಲಿ 35 ವಿದ್ಯಾರ್ಥಿಗಳು

ವಿಜ್ಞಾನ ವಿಭಾಗದಲ್ಲಿ ಸಾಧನೆ


ವಿದ್ಯಾರ್ಥಿನಿಯರಾದ ಪ್ರಾರ್ಥನಾ ಪೈ ಹಾಗೂ ಇಂಚರಾ ಸಿ. ಪೂಜಾರಿ (596 ಅಂಕ) ದೊಂದಿಗೆ ರಾಜ್ಯದಲ್ಲಿ 4ನೇ ರ‍್ಯಾಂಕ್ ಪಡೆದಿದ್ದಾರೆ. ಅಕ್ಷಯ್ ಅಶ್ವಿನ್ ಪೈ (595) 5ನೇ ರ‍್ಯಾಂಕ್, ಪ್ರವೀಣಾ ಪೈ, ದೀಕ್ಷಾ ವಿ. ಕಾಮತ್ ಮತ್ತು ಶ್ರೀನಿಧಿ (593) 7ನೇ ರ‍್ಯಾಂಕ್, ಕೌಸ್ತುಬಾ, ವಸಂತ್ ಭಟ್, ವರ್ಷ ಕೆ., ಪ್ರತಿಕ್ಷಿತಾ, ರೇಖಾ ಎಲ್ ಮತ್ತು ಕ್ಷಿಪಾಲಿ (592) 8ನೇ ರ‍್ಯಾಂಕ್, ವಿಭವ್ ಮೇಲಾಡಿ ಹಾಗೂ ವಿಜೇತಾ ಆರ್. ಭಟ್ (591) 9ನೇ ರ‍್ಯಾಂಕ್, ಧನ್ಯಾ ಜೆ. ಪಟಗಾರ್, ಮೋನಿಶಾ ಪಿ.ವಿ ಮತ್ತು ರಚನಾ (590) 10ನೇ ರ‍್ಯಾಂಕ್ ಗಳಿಸಿದ್ದಾರೆ.

ವಾಣಿಜ್ಯ ವಿಭಾಗದಲ್ಲಿ ಸಾಧನೆ


ಬಿ. ಶ್ರೀಲಕ್ಷ್ಮಿ ವಿ. ಅಡಿಗ ಹಾಗೂ ಸಾನಿಕಾ (596) ಅಂಕಗಳೊಂದಿಗೆ 5ನೇ ರ‍್ಯಾಂಕ್ ಪಡೆದಿದ್ದಾರೆ. ರಾಜೇಂದ್ರ ಭಟ್ ಮತ್ತು ಶ್ರಾವ್ಯ (595) 6ನೇ ರ‍್ಯಾಂಕ್, ಧನ್ಯಾ ಭಟ್, ಹರ್ಷಿತಾ ಪೂಜಾರಿ, ಕೆ.ಪಿ. ಶಾನ್ವಿ ಮತ್ತು ಸಮೀಕ್ಷಾ (594) 7ನೇ ರ‍್ಯಾಂಕ್, ತನುಶ್ರೀ ರವಿ ಪೂಜಾರಿ, ಮೇನಕಾ ಮತ್ತು ಮೊಹಮ್ಮದ್ ಹುಝೈಫಾ (593) 8ನೇ ರ‍್ಯಾಂಕ್, ನಿಕಿತಾ, ದಿಶಾ ಎಸ್ ಮತ್ತು ರಾಘವೇಶ್ ಭಟ್ (592) 9ನೇ ರ‍್ಯಾಂಕ್, ಕೀರ್ತನಾ, ಪ್ರಜ್ಞಾ, ಪ್ರತೀಕ್ಷಾ ಮತ್ತು ಸಮೀಕ್ಷಾ ಪೂಜಾರಿ (591) 10ನೇ ರ‍್ಯಾಂಕ್ ಗಳಿಸಿದ್ದಾರೆ.

ಒಟ್ಟು 538 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಅವರಲ್ಲಿ 457 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಹಾಗೂ 81 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ವಿಷಯವಾರು ಶತಪ್ರತಿಶತ ಅಂಕಗಳು


ಸಂಸ್ಕೃತ – 94, ಗಣಿತಶಾಸ್ತ್ರ – 49, ಕಂಪ್ಯೂಟರ್ ಸೈನ್ಸ್ – 42, ವ್ಯವಹಾರ ಅಧ್ಯಯನ – 40, ಲೆಕ್ಕಶಾಸ್ತ್ರ – 26, ಭೌತಶಾಸ್ತ್ರ – 20, ಅರ್ಥಶಾಸ್ತ್ರ – 13, ಕನ್ನಡ – 11, ಇಂಗ್ಲೀಷ್ – 4, ರಸಾಯನಶಾಸ್ತ್ರ – 2, ಜೀವಶಾಸ್ತ್ರ – 2, ಹಿಂದಿ – 1 ವಿದ್ಯಾರ್ಥಿಗಳು ನೂರಕ್ಕೆ ನೂರು ಅಂಕಗಳನ್ನು ಗಳಿಸಿದ್ದಾರೆ. ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು ಮತ್ತು ಉಪನ್ಯಾಸಕ ವೃಂದ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.