ಸೆಕೆಂಡ್ ಪಿಯುಸಿ ಜಿಲ್ಲಾವಾರು ಫಲಿತಾಂಶ; ಉಡುಪಿ ಪ್ರಥಮ, ಯಾದಗಿರಿ ಕೊನೆಯ ಸ್ಥಾನ

ಬೆಂಗಳೂರು: ಈ ಬಾರಿ ದ್ವಿತೀಯ ಪಿಯುಸಿಯಲ್ಲಿ ದಾಖಲೆಯ ಫಲಿತಾಂಶ ಬಂದಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಶೇಕಡಾ 13 ರಷ್ಟು ಹೆಚ್ಚಳವಾಗಿದೆ. ಜಿಲ್ಲಾವಾರು ಫಲಿತಾಂಶದಲ್ಲಿ ಉಡುಪಿ ಎಂದಿನಂತೆ ಪ್ರಥಮ ಸ್ಥಾನ ಕಾಯ್ದುಕೊಂಡರೆ, ದಕ್ಷಿಣ ಕನ್ನಡ, ಕೊಡಗು, ವಿಜಯಪುರ, ಉತ್ತರ ಕನ್ನಡ ನಂತರದ ಸ್ಥಾನ ಪಡೆದಿವೆ. ಕಲಾ ವಿಭಾಗದಲ್ಲಿ ಶೇಕಡಾ 71, ವಾಣಿಜ್ಯ ವಿಭಾಗದಲ್ಲಿ ಶೇಕಡಾ 88, ವಿಜ್ಞಾನ ವಿಭಾಗದಲ್ಲಿ ಶೇಕಡಾ 92 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಗ್ರಾಮೀಣ ಭಾಗದಲ್ಲಿ ಫಲಿತಾಂಶವು ಶೇಕಡಾ 19 ರಷ್ಟು ಹೆಚ್ಚಳವಾಗಿದೆ.

2026ರ ದ್ವಿತೀಯ ಪಿಯುಸಿ ಜಿಲ್ಲಾವಾರು ಫಲಿತಾಂಶ ಹೀಗಿದೆ

ಶ್ರೇಣಿಜಿಲ್ಲೆಉತ್ತೀರ್ಣ ಪ್ರಮಾಣ (ಶೇಕಡಾವಾರು)
1ಉಡುಪಿ96.39
2ದಕ್ಷಿಣ ಕನ್ನಡ96.35
3ಕೊಡಗು92.34
4ವಿಜಯಪುರ92.00
5ಉತ್ತರ ಕನ್ನಡ91.78
6ಬೆಂಗಳೂರು ಗ್ರಾಮಾಂತರ91.00
7ಚಿಕ್ಕಮಗಳೂರು90.80
8ಬೆಂಗಳೂರು ದಕ್ಷಿಣ90.55
9ಚಿಕ್ಕಬಳ್ಳಾಪುರ90.24
10ಬೆಂಗಳೂರು ಉತ್ತರ90.05
11ಹಾಸನ89.71
12ಮಂಡ್ಯ88.85
13ರಾಮನಗರ87.90
14ಶಿವಮೊಗ್ಗ87.62
15ಕೋಲಾರ87.38
16ತುಮಕೂರು86.89
17ಕೊಪ್ಪಳ86.80
18ಮೈಸೂರು84.80
19ಚಾಮರಾಜನಗರ84.68
20ಬೀದರ್84.61
21ಬಾಗಲಕೋಟೆ84.12
22ಹಾವೇರಿ84.11
23ಧಾರವಾಡ83.31
24ಚಿಕ್ಕೋಡಿ83.10
25ದಾವಣಗೆರೆ81.99
26ಬೆಳಗಾವಿ80.32
27ಚಿತ್ರದುರ್ಗ79.12
28ಬಳ್ಳಾರಿ78.69
29ಕಲಬುರಗಿ76.97
30ಗದಗ76.65
31ರಾಯಚೂರು74.09
32ಯಾದಗಿರಿ71.21