ಹೆಬ್ರಿ: ಚಾಣಕ್ಯ ನಲಿ ಕಲಿ ಬೇಸಗೆ ಶಿಬಿರಕ್ಕೆ ಭಗವದ್ಗೀತೆಯನ್ನು 4 ಭಾಷೆಗಳಲ್ಲಿ 18 ಬಾರಿ ಬರೆದ ಬಾಲ ಸಾಧಕನಿಂದ ಚಾಲನೆ.

ಹೆಬ್ರಿ: ನಾನು 4 ಭಾಷೆಗಳಲ್ಲಿ 18 ಬಾರಿ ಭಗವದ್ಗೀತೆಯನ್ನು ಬರೆಯಲು ಸಾಧ್ಯವಾಗಬೇಕಾದರೆ ನನ್ನ ತಂದೆಯ ಪ್ರೇರಣೆ, ಪ್ರೋತ್ಸಾಹ ಮತ್ತು ಅವರು ಕಲಿಸಿದ ಉತ್ತಮ ಸಂಸ್ಕಾರದಿಂದ ಕಿರಿಯ ವಯಸ್ಸಿನಲ್ಲಿ ಸಾಧನೆ ಮಾಡಲು ಸಾಧ್ಯವಾಯಿತು ಎಂದು ಬಾಲ ಸಾಧಕ ಭಗವದ್ಗೀತೆಯನ್ನು 4 ಭಾಷೆಗಳಲ್ಲಿ 18 ಬಾರಿ ಬರೆದ ಅದ್ವೈತ್ ಹೇಳಿದರು.

ಅವರು ಹೆಬ್ರಿ ಚಾಣಕ್ಯ ಎಜುಕೇಷನ್ ಮತ್ತು ಕಲ್ಚರಲ್ ಅಕಾಡೆಮಿ ಆಶ್ರಯದಲ್ಲಿ ಏ.19ರ ವರೆಗೆ ಹೆಬ್ರಿ ಎಸ್.ಆರ್.ಸ್ಕೂಲ್ ಬಳಿ ಇರುವ ಚಾಣಕ್ಯ ಟ್ಯುಟೋರಿಯಲ್ ಕಾಲೇಜಿನಲ್ಲಿನಡೆಯುತ್ತಿರುವ ಚಾಣಕ್ಯ ನಲಿ ಕಲಿ 11ನೇ ವರ್ಷದ ವೈವಿಧ್ಯಮಯ ಬೇಸಗೆ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಪೋಷಕರೇ ಮಕ್ಕಳ ಪ್ರತಿಭೆಗೆ ಅವಕಾಶ ಕಲ್ಪಿಸಿ: ರಜಾ ಸಮಯವನ್ನು ಮೊಬೈಲ್ ಟಿವಿ ನೋಡುತ್ತಾ ಕಾಲಹರಣ ಮಾಡುವ ಬದಲು ಇಂತಹ ವೈವಿಧ್ಯಮಯ ಬೇಸಗೆ ಶಿಬಿರದಲ್ಲಿ ಮಕ್ಕಳನ್ನು ಸೇರಿಸುವುದರ ಮೂಲಕ ಅವರ ವ್ಯಕ್ತಿತ್ವ ವಿಕಸವಾಗಲು ಸಾಧ್ಯ ಎಂದು ಎಸ್ .ಆರ್ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಚ್.ನಾಗರಾಜ್ ಶೆಟ್ಟಿ ಹೇಳಿದರು.

ಚಾಣಕ್ಯ ಸಂಸ್ಥೆಯ ಪರಿಶ್ರಮ ಶ್ಲಾಘನೀಯ: ಬಾಲ ಸಾಧಕ ಅದ್ವೈತ್ ತಂದೆ ರಾಘವೇಂದ್ರ ಅವರು ಮಾತನಾಡಿ ಕಳೆದ 11 ವರ್ಷಗಳಿಂದ ಚಾಣಕ್ಯ ಸಂಸ್ಥೆ ಎಲ್ಲಾ ಕಲಾ ಪ್ರಕಾರಗಳನ್ನು ಒಂದೇ ಸೂರಿ ನಡಿ ತರಬೇತಿ ನೀಡುತ್ತಾ ರಜಾ ಸಮಯದಲ್ಲಿ ಮಕ್ಕಳಿಗೆ ಉತ್ತಮ ಬದುಕು ಶಿಕ್ಷಣ ನೀಡುವ ಸಂಸ್ಕಾರ ಬರೀತ ತರಬೇತಿ ನೀಡುವ ಮೂಲಕ ಮಾದರಿ ಕಾರ್ಯ ಮಾಡುತ್ತಿದ್ದು ಸಂಸ್ಥೆಯ ಅಧ್ಯಕ್ಷ ಉದಯ್ ಕುಮಾರ್ ಶೆಟ್ಟಿ ಮತ್ತು ವೀಣಾ ಶೆಟ್ಟಿಯವರ ಪರಿಶ್ರಮ ಶ್ಲಾಘನೀಯ ಎಂದರು ಅಧ್ಯಕ್ಷತೆಯನ್ನು ಚಾಣಕ್ಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಹೆಬ್ರಿ ಉದಯ್ ಕುಮಾರ್ ಶೆಟ್ಟಿ ವಹಿಸಿ ಮಾತನಾಡಿ ಗ್ರಾಮೀಣ ಪ್ರದೇಶದ ಹಲವಾರು ತೆರೆಮರೆಯ ಪ್ರತಿಭೆಗಳನ್ನು ನಾಡಿಗೆ ಪರಿಚಯಿಸಿದ ಹೆಮ್ಮೆ ಸಂಸ್ಥೆಗೆ ಇದೆ. ಅವಕಾಶ ಮಾಡಿಕೊಟ್ಟವರನ್ನೆ ಅಪರಿಚಿತರಂತೆ ಕಾಣುವ ಮನಸ್ಥಿತಿ ಒಳ್ಳೆಯದಲ್ಲ. ಮಕ್ಕಳು ಸಿಕ್ಕ ಅವಕಾಶವನ್ನು ಬಳಸಿಕೊಂಡು ತಮಗೆ ಮಾರ್ಗದರ್ಶನ ಮಾಡಿದವರನ್ನು ಸದಾ ನೆನಪಿಸಿಕೊಂಡಾಗ ತನ್ನ ಕ್ಷೇತ್ರದಲ್ಲಿ ಸಾಧನೆ ಮತ್ತು ಬೆಳವಣಿಗೆ ಸಾಧ್ಯ. ವೈವಿಧ್ಯಮಯ ಬೇಸಿಗೆ ಶಿಬಿರ ಏ. 19 ರವರಿಗೆ ನಡೆಯಲಿದ್ದು ಶಿಬಿರದಲ್ಲಿ ಭಾಗವಹಿಸಲು ಇನ್ನೂ ಅವಕಾಶ ಇದೆ ಎಂದರು. ಹೆಬ್ರಿ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ನವೀನ್ ಕೆ. ಅಡ್ಯಂತಾಯ ಚಿಕ್ಕ ಚಿಕ್ಕ ಮಕ್ಕಳನ್ನ ಬೆಳಿಗ್ಗೆಯಿಂದ ಸಂಜೆ ತನಕ ನೋಡಿಕೊಳ್ಳುವುದು ಸುಲಭದ ಮಾತಲ್ಲ ಎಂದರು.

ಸಮಾರಂಭದಲ್ಲಿ ಸೀತಾನದಿ ಸೌಖ್ಯಯೋಗ ಟ್ರಸ್ಟ್ ಅಧ್ಯಕ್ಷ ಸೀತಾನದಿ ವಿಠ್ಠಲ ಶೆಟ್ಟಿ , ಬ್ರಹ್ಮಾವರ ತಾಲೂಕು ದೈಹಿಕ ಶಿಕ್ಷಣ ಪರೀಕ್ಷಾಧಿಕಾರಿ ನಿತ್ಯಾನಂದ ಶೆಟ್ಟಿ, ಯಕ್ಷಗಾನ ಗುರು ಪ್ರಕಾಶ್ ನಾಯಕ್ ಮೊದಲಾದವರು ಉಪಸ್ಥಿತರಿದ್ದರು. ಚಾಣಕ್ಯ ಸಂಸ್ಥೆಯ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ ಸ್ವಾಗತಿಸಿ, ಪ್ರಾಂಶುಪಾಲೇ ವೀಣಾ ಯು.ಶೆಟ್ಟಿ ವಂದಿಸಿದರು.