ಮೂಡುಅಲೆವೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಪ್ರಧಾನ ಅರ್ಚಕ ಮೋಹನ ತಂತ್ರಿ ನಿಧನ
ಉಡುಪಿ: ಮೂಡು ಅಲೆವೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಪ್ರಧಾನ ಅರ್ಚಕರಾದ ಮೋಹನ ತಂತ್ರಿ (82) ಬುಧವಾರ ನಿಧನರಾದರು.
ಮಂಚಿಕೆರೆ ಶ್ರೀ ವಾಸುಕಿ ನಾಗಯಕ್ಷಿ ಸನ್ನಿಧಾನದಲ್ಲಿಯೂ ಹಲವು ವರ್ಷಗಳಿಂದ ಮುಖ್ಯ ತಂತ್ರಿಗಳಾಗಿ ವೈದಿಕ, ಧಾರ್ಮಿಕ ಆಚರಣೆಗಳಿಗೆ ಮಾರ್ಗದರ್ಶಕರಾಗಿದ್ದರು. ಮೃತರು ಪತ್ನಿ, ಪುತ್ರ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.