ಪೋಸ್ಟ್ ಆಫೀಸ್ ಅಂತಂದ್ರೆ ಕೇವಲ ಮನೆ ಮನೆಗೆ ಅಂಚೆ, ಮನಿ ಆರ್ಡರ್ ಹಂಚುವ ಆಫೀಸ್ ಎಂಬ ಮನೋಭಾವ ಇನ್ನೂ ಹಲವರಲ್ಲಿದೆ. ಆದರೆ ಇಲ್ಲಿರುವಂತಹಾ ಲಾಭದಾಯಕ ಹಣದ ಉಳಿತಾಯ ಯೋಜನೆಗಳ ಬಗ್ಗೆ ಹೆಚ್ಚಿನವರಿಗೆ ಅರಿವಿಲ್ಲ. ಅದರಲ್ಲೂ ನಿಮ್ಮ ಮರಣಾ ನಂತರವೂ ನಿಮ್ಮ ಕುಟುಂಬದವರಿಗೆ ಹಣ ಸಿಗುವಂತಹಾ ಈ ಇನ್ಸೂರೆನ್ಸ್ ಪ್ಲಾನ್ ಬಗ್ಗೆ ನೀವು ಚಿಂತಿಸಲೇಬೇಕು. ನಿಮ್ಮ ಕುಟುಂಬದಲ್ಲಿ ನೀವೊಬ್ಬರೇ ದುಡಿಯುವವರಾಗಿದ್ರೆ ಖಂಡಿತಾ ಪೋಸ್ಟಲ್ ಲೈಫ್ ಇನ್ಸೂರೆನ್ಸ್ ನೀವು ಮಾಡಿಸಲೇಬೇಕು.
ಏನಿದು ಪೋಸ್ಟಲ್ ಲೈಫ್ ಇನ್ಸೂರೆನ್ಸ್
ಗ್ರಾಮೀಣ ಜನತೆಗಾಗಿಯೇ, ಅಂಚೆ ಕಚೇರಿಯಲ್ಲಿ ಗ್ರಾಮೀಣ ಜೀವ ವಿಮೆ (Life insurance) ಎಂಬ ವಿಶೇಷ ಸೌಲಭ್ಯ ಇದೆ. ಅಲ್ಲದೇ ಸರ್ಕಾರಿ ಉದ್ಯೋಗಿಗಳಿಗೆ, ಯಾವುದೇ ಪದವೀಧರು, ಡಿಪ್ಲೊಮಾ, ಐಟಿಐ ಕಲಿತವರಿಗೆ ಪೋಸ್ಟಲ್ ಲೈಫ್ ಇನ್ಸೂರೆನ್ಸ್ ಇದೆ. ಈ ಎರಡೂ ಜೀವ ವಿಮೆಗಳಲ್ಲಿ ನಿಮಗೆ ಸಾಧ್ಯವಾದಷ್ಟು ಹಣವನ್ನು ಪ್ರತೀ ತಿಂಗಳೂ ನೀವು ಉಳಿತಾಯ ಮಾಡುತ್ತಾ ಹೋಗಬಹುದು ಹಾಗೂ ಈ ಹಣ ನೀವು ಬದುಕಿದ್ದರೆ ಮೊದಲೇ ನಿಗದಿಪಡಿಸಿದ ವಯಸ್ಸಿಗೆ ಬೊನಸ್ ನೊಂದಿಗೆ ನಿಮ್ಮ ಕೈ ಸೇರುತ್ತದೆ. ಆಕಸ್ಮಿಕವಾಗಿ ಮರಣ ಸಂಬಂಧಿಸಿದರೆ ನಿಮ್ಮ ನಾಮಿನೀ ಗೆ ನೀವು ಎಷ್ಟೇ ಹಣ ಕಟ್ಟಿದ್ದರೂ ಮೊದಲೇ ನಿಗದು ಪಡಿಸಿದ್ದ ಹಣ ನಿಮ್ಮ ನಾಮಿನೀಗೆ ದೊರೆಯುತ್ತದೆ.
ಈ ಇನ್ಸುರೆನ್ಸ್ ಸ್ಕೀಮ್ ನಲ್ಲಿ ಇಷ್ಟೇ ಹಣ ಕಟ್ಟಬೇಕೆಂಬ ಯಾವುದೇ ನಿಯಮವಿಲ್ಲ. ನಿಮ್ಮ ಅನುಕೂಲಕ್ಕೆ ತಕ್ಕಂತೆ ಪ್ರತಿ ತಿಂಗಳು/ ಮೂರು ತಿಂಗಳು/ ಆರು ತಿಂಗಳು/ ವರ್ಷಕ್ಕೊಮ್ಮೆ ಹಣ ಕಟ್ಟುವಂತೆ ಮಾಡಬಹುದು. ಆದರೆ ಒಮ್ಮೆ ನಿಗದಿಪಡಿಸಿದ ನಂತರ ಅಷ್ಟೇ ಹಣವನ್ನು ಪ್ರತಿ ಕಂತಿನಲ್ಲೂ ಕಟ್ಟಬೇಕಾಗುತ್ತದೆ.
ಅಗತ್ಯ ದಾಖಲೆಗಳು
ಆಧಾರ್ ಕಾರ್ಡ್ ಹಾಗೂ ಪಾನ್ ಕಾರ್ಡ್ ನ ಪ್ರತಿ, ಒಂದು ಫೋಟೋ
ನೀವು ಪಧವೀಧರರಾಗಿದ್ದರೆ ಪದವಿ ಪ್ರಮಾಣಪತ್ರ
ಸರ್ಕಾರಿ ನೌಕಕರಾಗಿದ್ದರೆ, ಸ್ಯಾಲರಿ ಸ್ಲಿಪ್ ಅಥವಾ ಗುರುತು ಚೀಟಿ
ವಿಶೇಷತೆಗಳು
- 18 ವರ್ಷ ದಿಂದ 55 ವರ್ಷದವರೆಗಿನ ಯಾರೂ ಕೂಡಾ ಈ ವಿಮೆಯನ್ನು ಹೊಂದಬಹುದು.
- ಇತರ ವಿಮಾ ಕಂಪೆನಿಗಳಿಗೆ ಹೋಲಿಸಿದರೆ, ನೀವು ಕಟ್ಟುವ ಹಣ ಕಡಿಮೆ ಆದರೆ ನಮ್ಮಿಂದ ನೀವು ಪಡೆಯುವ ಹಣ ಜಾಸ್ತಿ (ಕಡಿಮೆ ಪ್ರೀಮಿಯಂ, ಹೆಚ್ಚು ಬೋನಸ್)
- ಭಾರತ ಸರ್ಕಾರದಿಂದ ನಡೆಸಲ್ಪಡುವ ಏಕೈಕ ಮತ್ತು ಅತ್ಯಂತ ಸುರಕ್ಷಿತ ಜೀವ ವಿಮೆ ನಮ್ಮ ಅಂಚೆ ಇಲಾಖೆಯದ್ದು.
- ಮೂರು ವರ್ಷದ ನಂತರ ಸಾಲ ಪಡೆಯುವ ಸೌಲಭ್ಯವೂ ಇರುತ್ತದೆ.
- ಆದಾಯ ತೆರಿಗೆ ವಿನಾಯಿತಿ ಇದೆ.
- ದೇಶದ ಯಾವುದೇ ಅಂಚೆಕಚೇರಿಯಲ್ಲೂ ಕಟ್ಟಬಹುದು.
- ಗೂಗಲ್ ಪೇ ಹಾಗೂ ಫೋನ್ ಪೇ ಮೂಲಕ ನೀವು ಕುಳಿತಲ್ಲೇ ಕಂತು ಕಟ್ಟಬಹುದು
ಹೆಚ್ಚಿನ ಮಾಹಿತಿಗೆ ನಿಮ್ಮ ಸಮೀಪದ ಅಂಚೆ ಕಛೇರಿಯನ್ನು ತಡ ಮಾಡದೇ ಸಂಪರ್ಕಿಸಿ

















