ಪಂಪ್ವೆಲ್ ಮೇಲ್ಸೇತುವೆ ಕಾಮಗಾರಿ ಡಿಸೆಂಬರ್ ಅಂತ್ಯಕ್ಕೆ ಪೂರ್ಣ: ನಳಿನ್ ಭರವಸೆ

ಮಂಗಳೂರು: ಹತ್ತು ವರ್ಷಗಳಿಂದ ಕುಂಟುತ್ತಾ ಸಾಗಿದ್ದ ಪಂಪ್ವೆಲ್ ಮೇಲ್ಸೇತುವೆ ಕಾಮಗಾರಿ ಉದ್ಘಾಟನೆಗೆ ಮತ್ತೊಂದು ಗಡುವು ಸಿಕ್ಕಿದೆ. ನಾನಾ ರೀತಿಯ ಟೀಕೆ, ಟ್ರೋಲ್ ಅಪಹಾಸ್ಯಕ್ಕೆ ಗುರಿಯಾಗಿರುವ ಪಂಪ್ವೆಲ್ ಮೇಲ್ಸೇತುವೆ ಕಾಮಗಾರಿ ಡಿಸೆಂಬರ್ ಅಂತ್ಯಕ್ಕೆ ಪೂರ್ಣಗೊಂಡು, ಜನವರಿ ಮೊದಲ ವಾರದಲ್ಲಿ ಫ್ಲೈಓವರ್ ಉದ್ಘಾಟನೆಗೊಳ್ಳಿದೆ ಅಂತಾ ಸಂಸದ ನಳಿನ್ ಕುಮಾರ್ ಕಟೀಲ್ ಭರವಸೆ ಮತ್ತೆ ನೀಡಿದ್ದಾರೆ.
ಇಂದು ಪಂಪ್ವೆಲ್ ಮೇಲ್ಸೇತುವೆ ಕಾಮಗಾರಿ ಸ್ಥಳಕ್ಕೆ ಅಧಿಕಾರಿಗಳ ತಂಡ ಜೊತೆಗೆ ಭೇಟಿ ನೀಡಿ, ಪರಿಶೀಲನೆ ನಡೆಸಿ ಮಾತನಾಡಿದ ಅವರು, ಪಂಪ್ವೆಲ್ ಮೇಲ್ಸೇತುವೆ ಕಾಮಗಾರಿ ಡಿಸೆಂಬರ್ ಅಂತ್ಯಕ್ಕೆ ಪೂರ್ಣಗೊಳ್ಳಲಿದ್ದು, ಜನವರಿ ಮೊದಲ ವಾರದಲ್ಲಿ ಉದ್ಘಾಟನೆಗೊಳ್ಳಲಿದ್ದು, ಆ ಮೂಲಕ ವಾಹನ ಸಂಚಾರಕ್ಕೆ ಮುಕ್ತವಾಗಲಿದೆ ಎಂದರು.
ಆದ್ರೆ ಕಳೆದ ೧೦ ವರ್ಷದಿಂದ ಅನೇಕ ಬಾರಿ ಗಡುವು ನೀಡಿ ನಂತರ ಏನಾದರೂ ನೆಪ ಮುಂದುಡುತ್ತಿದ್ದ ನಳಿನ್ ಈ ಬಾರಿ ಕೆಲಸ ಪೂರ್ಣಗೊಳಿಸುತ್ತಾರಾ ಅಥವಾ ಹಿಂದಿನಂತೆ ನೆಪ ಹೇಳುತ್ತಾರೋ ಕಾದು ನೋಡಬೇಕಿದೆ.