ಮಣಿಪಾಲ: ಇತ್ತೀಚಿನ ಟಿ.ವಿ, ಮೊಬೈಲ್ ಹಾಗೂ ಇಂಟರ್‍ನೆಟ್ ಆಕರ್ಷಣೆಗಳು ಮಕ್ಕಳ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿವೆ. ಮಕ್ಕಳಲ್ಲಿ ಶಾರೀರಿಕ ಶ್ರಮದ ಬಗ್ಗೆ ಅರಿವೇ ಇಲ್ಲದಂತಾಗಿದೆ. ಇದನ್ನೆಲ್ಲ ತಪ್ಪಿಸುವ ಸಲುವಾಗಿ ಮಣಿಪಾಲದ ಶ್ರೀ ಶಾರದಾ ಇನ್ಸ್ಟಿಟ್ಯೂಟ್‍ನಲ್ಲಿ ದಿನಾಂಕ ಎಪ್ರಿಲ್ 6 ರಿಂದ ಎಪ್ರಿಲ್ 18ವರೆಗೆ “ಚಿಣ್ಣರ ಜಾಗರ” ಬೇಸಿಗೆ ಶಿಬಿರವನ್ನು 7 ರಿಂದ 14 ವರ್ಷದ ಒಳಗಿನ ಮಕ್ಕಳಿಗೆ ಆಯೋಜಿಸಲಾಗಿದೆ.
ಈ ಶಿಬಿರದಲ್ಲಿ ಕಥೆ, ಪ್ರಹಸನ, ಡಾನ್ಸ್, ಮುಖವಾಡ ಹಾಗೂ ಕ್ರಾಫ್ಟ್ ತಯಾರಿಕೆ, ಚಿತ್ರಕಲೆ, ಆಟೋಟ, ರಂಗೋಲಿ, ಯೋಗ, ಆಟೋಟ ಹಾಗೂ ಇನ್ನಿತರ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ. ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 99017225
ಸ್ಥಳ: ಕ್ರಿಸ್ಟಲ್ ಬಿeóïಹಬ್, ಒಂದನೇ ಮಹಡಿ, ಡಿಸಿ ಆಫೀಸ್ ಹತ್ತಿರ, ಮಣಿಪಾಲ
















