ಕುಂದಾಪುರ: ಎಂ.ಸಿ.ಎನ್ ನಿಂದ ಜಾಗೃತಿ ರ‍್ಯಾಲಿ.

ಕುಂದಾಪುರ: ಮೂಡ್ಲಕಟ್ಟೆ ಕಾಲೇಜ್ ಆಫ್ ನರ್ಸಿಂಗ್‌ನ ಎನ್‌ಎಸ್‌ಎಸ್ ಘಟಕ ಹಾಗೂ ಅಂಗದಾನ ಮತ್ತು ನಶಾಮುಕ್ತ ಅಭಿಯಾನ ಸಮಿತಿಗಳ ವತಿಯಿಂದ ಶುಕ್ರವಾರ ಅಂಗದಾನ ಮತ್ತು ನಶಾಮುಕ್ತ ಅಭಿಯಾನ ಕುರಿತು ಜಾಗೃತಿ ರ‍್ಯಾಲಿ ಆಯೋಜಿಸಲಾಯಿತು.

ಬಸ್ರೂರು ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಕಂಡ್ಲೂರುವರೆಗೆ ನಡೆದ ಈ ರ‍್ಯಾಲಿಗೆ ಡಾ. ಉಮೇಶ್ ನಾಯಕ್ (ವೈದ್ಯಾಧಿಕಾರಿ, ಪ್ರಾಥಮಿಕ ಆರೋಗ್ಯ ಕೇಂದ್ರ ಕೋಟೇಶ್ವರ), ಸಂತೋಷ್ ಕುಮಾರ್ (ಹೆಡ್ ಕಾನ್ಸ್ಟೇಬಲ್, ಕಂಡ್ಲೂರು ಪೊಲೀಸ್ ಠಾಣೆ), ಪ್ರೊ. ಜೆನ್ನಿಫರ್ ಫ್ರೀಡಾ ಮೆನೆಜಸ್ (ಪ್ರಾಂಶುಪಾಲರು), ಶ್ರೀಮತಿ ರೂಪಶ್ರೀ ಕೆ.ಎಸ್. (ಉಪ ಪ್ರಾಂಶುಪಾಲರು) ಹಾಗೂ ಎನ್‌ಎಸ್‌ಎಸ್ ಸಂಯೋಜಕರಾದ ಚಂದ್ರಶೇಖರ್ ಅವರು ರಿಬ್ಬನ್ ಕತ್ತರಿಸುವ ಮೂಲಕ ಚಾಲನೆ ನೀಡಿದರು.

ರ‍್ಯಾಲಿಯಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿ, ಅಂಗದಾನದ ಮಹತ್ವ ಹಾಗೂ ಮಾದಕ ಪದಾರ್ಥಗಳ ದುಷ್ಪರಿಣಾಮಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು. ಈ ಸಂದರ್ಭದಲ್ಲಿ ಸಮಾಜದಲ್ಲಿ ಆರೋಗ್ಯಕರ ಹಾಗೂ ಜವಾಬ್ದಾರಿಯುತ ಜೀವನಶೈಲಿಯನ್ನು ಅಳವಡಿಸಿಕೊಳ್ಳುವಂತೆ ಡಾ. ಉಮೇಶ್ ನಾಯಕ್ ರವರು ಕರೆ ನೀಡಿದರು.