ಸಶಸ್ತ್ರ ಸೀಮಾ ಬಲ ಪಡೆಯಲ್ಲಿದೆ ಭರ್ಜರಿ ಉದ್ಯೋಗಾವಕಾಶಗಳು: ಯಾರು ಅರ್ಜಿ ಸಲ್ಲಿಸಬಹುದು?

ಬೆಂಗಳೂರು: 10 ನೇ ತರಗತಿ ಪಾಸಾಗಿ ವಿವಿಧ ಕೌಶಲ್ಯ ಹೊಂದಿರುವವರಿಗೆ ಕೇಂದ್ರ ಗೃಹ ಇಲಾಖೆ ಅಡಿ ಕಾರ್ಯನಿರ್ವಹಿಸುವ ‘ಸಶಸ್ತ್ರ ಸೀಮಾ ಬಲ’ (ಎಸ್‌ಎಸ್‌ಬಿ) ಪಡೆಯಲ್ಲಿ ಒಟ್ಟು 827 ವಿವಿಧ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಆರಂಭಿಸಲಾಗಿದೆ. ಎಸ್‌ಎಸ್‌ಬಿಯಲ್ಲಿ ಈ ಹುದ್ದೆಗಳು ‘ಕಾನ್ಸ್‌ಟೆಬಲ್– ಟ್ರೇಡ್ಸ್‌ಮನ್’ ವಿಭಾಗದ ಹುದ್ದೆಗಳಾಗಿವೆ. ಅರ್ಹ ಪುರುಷ–ಮಹಿಳಾ ಅಭ್ಯರ್ಥಿಗಳು ತಮ್ಮ ಕೌಶಲ್ಯದ ಅನುಗುಣವಾಗಿ ಅರ್ಜಿ ಸಲ್ಲಿಸಬಹುದು.

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ವಯಸ್ಸಾಗಿರಬೇಕು, ಗರಿಷ್ಠ 27 ವರ್ಷ. ಕೆಲ ಹುದ್ದೆಗಳಿಗೆ 23 ವರ್ಷ ಗರಿಷ್ಠ ವಯೋಮಿತಿ ಇದೆ. ಅರ್ಜಿ ಸಲ್ಲಿಸುವಾಗ ಅಧಿಸೂಚನೆ ಪರಿಶೀಲಿಸಬೇಕು. ಮಿಸಲು ವರ್ಗದವರಿಗೆ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ.

ಮಾರ್ಚ್ 21 ರಿಂದ ಅರ್ಜಿ ಸಲ್ಲಿಕೆ ಪ್ರಾರಂಭವಾಗಿದ್ದು, ಇದೇ ಏಪ್ರಿಲ್ 20 ಕಡೆಯ ದಿನ.