ಬಂಟಕಲ್ ಇಂಜಿನಿಯರಿಂಗ್ ಕಾಲೇಜಿನ ಎಂ. ಬಿ. ಎ. ವಿದ್ಯಾರ್ಥಿಗಳಿಗೆ ಎಥಿನ್-2026’ರಲ್ಲಿ ಬಹುಮಾನ

ಉಡುಪಿ, ಬಂಟಕಲ್, 26 ಮಾರ್ಚ್ 2026: ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ದ್ವಿತೀಯ ವರ್ಷದ ಎಂ. ಬಿ. ಎ. ವಿದ್ಯಾರ್ಥಿಗಳಾದ ರಾಹುಲ್ ಆರ್, ಶ್ರೀಕರ, ಶೆಟ್ಟಿ ಸ್ವಸ್ತಿಕ್ ಸುರೇಶ್, ಆದಿತ್ಯ ರಾವ್, ರಶ್ಮಿತಾ ರಾಘವೇಂದ್ರ ಶೇಟ್, ಸಂಜನಾ, ಮೇಘಾ, ಬುಶ್ರಾ ಅಬ್ದುಲ್ ನಾಸಿರ್, ಸೂರಜ್ ಶೆಟ್ಟಿ ಮತ್ತು ಪೂಜಾರಿ ಅಭಿಲಾಷ್ ಲಕ್ಷ್ಮಣ್ ಇವರು ದಿನಾಂಕ 17 ಮತ್ತು 18 ಮಾರ್ಚ್ 2026 ರಂದು ಜಸ್ಟಿಸ್ ಕೆ ಎಸ್ ಹೆಗ್ಡೆ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್, ನಿಟ್ಟೆ ಇಲ್ಲಿ ನಡೆದ ಎಥಿನ್ –2026 ರಲ್ಲಿ ಬಿ-ಸ್ಕೂಲ್ ಫೆಸ್ಟ್ ಪ್ರಥಮ ಸ್ಥಾನಗಳಿಸಿ ಟ್ರೋಫಿಯೊಂದಿಗೆ ರೂಪಾಯಿ 50,000/- ನಗದು ಬಹುಮಾನವನ್ನು ಪಡೆದಿರುತ್ತಾರೆ.
ವಿದ್ಯಾರ್ಥಿಗಳ ಸಾಧನೆಯು ಸಂಸ್ಥೆಯು ವಿದ್ಯಾರ್ಥಿಗಳಿಗೆ ನೀಡುವ ಕೌಶಲ್ಯ, ನವೀನ ಚಟುವಟಿಕೆಗಳ ಮೂಲಕ ತಾಂತ್ರಿಕ ಶ್ರೇಷ್ಠಯನ್ನು ಬೆಳೆಸುವ ಬದ್ದತೆಯನ್ನು ಒಳಗೊಂಡಿದೆ.

ವಿದ್ಯಾರ್ಥಿಗಳಈ ಸಾಧನೆಗೆ ಸಂಸ್ಥೆಯ ಆಡಳಿತ ಮಂಡಳಿ ಮತ್ತು ಪ್ರಾಂಶುಪಾಲರು ಹೃತ್ಪೂರ್ವಕ ಅಭಿನಂದನೆಗಳನ್ನು ವ್ಯಕ್ತಪಡಿಸಿರುತ್ತಾರೆ.