ಉಡುಪಿ: ಉಡುಪಿ ನಗರಸಭೆಯ ಪ್ರಸಕ್ತ ಸಾಲಿನ ನಗರಸಭಾ ನಿಧಿಯ ಶೇ. 5 ರ ವಿಕಲಚೇತನ ಕಲ್ಯಾಣ ಕಾರ್ಯಕ್ರಮದಡಿ ಮನೆಯ ಮೇಲ್ಛಾವಣಿ ದುರಸ್ಥಿ, ನಿವೇಶನ ಖರೀದಿ, ವಿಕಲಚೇತನ ಬೆನ್ನುಹುರಿ ಮುರಿತಕ್ಕೆ ಒಳಗಾದ ಶಾಶ್ವತ ಅಂಗವಿಕಲತೆ ಹೊಂದಿದ ಫಲಾನುಭವಿಗಳ ಪೋಷಕರಿಗೆ ಪೋಷಣಾ ಭತ್ಯೆ ಹಾಗೂ ಅಂಗವಿಕಲರಿಗೆ ಆರೋಗ್ಯ ವಿಮೆ ಸೌಲಭ್ಯ ಪಡೆಯಲು ಅರ್ಹ ವಿಕಲಚೇತನ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತರು ನಿಗಧಿತ ಅರ್ಜಿಯೊಂದಿಗೆ ಪೂರಕ ದಾಖಲೆಗಳನ್ನು ಸಲ್ಲಿಸಲು ಏಪ್ರಿಲ್ 7 ಕೊನೆಯ ದಿನ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಪೌರಾಯುಕ್ತರು, ನಗರಸಭೆ, ಉಡುಪಿ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.
















