ಬಂಟಕಲ್ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಿಗೆ “Incridea’26” ರಲ್ಲಿ ಚಾಂಪಿಯನ್ ಶಿಪ್

ಉಡುಪಿ: ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯದ ವಿದ್ಯಾರ್ಥಿಗಳಿಗೆ ಎನ್. ಎಮ್. ಎ. ಎಮ್. ಐ. ಟಿ, ನಿಟ್ಟೆ ಇಲ್ಲಿ ದಿನಾಂಕ ೫ ರಿಂದ ೮ ಮಾರ್ಚ್ ೨೦೨೬ ರಂದು ನಡೆದ “Incridea’26” ನಲ್ಲಿ ಚಾಂಪಿಯನ್ ಶಿಪ್ ಅನ್ನು ಪಡೆದಿರುತ್ತಾರೆ.
ಆರ್ಟಿಫೀಶಿಯಲ್ ಇಂಟೆಲಿಜೆನ್ಸ್ ಮತ್ತು ಡಾಟಾ ಸೈನ್ಸ್ ವಿಭಾಗದ ವಿದ್ಯಾರ್ಥಿಗಳಾದ ರಿಸ್ಟನ್, ಧೃತಿ, ತನುಷಾ ಮತ್ತು ಸೃಜನ್ ಇವರು ಲೈನ್ ಫಾಲೋವರ್ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಗಳಿಸಿರುತ್ತಾರೆ.
ಆರ್ಟಿಫೀಶಿಯಲ್ ಇಂಟೆಲಿಜೆನ್ಸ್ ಮತ್ತು ಡಾಟಾ ಸೈನ್ಸ್ ವಿಭಾಗದ ವಿದ್ಯಾರ್ಥಿಗಳಾದ ಧೃತಿ ಕರ್ಕೇರ, ತನುಷಾ ಆರ್. ಮೆಸ್ತಾ, ರಿಸ್ಟನ್ ಕ್ರಾಸ್ಟಾ, ಸಾನ್ವಿ ಶೆಟ್ಟಿಗಾರ್, ಶ್ರಾವಣಿ, ಸೃಜನ್ಎಸ್, ಸಾಥ್ವಿ ಎಸ್ ಭಟ್, ಪ್ರಾರ್ಥನಾ ಹೆಬ್ಬಾರ್ ಮತ್ತು ಅಮಿತ್ ರಾಜ್, ಆರ್ಟಿಫೀಶಿಯಲ್ ಇಂಟೆಲಿಜೆನ್ಸ್ ಮತ್ತು ಮೆಸಿನ್ ಲರ್ನಿಂಗ್ ವಿಭಾಗದ ವಿಹಾನ್ ಮತ್ತು ಸುಷ್ಮಿತಾ ಹರಿದಾಸ್, ಗಣಕ ಯಂತ್ರ
ವಿಭಾಗದ ದೃಶ್ಯ ಕೆ ಶೆಟ್ಟಿ, ಹರ್ಷ ಎಸ್ ರಾವ್, ರಿಜೇಶ್ ಎಸ್, ನೇಹಾ ಕುಂದರ್ ಮತ್ತು ಶ್ರೀ ಹರಿ ಹಾಗೂ ವಿದ್ಯುನ್ಮಾನ ಮತ್ತು ಸಂವಹನ ವಿಭಾಗದ ವಿದ್ಯಾರ್ಥಿಗಳಾದ ಪ್ರಜ್ಞಾ ವಿ ಪೂಜಾರಿ ಮತ್ತು ಸಿಂಚರಾ ಇವರು ಫ್ಯಾಷನ್ ಶೋ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಗಳಿಸಿರುತ್ತಾರೆ.

ವಿದ್ಯಾರ್ಥಿಗಳ ಈ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಸೋದೆ ಶಿಕ್ಷಣ ಸಮೂಹ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಸಂಸ್ಥೆಯ ಪ್ರಾಂಶುಪಾಲರು ಹರ್ಷ ವ್ಯಕ್ತಪಡಿಸಿದ್ದಾರೆ.