ಮಣಿಪಾಲ: ಡಾ. ಟಿ.ಎಂ.ಎ ಪೈ ಫೌಂಡೇಶನ್ ಘಟಕವಾದ ಮಣಿಪಾಲ್ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್‌ನಲ್ಲಿ (MSDC)ಯ ಐಟಿ ಕೌಶಲ್ಯ ಶಾಲೆಗೆ “ಸ್ಕಿಲ್ ಟ್ರೈನರ್” ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ತಂತ್ರಜ್ಞಾನದ ಭವಿಷ್ಯವನ್ನು ರೂಪಿಸುವಲ್ಲಿ ಯುವ ಪ್ರತಿಭಾವಂತರಿಗೆ ಸಂಸ್ಥೆ ಈ ಅವಕಾಶ ನೀಡುತ್ತಿದೆ.
ಈ ಹುದ್ದೆಗೆ M.Tech (DS, CS, AI, ಸೈಬರ್ ಸುರಕ್ಷತೆ ಅಥವಾ ಸಂಬಂಧಿತ ಕ್ಷೇತ್ರ), MCA, M.Sc (ಐಟಿ, ಸಿಎಸ್), M.Com ಹಾಗೂ MBA (ಐಟಿ/ಫೈನಾನ್ಸ್/ಡಿಜಿಟಲ್ ಮಾರ್ಕೆಟಿಂಗ್) ಪದವಿ ಹೊಂದಿದವರು ಅರ್ಜಿ ಸಲ್ಲಿಸಬಹುದು ಎಂದು ಸಂಸ್ಥೆ ತಿಳಿಸಿದೆ.
ಅನುಭವ ಹೊಂದಿದ, ಉತ್ಸಾಹಭರಿತ ತರಬೇತುದಾರರು, ಕೈಗಾರಿಕಾ ಅನುಭವ ಮತ್ತು ಪ್ರಾಯೋಗಿಕ ಜ್ಞಾನ ಹೊಂದಿರುವವರು, ನವೀನ ಬೋಧನಾ ಕೌಶಲ್ಯಗಳು ಮತ್ತು ವಿದ್ಯಾರ್ಥಿಗಳ ಯಶಸ್ಸಿಗೆ ಶ್ರಮಿಸುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು.
ಆಯ್ಕೆಯಾದ ಅಭ್ಯರ್ಥಿಗಳಿಗೆ ಸ್ಪರ್ಧಾತ್ಮಕ ವೇತನ, ವೃತ್ತಿಪರ ಬೆಳವಣಿಗೆಗೆ ಅವಕಾಶ, ಆಧುನಿಕ ಪ್ರಯೋಗಾಲಯ ಮತ್ತು ಮೂಲಸೌಕರ್ಯ, ಸಹಾಯಕ ಕೆಲಸದ ವಾತಾವರಣ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಒದಗಿಸಲಾಗುತ್ತದೆ.ಕಾರ್ಯಸ್ಥಳವು ಮಣಿಪಾಲದ ಈಶ್ವರ ನಗರದಲ್ಲಿರುವ ಡಾ. ಟಿ.ಎಂ.ಎ ಪೈ ಪಾಲಿಟೆಕ್ನಿಕ್ ಕ್ಯಾಂಪಸ್ ಆಗಿರುತ್ತದೆ.
ಆಸಕ್ತರು ತಮ್ಮ ರೆಸ್ಯೂಮ್ ಅನ್ನು [email protected] ಗೆ ಕಳುಹಿಸಬಹುದು ಅಥವಾ ಹೆಚ್ಚಿನ ಮಾಹಿತಿಗಾಗಿ 8088318437 ಸಂಖ್ಯೆಯನ್ನು ಸಂಪರ್ಕಿಸಬಹುದು.

















