ಉಡುಪಿ: ಉಡುಪಿ ಬನ್ನಂಜೆ ಶ್ರೀ ಶನಿ ಕ್ಷೇತ್ರದಲ್ಲಿ ನೆಲೆ ನಿಂತಿರುವ ಶ್ರೀ ಶನಿ ದೇವರ 23 ಅಡಿ ಎತ್ತರದ ಏಕಶಿಲಾ ವಿಗ್ರಹದ ಸನ್ನಿಧಿಯಲ್ಲಿ ಪೂಜ್ಯ ಶ್ರೀ ಬನ್ನಂಜೆ ರಾಘವೇಂದ್ರ ತೀರ್ಥ ಶ್ರೀಪಾದರ ಶುಭ ಆಶೀರ್ವಾದದೊಂದಿಗೆ ಚಂದ್ರ ಮಂಡಲದ ರಥೋತ್ಸವ ಅದ್ದೂರಿಯಾಗಿ ನಡೆಯಿತು.
ಕೊರಂಗ್ರಪಾಡಿ ಕುಮಾರಗುರು ತಂತ್ರಿಗಳ ನೇತೃತ್ವದಲ್ಲಿ ಧಾರ್ಮಿಕ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದರು. ಶ್ರೀ ರಾಮ ವಿಠಲ್ ಹಾಗೂ ಶ್ರೀ ಶನೈಶ್ವರಸ್ವಾಮೀ ಸನ್ನಿಧಿಯಲ್ಲಿ ಶ್ರೀ ಶನೈಶ್ವರ ದೇವರ ರಥೋತ್ಸವದಲ್ಲಿ ಕೊಳಲುವಾದನ, ಮಂಗಳವಾದ್ಯ, ಚಂಡೆವಾದನ ದೊಂದಿಗೆ ನೆಡೆಯಿತು. ಸಾವಿರಾರು ಶನಿದೇವರಿಗೆ ಎಳ್ಳು, ದೀಪ ಬೆಳಗಿಸಿ ಪ್ರಸಾದ ಸ್ವೀಕರಿಸಿದರು.
ಸಮಾರಂಭದಲ್ಲಿ ದೇವಳದ ಪ್ರಧಾನ ಅರ್ಚಕರಾದ ಸತ್ಯನಾರಾಯಣ ಆಚಾರ್ಯ , ವಿಜಯಲಕ್ಷ್ಮೀ ಆಚಾರ್ಯ, ಯತೀಶ್ ಆಚಾರ್ಯ , ಪ್ರತೀಕ್ ಅಚಾರ್ಯ ಹಾಗೂ ನೂರಾರು ಭಕ್ತರೂ ಉಪಸ್ಥರಿದ್ದರು. ಶ್ರೀ ರಾಮ ವಿಠಲ್ ವೇದಿಕೆಯಲ್ಲಿ ವೇಣುವಾದನ – ಗೋಕುಲ ದ್ವನಿ ಕರ್ನಾಟಕ ಕಲಾಶ್ರೀ ವಿದ್ವಾನ್ ಎಚ್ ಎಸ್ ವೇಣುಗೋಪಾಲ್ ಬೆಂಗಳೂರು ತಂಡದವರಿಂದ ಕೊಳಲುವಾದನ ನಡೆಯಿತು.
















