ಉಡುಪಿ: ಮಣಿಪಾಲದಲ್ಲಿರುವ ಟಿಮೋರಾ ಪ್ರೀಸ್ಕೂಲ್ ವತಿಯಿಂದ “ಸಮರ್ ಕ್ಯಾಂಪ್ 2026” ಕಾರ್ಯಕ್ರಮವನ್ನು ಏಪ್ರಿಲ್ 1ರಿಂದ ಏಪ್ರಿಲ್ 30ರವರೆಗೆ ಆಯೋಜಿಸಲಾಗಿದೆ. ಈ ಸಮರ್ ಕ್ಯಾಂಪ್ನಲ್ಲಿ ಮಕ್ಕಳಿಗೆ ಮನರಂಜನೆಯ ಜೊತೆಗೆ ಕಲಿಕೆ ಮತ್ತು ಸೃಜನಾತ್ಮಕ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸಲಾಗಿದೆ.
ಕ್ಯಾಂಪ್ನಲ್ಲಿ ಆರ್ಟ್ & ಕ್ರಾಫ್ಟ್, ಡ್ಯಾನ್ಸ್, ಜುಂಬಾ, ಯೋಗ, ಹೆಲ್ತಿ ಬೈಟ್ ಚಾಟ್, ರೈನ್ಫಾರೆಸ್ಟ್ ಜಾರ್ ತಯಾರಿ, ಜನಪದ ಕಥೆಗಳು, ಬರ್ಡ್ ಫೀಡರ್ ತಯಾರಿ, ವಿಜ್ಞಾನ ಪ್ರಯೋಗಗಳು ಮತ್ತು ಪಿಕಲ್ ಮೇಕಿಂಗ್ ಸೇರಿದಂತೆ ಹಲವು ಕಾರ್ಯಕ್ರಮಗಳು ನಡೆಯಲಿವೆ.
ಈ ಕ್ಯಾಂಪ್ಗೆ 2 ರಿಂದ 5 ವರ್ಷ ಮತ್ತು 6 ರಿಂದ 13 ವರ್ಷ ವಯಸ್ಸಿನ ಮಕ್ಕಳಿಗೆ ಭಾಗವಹಿಸಲು ಅವಕಾಶವಿದ್ದು, ಸೋಮವಾರದಿಂದ ಶನಿವಾರದವರೆಗೆ ಬೆಳಿಗ್ಗೆ 9:00 ರಿಂದ 12:30 ಹಾಗೂ 9:00 ರಿಂದ ಸಂಜೆ 5:00 ವರೆಗೆ ತರಗತಿಗಳು ನಡೆಯಲಿವೆ.
ಆಸಕ್ತರು ಹೆಚ್ಚಿನ ಮಾಹಿತಿಗಾಗಿ 9591982777 ಸಂಖ್ಯೆಯನ್ನು ಸಂಪರ್ಕಿಸಿ ನೋಂದಣಿ ಮಾಡಿಕೊಳ್ಳಬಹುದು. ಈ ಸಮರ್ ಕ್ಯಾಂಪ್ ಮಣಿಪಾಲದ ಅನಂತನಗರ 1ನೇ ಹಂತ, 55B ನ ಟಿಮೋರಾ ಪ್ರೀಸ್ಕೂಲ್ನಲ್ಲಿ ನಡೆಯಲಿದೆ.
















