ಉಡುಪಿ: ಮಾ.6ರಂದು “ಅರ್ಚನಾ ಸಿಗ್ನೇಚರ್” ಉದ್ಘಾಟನೆ

ಉಡುಪಿ: ನಿಮ್ಮ ಕನಸಿನ ಮನೆ ನಿರ್ಮಾಣ ಕ್ಷೇತ್ರದಲ್ಲಿ ಉಡುಪಿ- ಮಣಿಪಾಲದಲ್ಲಿ ಅತ್ಯಂತ ಉತ್ತಮ ಹೆಸರು ಗಳಿಸಿರುವ “ಅರ್ಚನಾ ಪ್ರಾಜೆಕ್ಟ್ “ನ ಐಷಾರಾಮಿ ನಿವಾಸ ಯೋಜನೆಯ ‘ಅರ್ಚನಾ ಸಿಗ್ನೇಚರ್’ ಮಾ.6ರಂದು ಸಂಜೆ 5 ಗಂಟೆಗೆ ಉದ್ಘಾಟನೆಗೊಳ್ಳಲಿದೆ.

ಉಡುಪಿ- ಮಣಿಪಾಲದ ಮಧ್ಯಭಾಗದ ಎಂಜಿಎಂ ಬುಡ್ನಾರ್ ಮುಖ್ಯರಸ್ತೆಯಲ್ಲಿರುವ ಈ ಯೋಜನೆ ಆಧುನಿಕ ವಿನ್ಯಾಸ, ಗುಣಮಟ್ಟದ ನಿರ್ಮಾಣ ಹಾಗೂ ಸಮಗ್ರ ಸೌಲಭ್ಯಗಳ ಸಮನ್ವಯ ವಾಗಿದ್ದು, ಉನ್ನತ ಜೀವನಶೈಲಿಗೆ ಹೊಸ ಆಯಾಮ ನೀಡಲಿದೆ.

ಸಮಾರಂಭದಲ್ಲಿ ಚಿರಂತನ ಸ್ಕೂಲ್‌ನ ಸಂಸ್ಥಾಪಕ ಕೆ.ಪಳಕ್ಷ ಪಾಲ್ಗೊಳ್ಳಲಿದ್ದಾರೆ. ಎ.ಜಿ ಆಸೋಸಿಯೇಟ್ಸ್ ಉಡುಪಿ ಎಂಜಿನಿಯರ್ ಗೋಪಾಲ್ ಭಟ್ ಉಪಸ್ಥಿತರಿರುವರು. ಸುಮಾರು ಒಂದು ಎಕರೆ ಪ್ರದೇಶದಲ್ಲಿ ನಿರ್ಮಿತವಾಗಿರುವ ಈಯೋಜನೆಯಲ್ಲಿ ಒಟ್ಟು 46 ಐಷಾರಾಮಿ ಅಪಾರ್ಟ್‌‌ಮೆಂಟ್ ಗಳಿದ್ದು, 2, 3 ಹಾಗೂ 4 ಬಿಎಚ್‌ಕೆ ವಿನ್ಯಾಸಗಳಲ್ಲಿ 1.320 ಚದರ ಅಡಿಯಿಂದ 3,650 ಚದರಡಿವರೆಗೆ ವಿಸ್ತೀರ್ಣ ಹೊಂದಿವೆ.

ತಳಹಂತ 11 ಮಹಡಿಗಳ ಕಟ್ಟಡದಲ್ಲಿ ಪ್ರತಿ ಮಹಡಿಗೆ ಕೇವಲ ನಾಲ್ಕು ಕೋರ್ನರ್ ಫ್ಲ್ಯಾಟ್ ಗಳನ್ನು ಹೊಂದಿದ್ದು, ವಿಶಾಲತೆ ಮತ್ತು ಗೌಪ್ಯತೆಗೆ ಆದ್ಯತೆ ನೀಡಲಾಗಿದೆ. ನೆಲಮಹಡಿಯಲ್ಲಿ ಐದು ವಾಣಿಜ್ಯ ಅಂಗಡಿಗಳ ವ್ಯವಸ್ಥೆಯೂ ಇದೆ. ಮೇಲ್ಚಾವಣಿಯಲ್ಲಿ ಇನ್ಫಿನಿಟಿ ಈಜುಕೊಳ(ಮಕ್ಕಳು ಹಾಗೂ ಹಿರಿಯರಿಗೆ ಪ್ರತ್ಯೇಕ ವ್ಯವಸ್ಥೆ) ಬಹುಮುಖ ಜಿಮ್ ಮತ್ತು ಒಳಾಂಗಣ ಆಟಗಳ ವಿಭಾಗ, ಮಕ್ಕಳ ಆಟದಮೈದಾನ, ಪಾರ್ಟಿ‌ಹಾಲ್, 24ಗಂಟೆ ನೀರಿನ ಪೂರೈಕೆ, ವಿದ್ಯುತ್‌ ಬ್ಯಾಕಪ್, ಸಿಸಿಟಿವಿ ನಿಗಾ ವ್ಯವಸ್ಥೆ, ಪ್ರವೇಶ ನಿಯಂತ್ರಿತ ಲಾಬಿ ಸೇರಿದಂತೆ ಅನೇಕ ಆಧುನಿಕ ಸೌಲಭ್ಯಗಳನ್ನು ಒದಗಿಸಲಾಗಿದೆ. ಮಳೆ ನೀರು ಸಂಗ್ರಹ, ಸೌರವಿದ್ಯುತ್ ವ್ಯವಸ್ಥೆ ಇವಿ ಚಾರ್ಜಿಂಗ್ ಪಾಯಿಂಟ್, ಪೈಪ್‌ಲೈನ್ ಗ್ಯಾಸ್ ವ್ಯವಸ್ಥೆ, ಸೋಲಾರ್ ಎಲೆಕ್ಟ್ರಿಸಿಟಿ ಹಾಗೂ ವಾಸ್ತು ಸಮ್ಮತ‌ ವಿನ್ಯಾಸಗಳು ವಿಶೇಷ ಆಕರ್ಷಣೆಗಳಾಗಿವೆ.

ಕ್ರೆಡೈ ಸದಸ್ಯತ್ವ ಹೊಂದಿರುವ ಹಾಗೂ ಐಎಸ್‌ಒ ಪ್ರಮಾಣಿತ ಸಂಸ್ಥೆಯಾದ ಅರ್ಚನಾ‌ ಪ್ರಾಜೆಕ್ಟ್ಸ್ ಸಯಕ್ಕೆ ಸರಿಯಾದ ಹಸ್ತಾಂತರ, ಗುಣಮಟ್ಟ ಮತ್ತು ಪಾರದರ್ಶಕ ವ್ಯವಹಾರಕ್ಕಾಗಿ ಪ್ರಸಿದ್ಧವಾಗಿದೆ. ಸಂಸ್ಥೆಯ ಮತ್ತೊಂದು ಮಹತ್ವಾಕಾಂಕ್ಷಿ ಮಿಶ್ರ ಬಳಕೆ ಯೋಜನೆ ಅರ್ಚನಾ ಗ್ರಾಂಡ್ ಕನಕ್ ಮಣಿಪಾಲದಲ್ಲಿ ನಿರ್ಮಾಣ ಹಂತದಲ್ಲಿದೆ. ಇಲ್ಲಿಯವರೆಗೆ ಸೀಮಿತ ಫ್ಲ್ಯಾಟ್ ಗಳು ಮಾತ್ರ ಲಭ್ಯವಿದ್ದು, ಆಸಕ್ತರು ಸಂಪರ್ಕಿಸಲು ಕೋರಲಾಗಿದೆ.

ಹೆಚ್ಚಿನ ಮಾಹಿತಿಗೆ ಅರ್ಚನಾ ಪ್ರಾಜೆಕ್ಟ್ ಅನಂತ ಟವರ್ಸ್, ಕೋರ್ಟ್ ರೋಡ್ ಉಡುಪಿ, 576101ಅಥವಾ ಇಮೇಲ್: [email protected] ಸಂಪರ್ಕಿಸಬಹುದು.