ಉಡುಪಿ:ಹೊಸದಿಲ್ಲಿಯ ಲೆಕ್ಕಪರಿಶೋಧಕರ ಸಂಸ್ಥೆ (ಐಸಿಎಐ) ಜನವರಿ 2026 ರಲ್ಲಿ ನಡೆಸಿದ ಸಿಎ ಫೈನಲ್ ಪರೀಕ್ಷೆಯಲ್ಲಿ ಚಂದನಾ ಶೆಣೈ ಉತ್ತೀರ್ಣರಾಗಿದ್ದು ಗ್ರೂಪ್ ಒಂದರ ವಿಷಯ ಹಾಗೂ ಅಂಕಗಳು Financial Reporting 71, Advanced Financial Management 79, Advanced Auditing, Assurance and Professional Ethics 68, ಮತ್ತು ಗ್ರೂಪ್ ಎರಡರ Direct Tax Laws & International Taxation 59, Indirect Tax Laws 55, Integrated Business Solutions 68 ಒಟ್ಟು 400 ಅಂಕಗಳನ್ನು ಗಳಿಸಿ ಆಲ್ ಇಂಡಿಯಾ 36ನೇ ರಾಂಕ್ ಅನ್ನು ಪಡೆದುಕೊಂಡಿದ್ದಾರೆ.
ಇವರು ಕಾಪು ತಾಲ್ಲೂಕಿನ ಪಡುಬಿದ್ರೆ ಗ್ರಾಮದ ಗಣೇಶ್ ಶೆಣೈ ಹಾಗೂ ವಿದ್ಯಾ ಶೆಣೈ ದಂಪತಿಗಳ ಪುತ್ರಿಯಾಗಿದ್ದಾರೆ. ತಮ್ಮ ಸಿಎ ಫೌಂಡೇಶನ್ ಮತ್ತು ಸಿಎ ಇಂಟರ್ಮೀಡಿಯೇಟ್ ತರಬೇತಿಯನ್ನು ತ್ರಿಶಾ ಕ್ಲಾಸಸ್ ಉಡುಪಿಯಲ್ಲಿ ಪಡೆದುಕೊಂಡಿದ್ದಾರೆ ಮತ್ತು ಆರ್ಟಿಕಲ್‌ಶಿಪ್ ಅನ್ನು ಉಡುಪಿಯ ಪೈ ನಾಯಕ್ ಅಂಡ್ ಅಸೋಸಿಯೇಟ್ಸ್‌ನಲ್ಲಿ ಪೂರೈಸಿಕೊಂಡಿದ್ದಾರೆ.
















