ಉಡುಪಿ, ಬಂಟಕಲ್: ಬಂಟಕಲ್ಲಿನ ಶ್ರೀ ಮಧ್ವ ವಾದಿರಾಜ ತಾಂತ್ರ್ರಿಕ ಮಹಾವಿದ್ಯಾಲಯದ ವಾರ್ಷಿಕ ಕ್ರೀಡಾಕೂಟವು ದಿನಾಂಕ 25 ಫೆಬ್ರವರಿ 2026ರಂದು ಜರುಗಿತು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀ ಮಧ್ವವಾದಿರಾಜ ತಾಂತ್ರ್ರಿಕ ಮಹಾವಿದ್ಯಾಲಯದ ಹಳೆ ವಿದ್ಯಾರ್ಥಿ ಹಾಗೂ ದೇಹ ದಾಡ್ಯ ಪಟು ಮಿಸ್ಟರ್ ಇಂಡಿಯಾ 2024 ಚಿನ್ನದ ಪದಕ ವಿಜೇತ, ಆಲ್ ಇಂಡಿಯಾ ಇಂಟರ್ ರೈಲ್ವೆ ಚಾಂಪಿಯನ್ ಶ್ರೀ ವಿಘ್ನೇಶ್ ಭಾಗವಹಿಸಿದ್ದರು.

ಇವರು ಮಾತನಾಡಿ ಕ್ರೀಡೆ ಮತ್ತು ಶಿಕ್ಷಣದಲ್ಲಿ ಶ್ರೇಷ್ಠತೆಯನ್ನು ಸಾಧಿಸುವಲ್ಲಿ ಸಂಸ್ಥೆಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಪಾತ್ರದ ಬಗ್ಗೆ ಶ್ಲಾಘಿಸಿದರು.ಕ್ರೀಡೆಗಳಲ್ಲಿ ಭಾಗವಹಿಸುವುದು ದೈಹಿಕ ಸದೃಢತೆಗೆ ಮತ್ತು ಮಾನವನ ಜೀವನದಲ್ಲಿ ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು ಸಹಾಯಕವಾಗಿದೆ ಎಂದರು. ನಿಜವಾದ ಯಶಸ್ಸು ಪದಕವನ್ನು ಗೆಲ್ಲುವುದರಲ್ಲಿ ಮಾತ್ರವಲ್ಲ ಶಿಸ್ತಿನ ಜೀವನವನ್ನು ನಡೆಸುವುದರಲ್ಲಿದೆ ಎಂದರು.

ಸೋದೆ ಸಮೂಹ ಶಿಕ್ಷಣ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಡಾ. ರಾಧಾಕೃಷ್ಣ ಎಸ್ ಐತಾಳ್ ಇವರು ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ಕ್ರೀಡೆಗಳು ಶಿಸ್ತಿನ ಜೀವನವನ್ನು ರೂಪಿಸುವಲ್ಲಿ ಮತ್ತು ನಾಯಕತ್ವದ ಗುಣವನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂದರು.

ಕ್ರೀಡಾ ಕಾರ್ಯದರ್ಶಿಯಾದ ಶ್ರೀ ಅನಿಶ್ ರಾವ್ ಕ್ರೀಡಾ ಪ್ರತಿಜ್ಞೆಯನ್ನು ಬೋಧಿಸಿದರು. ಕ್ರೀಡಾ ಕೂಟವು ಆಕರ್ಷಕ ಪಥಸಂಚಲನದೊ೦ದಿಗೆ ಆರಂಭವಾಯಿತು. ಪಥಸಂಚಲನದಲ್ಲಿ ನಿರಾಮಯ ಕಾಲೇಜ್ ಆಫ್ ನರ್ಸಿಂಗ್ ಮತ್ತು ಅಲೈಡ್ ಸೈನ್ಸಸ್ನ ವಿದ್ಯಾರ್ಥಿಗಳು ಪ್ರಥಮ ಸ್ಥಾನ
ಪಡೆದರೆ ಗಣಕಯಂತ್ರ ವಿಭಾಗದ ವಿದ್ಯಾರ್ಥಿಗಳು ದ್ವಿತೀಯ
ಸ್ಥಾನವನ್ನು ಪಡೆದರು.
ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಸ೦ಸ್ಥೆಯ ಕಾರ್ಯದರ್ಶಿಗಳಾದ ಶ್ರೀ ರತ್ನಕುಮಾರ್, ಸೋದೆ ಸಮೂಹ ಶಿಕ್ಷಣ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಡಾ. ರಾಧಾಕೃಷ್ಣ ಎಸ್ ಐತಾಳ್,ಆಡಳಿತ ಮಂಡಳಿಯ ಸದಸ್ಯರಾದ ಶ್ರೀ ಹರಿಶ್ ಬೆಳ್ಮಣ್ ಇವರು ಉಪಸ್ಥಿತರಿದ್ದರು.
ಸಂಸ್ಥೆಯ ದೈಹಿಕ ಶಿಕ್ಷಣ ನಿರ್ದೇಶಕರಾದ ಶ್ರೀ ಪೌಲ್ ಸೂರಜ್ ಈ ಕ್ರೀಡಾಕೂಟವನ್ನು ನಡೆಸಿಕೊಟ್ಟರು.
















