ತ್ರಿಶಾ ಕ್ಲಾಸಸ್: ಸಿ ಎಸ್ ಪ್ರೊಫೆಷನಲ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು

ಉಡುಪಿ: ಸಿ ಎಸ್ ಪ್ರೊಫೆಷನಲ್ ಪರೀಕ್ಷೆಯಲ್ಲಿ ತ್ರಿಶಾ ಕ್ಲಾಸಸ್ ನ 3 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ತ್ರಿಶಾ ಕ್ಲಾಸಸ್: ಸಿ ಎಸ್ ಪ್ರೊಫೆಷನಲ್ ಪರೀಕ್ಷೆಯಲ್ಲಿ ಪೂಜಾರಿ ಖುಷಿ ಸುಧಾಕರ ಉತ್ತೀರ್ಣ:

ಹೊಸದಿಲ್ಲಿಯ (ಐಸಿಎಸ್ಐ) ಡಿಸೆಂಬರ್ 2025ರಲ್ಲಿ ನಡೆಸಿದ ಸಿ.ಎಸ್ ಪ್ರೊಪೆಶನಲ್ ಅಂತಿಮ ಪರೀಕ್ಷೆಯಲ್ಲಿ ಪೂಜಾರಿ ಖುಷಿ ಸುಧಾಕರ ಅವರು ಉತ್ತೀರ್ಣರಾಗಿದ್ದಾರೆ. ಇವರು ಉಡುಪಿ ತಾಲ್ಲೂಕಿನ ಹಿರಿಯಡ್ಕ ಗ್ರಾಮದ ಸುಧಾಕರ ಪೂಜಾರಿ ಹಾಗೂ ಪೂರ್ಣಿಮಾ ದಂಪತಿಗಳ ಪುತ್ರಿಯಾಗಿದ್ದಾರೆ. ಸಿಎಸ್ಇಇಟಿ ಮತ್ತು ಸಿಎಸ್ ಎಕ್ಸಿಕ್ಯೂಟಿವ್ ತರಬೇತಿಯನ್ನು ತ್ರಿಶಾ ಕ್ಲಾಸಸ್ ನಲ್ಲಿ ಹಾಗೂ ಪದವಿ ವಿದ್ಯಾಭ್ಯಾಸವನ್ನು ಕಟಪಾಡಿಯ ತ್ರಿಶಾ ವಿದ್ಯಾ ಕಾಲೇಜ್ ಆಪ್ ಕಾಮರ್ಸ್ ಆಂಡ್ ಮ್ಯಾನೇಜ್ಮೆಂಟ್ನಲ್ಲಿ ಪಡೆದುಕೊಂಡಿದ್ದಾರೆ.

ತ್ರಿಶಾ ಕ್ಲಾಸಸ್: ಸಿ ಎಸ್ ಪ್ರೊಫೆಷನಲ್ ಪರೀಕ್ಷೆಯಲ್ಲಿ ಮೇಘ ಉತ್ತೀರ್ಣ:

ಹೊಸದಿಲ್ಲಿಯ (ಐಸಿಎಸ್ಐ) ಡಿಸೆಂಬರ್ 2025ರಲ್ಲಿ ನಡೆಸಿದ ಸಿ.ಎಸ್ ಪ್ರೊಪೆಶನಲ್ ಅಂತಿಮ ಪರೀಕ್ಷೆಯಲ್ಲಿ ಮೇಘ ಅವರು ಉತ್ತೀರ್ಣರಾಗಿದ್ದಾರೆ. ಇವರು ಉಡುಪಿ ತಾಲ್ಲೂಕಿನ ಪಲ್ಲಿಗುಡ್ಡೆ ಗ್ರಾಮದ ಗಣೇಶ್ ಪೂಜಾರಿ ಹಾಗೂ ಸರೋಜಿನಿ ದಂಪತಿಗಳ ಪುತ್ರಿಯಾಗಿದ್ದಾರೆ. ಸಿಎಸ್ಇಇಟಿ ಮತ್ತು ಸಿಎಸ್ ಎಕ್ಸಿಕ್ಯೂಟಿವ್ ತರಬೇತಿಯನ್ನು ತ್ರಿಶಾ ಕ್ಲಾಸಸ್ ನಲ್ಲಿ ಹಾಗೂ ಪದವಿ ವಿದ್ಯಾಭ್ಯಾಸವನ್ನು ಕಟಪಾಡಿಯ ತ್ರಿಶಾ ವಿದ್ಯಾ ಕಾಲೇಜ್ ಆಪ್ ಕಾಮರ್ಸ್ ಆಂಡ್ ಮ್ಯಾನೇಜ್ಮೆಂಟ್ನಲ್ಲಿ ಪಡೆದುಕೊಂಡಿದ್ದಾರೆ.

ತ್ರಿಶಾ ಕ್ಲಾಸಸ್: ಸಿ ಎಸ್ ಪ್ರೊಫೆಷನಲ್ ಪರೀಕ್ಷೆಯಲ್ಲಿ ಪೃಥ್ವಿರಾಜ್ ಪಾಂಡುರಂಗ್ ನಾಯಕ್ ಉತ್ತೀರ್ಣ:

ಹೊಸದಿಲ್ಲಿಯ (ಐಸಿಎಸ್ಐ) ಡಿಸೆಂಬರ್ 2025ರಲ್ಲಿ ನಡೆಸಿದ ಸಿ.ಎಸ್ ಪ್ರೊಪೆಶನಲ್ ಅಂತಿಮ ಪರೀಕ್ಷೆಯಲ್ಲಿ ಪೃಥ್ವಿರಾಜ್ ಪಾಂಡುರಂಗ್ ನಾಯಕ್ ಅವರು ಉತ್ತೀರ್ಣರಾಗಿದ್ದಾರೆ. ಇವರು ಭಟ್ಕಳ ತಾಲ್ಲೂಕಿನ ಶಿರಾಲಿ ಗ್ರಾಮದ ಪಾಂಡುರಂಗ್ ನಾಯಕ್ ಹಾಗೂ ರತ್ನಾ ನಾಯಕ್ ದಂಪತಿಗಳ ಪುತ್ರರಾಗಿದ್ದಾರೆ. ತಮ್ಮ ಆರ್ಟಿಕಲ್‌ಶಿಪ್ ಅನ್ನು ಬೆಂಗಳೂರಿನ BMP & Co LLP, Company Secretaries ಸಂಸ್ಥೆಯಲ್ಲಿ ಪೂರೈಸಿಕೊಂಡಿದ್ದಾರೆ. ಪದವಿ ವಿದ್ಯಾಭ್ಯಾಸವನ್ನು ತ್ರಿಶಾ ವಿದ್ಯಾ ಕಾಲೇಜ್ ಆಪ್ ಕಾಮರ್ಸ್ ಆಂಡ್ ಮ್ಯಾನೇಜ್ಮೆಂಟ್ ಕಟಪಾಡಿಯಲ್ಲಿ ಪೂರ್ಣಗೊಳಿಸಿದ್ದಾರೆ. ಪ್ರಸ್ತುತ ಅವರು ಟಾಟಾ ಎಲೆಕ್ಟ್ರಾನಿಕ್ಸ್ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.