ಕುಂದಾಪುರ: ಕೋಡಿ ಬ್ಯಾರೀಸ್ ಪ್ರಥಮ ದರ್ಜೆ ಕಾಲೇಜು ಮತ್ತು ಮಣಿಪಾಲದ ಡಾ.ಟಿ.ಎಂ.ಎ ಪೈ ಫೌಂಡೇಶನ್ನ ಅಂಗಸಂಸ್ಥೆ ಮಣಿಪಾಲ್ ಸ್ಕಿಲ್ ಡೆವಲಪ್ಟೆಂಟ್ ಸೆಂಟರ್(ಎಂಎಸ್ಡಿಸಿ) ನಡುವೆ ಶೈಕ್ಷಣಿಕ ಒಪ್ಪಂದದ ಸಹಿ ಸಮಾರಂಭವು ಬ್ಯಾರೀಸ್ ನಾಲೆಡ್ಜ್ ಕ್ಯಾಂಪ್ನ ಬೀಹೈವ್ ಕನ್ವೆನ್ನನ್ ಹಾಲ್ನಲ್ಲಿ ಜರಗಿತು.
ವಿದ್ಯಾರ್ಥಿಗಳಲ್ಲಿ ಕೌಶಲ್ಯಾಭಿವೃದ್ಧಿಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಈ ಒಪ್ಪಂದವನ್ನು ಮಾಡಿಕೊಳ್ಳಲಾಗಿದ್ದು, ಪ್ರಮುಖವಾಗಿ ಟ್ಯಾಲಿ, ಜಿಎಸ್ಟಿ ಅಕೌಂಟಿಂಗ್ ಮತ್ತು ಡೇಟಾ ಸೈನ್ಸ್ ಕೋರ್ಸ್ಗಳ ತರಬೇತಿಗೆ ಹೆಚ್ಚಿನ ಒತ್ತು ನೀಡಲಾಗಿದೆ.
ಮುಖ್ಯ ಅತಿಥಿಯಾಗಿ ಎಂಎಸ್ಡಿಸಿ ಅಧ್ಯಕ್ಷ ಬ್ರಿಗೇಡಿಯರ್ ಡಾ.ಸುರ್ಜಿತ್ ಸಿಂಗ್ ಪಬ್ಲಾ ಮಾತನಾಡಿ, ಭವಿಷ್ಯದಲ್ಲಿ ಜಿಎಸ್ಟಿ, ಲೆಕ್ಕಪತ್ರ ನಿರ್ವಹಣೆ ಮತ್ತು ವಿಜ್ಞಾನ, ವೀಡಿಯೊ, ವೆಬ್ ವಿನ್ಯಾಸ ಮತ್ತು ಗ್ರಾಫಿಕ್ಸ್, ಸೈರ್ಬ ಭದ್ರತೆ, ಇನ್ನೂ ಹೆಚ್ಚಿನ ಕೋರ್ಡ್ಗಳನ್ನು ನಿಮಗೆ ಅವಕಾಶ ಸಿಕ್ಕಾಗಲೆಲ್ಲಾ ಸದುಪಯೋಗ ಮಾಡಿಕೊಳ್ಳಬೇಕು. ಏಕಕಾಲದಲ್ಲಿ ಪದವಿಯೊಂದಿಗೆ ಹಲವಾರು ಆನ್ಲೈನ್ ಕೋರ್ಸ್ಗಳನ್ನು ನಾವು ಪಡೆದುಕೊಳ್ಳಬಹುದು ಎಂದರು.
ಎಂಎಸ್ಡಿಸಿ ಮಣಿಪಾಲದ ರಿಜಿಸ್ಟ್ರಾರ್ ಡಾ.ಅಂಜಯ್ಯ ದೇವಿನೇನಿ ಮಾತನಾಡಿ, ವಿದ್ಯಾರ್ಥಿಗಳಿಗೆ ಉದ್ಯೋಗಾಧಾರಿತ ತರಬೇತಿ ಮತ್ತು ಆಧುನಿಕ ತಂತ್ರಜ್ಞಾನದ ಅರಿವು ಮೂಡಿಸಲು ಹೊಸ ಹಾದಿ ತೆರೆದಂತಾಗಿದೆ ಎಂದು ಹೇಳಿದರು.
ಸ್ಕೂಲ್ ಆಫ್ ಐಟಿ ಸ್ಕಿಲ್ಸ್ನ ಮುಖ್ಯಸ್ಥೆ ರಾಜಲಕ್ಷ್ಮಿ ಮಾತನಾಡಿ, ವಿದ್ಯಾರ್ಥಿಗಳಿಗೆ ಕೇವಲ ಪದವಿ ಶಿಕ್ಷಣವಷ್ಟೇ ಸಾಲದು, ಉದ್ಯೋಗಕ್ಕೆ ಪೂರಕವಾದ ತಾಂತ್ರಿಕ ಕೌಶಲ್ಯಗಳೂ ಅವಶ್ಯಕ ಎಂದು ತಿಳಿಸಿದರು.
ಅಧ್ಯಕ್ಷತೆಯನ್ನು ಬ್ಯಾರೀಸ್ ಗ್ರೂಪ್ ಆಫ್ ಇನ್ಸಿಟಿಟ್ಯೂಟ್ನ ಅಧ್ಯಕ್ಷ ಅಬ್ದುಲ್ ರೆಹಮಾನ್ ಬ್ಯಾರಿ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಯು ಪದವಿಯೊಂದಿಗೆ ಎರಡು ಸರ್ಟಿಫಿಕೇಟ್ ಕೋರ್ಸ್ಗಳನ್ನು ಹೊಂದಿರಬೇಕು. ಇದು ವಿದ್ಯಾರ್ಥಿಗಳ ಭವಿಷ್ಯ ನಿರ್ಧರಿಸಲು ಅತಿ ಮುಖ್ಯ ಇದರ ಪ್ರಯೋಜನವನ್ನು ಪಡೆದುಕೊಂಡು ದೇಶದ ನಾಗರಿಕರಾಗಿ ಬಾಳಬೇಕೆಂದು ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲೆ ಶಬೀನಾ ಎಚ್. ಮಾತನಾಡಿದರು. ಬ್ಯಾರೀಸ್ ಸಮೂಹ ಸಂಸ್ಥೆಯ ನಿರ್ದೇಶಕಿ ಅಶ್ವಿನಿ ಶೆಟ್ಟಿ, ಉಪಪ್ರಾಂಶುಪಾಲೆ ಆಫ್ರಿನ್ ಖಾನ್, ಗಣಕ ವಿಭಾಗದ ಮುಖ್ಯಸ್ಥೆ ನೂತನ್ ಎಸ್., ವಾಣಿಜ್ಯ ವಿಭಾಗದ ಮುಖ್ಯಸ್ಥ ವಿನುತ ಉಪಸ್ಥಿತರಿದ್ದರು.
ಬ್ಯಾರೀಸ್ ಸಮೂಹ ಸಂಸ್ಥೆಗಳ ಟ್ರಸ್ಟಿ ಡಾ.ಆಸಿಫ್ ಬ್ಯಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಯೋಜಕರಾದ ನಾಗರಾಜ್, ಜಯಂತ್ ಶೆಟ್ಟಿಗಾರ್ ಮತ್ತು ಅಹ್ಮದ್ ಖಲೀಲ್ ಕಾರ್ಯಕ್ರಮ ನಿರ್ವಹಿಸಿದರು. ವಿದ್ಯಾರ್ಥಿನಿ ಆಯಿಷಾ ಇಸ್ಟಾ ಸ್ವಾಗತಿಸಿದರು. ಮರಿಯಂ ಆಯುಬ್ ಕಾರ್ಯಕ್ರಮ ನಿರೂಪಿಸಿದರು. ಸುಹಾನ ಪರ್ವೀನ್ ವಂದಿಸಿದರು.
















