ಕುಂದಾಪುರ:ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜು: ಗುಣಮಟ್ಟದ ಶಿಕ್ಷಣದ ವಿಶ್ವಾಸಾರ್ಹ ಸಂಸ್ಥೆ

ಕುಂದಾಪುರ:ಶಿಕ್ಷಣವೆಂದರೆ ಕೇವಲ ಪುಸ್ತಕದ ಪಾಠವಲ್ಲ.ಅದು ವ್ಯಕ್ತಿತ್ವದ ರೂಪುರೇಷೆ ಅದು ಕನಸುಗಳಿಗೆ ದಿಕ್ಕು.ಅದು ಜೀವನಕ್ಕೆ ಬೆಳಕು.ಈ ಸತ್ಯವನ್ನು ಹೃದಯಂಗಮ ಮಾಡಿಕೊಂಡು, ಕುಂದಾಪುರದ ಪವಿತ್ರ ನೆಲದಲ್ಲಿ ತನ್ನದೇ ಆದ ಗುರುತನ್ನು ಮೂಡಿಸಿರುವ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜು, ಶ್ರೀ ವೆಂಕಟರಮಣ ದೇವ್ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ರಿ. ಕುಂದಾಪುರ ಇದರ ಕನಸಿನ ಕೂಸಾಗಿ 2010ರಲ್ಲಿ ಸ್ಥಾಪನೆಯಾಯಿತು.

ಕೇವಲ 34 ವಿದ್ಯಾರ್ಥಿಗಳೊಂದಿಗೆ ಆರಂಭವಾದ ಕಾಲೇಜು, ಇಂದು 1200ಕ್ಕೂ ಹೆಚ್ಚು ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುತ್ತಿರುವ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾಗಿ ಬೆಳೆದಿರುವುದು ಕಾಲೇಜಿನ ಸಾಧನೆಯ ಪ್ರತೀಕವಾಗಿದೆ.

ವಿಜ್ಞಾನ ಮತ್ತು ವಾಣಿಜ್ಯ ವಿಭಾಗಗಳೊಂದಿಗೆ ಆರಂಭಗೊಂಡ ಸಂಸ್ಥೆ, ಶಿಸ್ತು, ಮೌಲ್ಯಾಧಾರಿತ ಶಿಕ್ಷಣ ಹಾಗೂ ಗುಣಮಟ್ಟದ ಬೋಧನೆಯ ಮೂಲಕ ಜಿಲ್ಲೆಯ ಪ್ರಮುಖ ಕಾಲೇಜುಗಳ ಪೈಕಿ ಸ್ನಾನ ಪಡೆದುಕೊಂಡಿದೆ. ವಿಶಾಲವಾದ ಕಟ್ಟಡ, ಸುಸಜ್ಜಿತ ತರಗತಿಗಳು, ಪ್ರಯೋಗಾಲಯಗಳು, ಗ್ರಂಥಾಲಯ ಮತ್ತು ಅನುಭವಸಂಪನ್ನ ಉಪನ್ಯಾಸಕರ ತಂಡ ಇವೆಲ್ಲವೂ ಕಾಲೇಜಿನ ಶೈಕ್ಷಣಿಕ ಬಲವನ್ನು ಪ್ರತಿಬಿಂಬಿಸುತ್ತವೆ.

ಶೈಕ್ಷಣಿಕ ಸಾಧನೆಗಳು

ದ್ವಿತೀಯ ಪಿ.ಯು.ಸಿ. ವಾರ್ಷಿಕ ಪರೀಕ್ಷೆಯಲ್ಲಿ ಕಳೆದ ಏಳು ವರ್ಷಗಳಿಂದ ಶೇಕಡ ನೂರರಷ್ಟು ಫಲಿತಾಂಶ ದಾಖಲಿಸಿದ ತ್ರಿವಳಿ ತಾಲೂಕುಗಳ ಏಕಮಾನ್ಯ ಸಂಸ್ಥೆ ಎಂಬ ಹೆಗ್ಗಳಿಕೆಯೊಂದಿಗೆ, ಪರೀಕ್ಷೆ ಬರೆದ ಅತೀ ಹೆಚ್ಚು ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗುತ್ತಿರುವುದು ಕಾಲೇಜಿನ ವಿಶಿಷ್ಟ ಸಾಧನೆ. ಜಿಲ್ಲೆಯ ಮೆರಿಟ್ ಪಟ್ಟಿ ಕಾಣಿಸಿಕೊಳ್ಳುವ ಹೆಮ್ಮೆಯ ಹೆಸರುಗಳು ಶ್ರೀ ವೆಂಕಟರಮಣ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಎನ್ನುವುದು ಕಾಲೇಜಿನ ಶೈ ಸಾಧನೆಗೆ ಸಾಕ್ಷಿ.

2024-25ನೇ ಸಾಲಿನ ದ್ವಿತೀಯ ಪಿ.ಯು.ಸಿ. ವಾರ್ಷಿಕ ಪರೀಕ್ಷೆಯಲ್ಲಿ ಉಡುಪಿ ಜಿಲ್ಲೆಗೆ ಪ್ರಥಮ ಮತ್ತು ರಾಜ್ಯಕ್ಕೆ 4ನೇ ರ್ಯಾಂಕಿನ ಗರಿಯೊಂದಿಗೆ, ರಾಜ್ಯದ ಅಗ್ರ 10 ರ್ಯಾಂಕುಗಳಲ್ಲಿ ಇದೇ ಕಾಲೇಜಿನ 16 ವಿದ್ಯಾರ್ಥಿಗಳು ಸ್ಥಾನ ಪಡೆದಿರುವುದು ಜಿಲ್ಲೆಗೆ ಹೆಮ್ಮೆ.

ಈ ಸಂಸ್ಥೆಯಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯ ಮೇಲೂ ವೈಯಕ್ತಿಕ ಕಾಳಜಿ, ಮಾರ್ಗದರ್ಶನ ಮತ್ತು ಪ್ರೋತ್ಸಾಹ ದೊರೆಯುತ್ತದೆ. ಅಧ್ಯಾಪಕರ ಸಮರ್ಪಿತ ಸೇವೆ ಮತ್ತು ವಿದ್ಯಾರ್ಥಿಗಳ ಪರಿಶ್ರಮದ ಸಂಗಮವೇ ಈ ವಿಜಯಯಾತ್ರೆಯ ರಹಸ್ಯ.

ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿನ ಪ್ರಗತಿ

ಕಾಲೇಜು ವಿದ್ಯಾರ್ಥಿಗಳನ್ನು ಭವಿಷ್ಯದ ವೃತ್ತಿಜೀವನಕ್ಕೆ ಸಜ್ಜುಗೊಳಿಸುವ ಉದ್ದೇಶದಿಂದ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗೂ ಪ್ರೋತ್ಸಾಹ ನೀಡುತ್ತಿದೆ. ವಿಜ್ಞಾನ ವಿಭಾಗದಲ್ಲಿ CET, NEET, JEE ಮತ್ತು ವಾಣಿಜ್ಯ ವಿಭಾಗದಲ್ಲಿ C.A. Foundation ಪರೀಕ್ಷೆಗಳ ತಯಾರಿಗೆ ಪ್ರತಿದಿನ ವಿದ್ಯಾರ್ಥಿಗಳಿಗೆ ವಿಶೇಷ ತರಗತಿಗಳು, ಕರಿಯರ್ ಗೈಡನ್ಸ್ ಕಾರ್ಯಕ್ರಮಗಳು, ತಜ್ಞರ ಉಪನ್ಯಾಸಗಳು ಮತ್ತು Mock ಟೆಸ್ಟ್‌ ಗಳ ಮೂಲಕ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಜ್ಜುಗೊಳಿಸಲಾಗುತ್ತಿದೆ. ಉನ್ನತ ಶಿಕ್ಷಣಕ್ಕಾಗಿ ವೈದ್ಯಕೀಯ, ಇಂಜಿನಿಯರಿಂಗ್, ವಾಣಿಜ್ಯ ಮತ್ತು ನಿರ್ವಹಣಾ ಕ್ಷೇತ್ರಗಳಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳು ಕಾಲೇಜಿನ ಹೆಮ್ಮೆ.

2024-25ನೇ ಸಾಲಿನ KCET ಪರೀಕೆಯಲ್ಲಿ ರಾಜ್ಯಕ್ಕೆ 209ನೇ ರ್ಯಾಂಕಿನ ಗರಿ ಇದೇ ಸಂಸ್ಥೆಯ ವಿದ್ಯಾರ್ಥಿನಿಗೆ ಸಲ್ಲುತ್ತದೆ. ಇದರೊಂದಿಗೆ ಅಗ್ರ 10 ಸಾವಿರ ರ್ಯಾಂಕುಗಳಲ್ಲಿ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ 25 ವಿದ್ಯಾರ್ಥಿಗಳು ಸ್ಥಾನ ಪಡೆದಿರುವುದು ಇಲ್ಲಿನ ಸ್ಪರ್ಧಾತ್ಮಕ ಪರೀಕ್ಷೆಯ ತರಬೇತಿಯ ಸಾಧನೆ.

ಕ್ರೀಡಾ ಸಾಧನೆಗಳು

ಶೈಕ್ಷಣಿಕ ಸಾಧನೆಗಳ ಜೊತೆಗೆ ಕ್ರೀಡಾ ಕ್ಷೇತ್ರದಲ್ಲಿಯೂ ಕಾಲೇಜು ಉತ್ತಮ ಸಾಧನೆ ಮಾಡುತ್ತಿದೆ. ಪ್ರತಿ ವರ್ಷ ಅನೇಕ ವಿದ್ಯಾರ್ಥಿಗಳು ರಾಜ್ಯ-ರಾಷ್ಟ್ರಮಟ್ಟವನ್ನು ಪ್ರತಿನಿಧಿಸುವ ಮೂಲಕ ತಮ್ಮ ಕ್ರೀಡಾ ಪ್ರತಿಭೆಯನ್ನು ಅನಾವರಣಗೊಳಿಸುತ್ತಿರುತ್ತಾರೆ. ಕ್ರೀಡಾ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳಲ್ಲಿ ನಾಯಕತ್ವ, ಸಹಬಾಳ್ವೆ 3/5 ಆತ್ಮವಿಶ್ವಾಸವನ್ನು ಬೆಳೆಸುವುದು ಸಂಸ್ಥೆಯ ಆಶಯ.

ಸಾಂಸ್ಕೃತಿಕ ಸಾಧನೆಗಳು

ಕೇವಲ ಶೈಕ್ಷಣಿಕ ಮತ್ತು ಕ್ರೀಡಾ ಕ್ಷೇತ್ರವಲ್ಲದೆ, ಕಾಲೇಜು ಸಾಂಸ್ಕೃತಿಕ ಚಟುವಟಿಕೆಗಳಿಗೆ ವಿಶೇಷ ವೇದಿಕೆ ಒದಗಿಸುತ್ತಾ ಬಂದಿದೆ. ಅಂತರ್‌ಕಾಲೇಜು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಪ್ರಶಸ್ತಿಗಳು ಮತ್ತು ಇಲಾಖೆಯ ಎಲ್ಲಾ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಇಲ್ಲಿನ ವಿದ್ಯಾರ್ಥಿಗಳ ವಿಶಿಷ್ಟ ಸಾಧನೆಯು ಶೈಕ್ಷಣಿಕ ವೈವಿಧ್ಯತೆಗೆ ಹಿಡಿದ ಕೈಗನ್ನಡಿಯಂತಿದೆ. ವಾರ್ಷಿಕೋತ್ಸವ, ಯುವಜನೋತ್ಸವ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣೆಯ ಮೂಲಕ ಕಾಲೇಜು ವಿದ್ಯಾರ್ಥಿಗಳ ಸೃಜನಶೀಲತೆಯನ್ನು ಉತ್ತೇಜಿಸುತ್ತಾ ಬರುತ್ತಿದೆ.

ಸಮಗ್ರ ಅಭಿವೃದ್ಧಿಗೆ ಒತ್ತು

ಬಿಸಿನೆಸ್ ಡೇ. ಸೈನ್ಸ್ ಫೆಸ್ಟ್ ಮತ್ತು ಅನೇಕ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ವಾಣಿಜ್ಯ, ವೈಜ್ಞಾನಿಕ ಮತ್ತು ಸಮಾಜಮುಖಿ ಮನೋಭಾವ ಬೆಳೆಸಲಾಗುತ್ತಿದೆ. ಪರಿಸರ ಜಾಗೃತಿ ಕಾರ್ಯಕ್ರಮಗಳು ಮತ್ತು ಆರೋಗ್ಯ ತಪಾಸಣಾ ಶಿಬಿರಗಳು ಕಾಲೇಜಿನ ಸಾಮಾಜಿಕ ಹೊಣೆಗಾರಿಕೆಯನ್ನು ತೋರಿಸುತ್ತವೆ.

ವಿದ್ಯಾರ್ಥಿಗಳ ಕಲಿಕೆಯನ್ನು ಮತ್ತಷ್ಟು ಸುಗಮಗೊಳಿಸುವ ಡಿಜಿಟಲ್ ಕಲಿಕಾ ವಿಧಾನಗಳು, ಸ್ಮಾರ್ಟ್ ಕ್ಲಾಸ್‌ಗಳು ಮತ್ತು ತಂತ್ರಜ್ಞಾನ ಬಳಕೆಯ ಜೊತೆಯಲ್ಲಿ ವಿದ್ಯಾರ್ಥಿ ಮಾರ್ಗದರ್ಶನ ವ್ಯವಸ್ಥೆ ಹಾಗೂ ಪೋಷಕರ ಸಭೆಗಳು ಶೈಕ್ಷಣಿಕ ಪ್ರಗತಿಗೆ ಬಲ ನೀಡುತ್ತಿದೆ.

ವೆಂಕಟರಮಣ ಪದವಿ ಪೂರ್ವ ಕಾಲೇಜು ಶೈಕ್ಷಣಿಕ ಶ್ರೇಷ್ಠತೆ, ಕ್ರೀಡಾ ಸಾಧನೆ, ಸಾಂಸ್ಕೃತಿಕ ವೈಭವ ಹಾಗೂ ಮೌಲ್ಯಾಧಾರಿತ ಶಿಕ್ಷಣವನ್ನು ಸಮನ್ವಯಗೊಳಿಸಿದ ಕುಂದಾಪುರದ ಸಮಗ್ರ ಶಿಕ್ಷಣ ಸಂಸ್ಥೆಯಾಗಿದೆ.

ಚಾರ್ಟಡ್ ಭವಿಷ್ಯದ ವೈದ್ಯರು, ಇಂಜಿನಿಯರ್‌ಗಳು, ಅಕೌಂಟೆಂಟ್‌ಗಳು, ಆಡಳಿತಾಧಿಕಾರಿಗಳು ಮತ್ತು ವಿಷೇಶವಾಗಿ ಜವಾಬ್ದಾರಿಯುತ ನಾಗರಿಕರನ್ನು ರೂಪಿಸುವಲ್ಲಿ ಈ ಸಂಸ್ಥೆಯ ಪಾತ್ರ ಅಮೂಲ್ಯವಾಗಿದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ

ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜುಒಂಬತ್ತು ದಂಡಿಗೆ ರಸ್ತೆ, ಕುಂದಾಪುರ -576201

ಮೊಬೈಲ್ ಸಂಖ್ಯೆ : 7795055376