ಮಣಿಪಾಲದ ಈ ಕೆರೆ ಪ್ರದೇಶದಲ್ಲಿ ಏನೇನ್ ನಡಿಯುತ್ತೆ ಗೊತ್ತಾ?: ದುರಾವಸ್ಥೆಯ ಹಳ್ಳ, ಈ ಮಣ್ಣ ಪಳ್ಳ

ರಾಮ್ಅಜೆಕಾರು ಕಾರ್ಕಳ

ಉಡುಪಿ ಜಿಲ್ಲೆಯ ಮಣಿಪಾಲ ಶಿಕ್ಷಣ ಕ್ಷೇತ್ರದ ರಾಜಧಾನಿ. ಇಲ್ಲಿನ ಹಿರಿದಾದ ಕೆರೆ ಮಣ್ಣ ಪಳ್ಳ, ನೂರ ಇಪ್ಪತ್ತು ಎಕರೆ ಪ್ರದೇಶದಲ್ಲಿ ವ್ಯಾಪಿಸಿದೆ. ಈಗ ಇದೇ ಕೆರೆ  ಮಣ್ಣ ಪಳ್ಳ ಪರಿಸರ ಅವ್ಯವಸ್ಥೆಯ ತಾಣವಾಗಿ‌ ಮಾರ್ಪಾಡಾಗಿದೆ. ಸರಿ ಸುಮಾರು 5 ಕೋಟಿ ರೂಪಾಯಿ ಗಳ ವೆಚ್ಚದಲ್ಲಿ ಮಣಿಪಾಲ್ ನ ಮಣ್ಣ ಪಳ್ಳ ವನ್ನು ಅಭಿವೃದ್ಧಿ ಪಡಿಸಿ ಉತ್ತಮ ಗೊಳಿಸಲಾಗಿತ್ತು. ಎರಡು ಕಿಮಿ ಉದ್ದದ ವಾಕಿಂಗ್ ಟ್ರ್ಯಾಕ್ ಕೂಡ ನಿರ್ಮಿಸಿ ಜಿಲ್ಲೆಯ ಅತಿ ದೊಡ್ಡ ಟ್ರ್ಯಾಕ್ ಹೆಸರಿನಿಂದ ಗುರುತಿಸಲ್ಪಟ್ಟಿತ್ತು. ಆದರೆ ಸೂಕ್ತ ರೀತಿಯಲ್ಲಿ ನಿರ್ವಹಣೆ ಇಲ್ಲದೆ ಮಣ್ಣಪಳ್ಳ ಸೊರಗುತ್ತಿದೆ.

https://youtu.be/sTi-l7Y6FyI

ಪ್ಲಾಸ್ಟಿಕ್ – ಮದ್ಯದ ಬಾಟಲಿಗಳ ಸ್ಟೋರ್ ಹೌಸ್:

ಮಣ್ಣ ಪಳ್ಳ ಮಣಿಪಾಲದ ಜನರ ಜೀವನಾಡಿ .ಇಲ್ಲಿನ ಸಮೃದ್ಧವಾದ ಅಂತರ್ಜಲದ ಮಟ್ಟದ ಪರಿಣಾಮವಾಗಿ ಸುತ್ತಮುತ್ತಲಿನ ಬಾವಿಗಳಲ್ಲಿ ನೀರಿನ ಪ್ರಮಾಣ ಹೆಚ್ಚಿದೆ .ಕೆರೆಯ ಸುತ್ತ ನಡೆದುಕೊಂಡು ಹೋಗಲು ‌ಅನುಕೂಲವಾಗುವಂತೆ ಸುಮಾರು ಒಂದು ವರೆ ಕೋಟಿ ವೆಚ್ಚದಲ್ಲಿ ಇಂಟರ್ಲಾಕ್ ಅಳವಡಿಸಿ ವಾಕಿಂಗ್ ಟ್ರ್ಯಾಕ್ ನಿರ್ಮಿಸಲಾಗಿತ್ತು .ಆದರೆ ಅದರ ಸುತ್ತಮುತ್ತಲು ಕುಡುಕರು ಹಾಗೂ ಪ್ರವಾಸಿ ಗರು ಪ್ಲಾಸ್ಟಿಕ್ ಹಾಗೂ ಮಧ್ಯ ದ ಬಾಟಲಿ ಗಳನ್ನು ಒಡೆದು ಹಾಕಿ ಪರಿಸರವನ್ನು ಹಾಳುಗೆಡವುತಿದ್ದಾರೆ. ಸುತ್ತಲೂ  ಪೊದೆ ಗಿಡಗಳು ಹಾಗೂ ಹುಲ್ಲುಗಳಿಂದ ತುಂಬಿ ಹೋಗಿವೆ. ಸೋಲಾರ್ ಲೈಟ್‌ ಗಳು ಕಿತ್ತು ಹೋಗಿವೆ.

ಅನೈತಿಕ ಚಟುವಟಿಕೆ ನಡಿತಾನೇ ಇದೆ:

ಟ್ರಾಕ್ ಸುತ್ತ ಮುತ್ತ ಅರಣ್ಯ ಇಲಾಖೆ ಹಾಗೂ ಖಾಸಗಿಯವರ ಸಹಾಯದಿಂದ ಗಿಡಗಳನ್ನು ನೆಟ್ಟಿದ್ದರೂ, ಹದಿಹರೆಯದ ಯುವ ಜೋಡಿಗಳು ಅದರ ಪಕ್ಕದಲ್ಲಿ ಕುಳಿತು ಅನೈತಿಕ ಚಟುವಟಿಕೆಗಳನ್ನು ಮಾಡುತ್ತಿರುವುದರಿಂದ ಸುತ್ತ ಮುತ್ತ ಲಿನ ವಾಕಿಂಗ್ ಜಾಗಿಂಗ್ ಮಾಡುವ ಜನರಿಗೆ ಮುಜುಗರ ವಾಗುತ್ತಿದೆ. ವಾಕಿಂಗ್ ಟ್ರಾಕ್ ಮೇಲೆ ವಾಹನಗಳನ್ನು ತರಿಸಿಕೊಂಡು ಅದರಲ್ಲಿ ಸಾರ್ವಜನಿಕರಿಗೆ ತೊಂದರೆ  ಉಂಟು ಮಾಡುತ್ತಿದ್ದಾರೆ.

ಕಿತ್ತು‌ಹೋಗಿರುವ ಗೇಟು :

ಕೆರೆಯ ಇನ್ನೊಂದು ಪಾರ್ಶದಲ್ಲಿ ದೊಡ್ಡದಾದ ಕ್ರೀಡಾಂಗಣ ನಿರ್ಮಿಸಿದ್ದು ಅಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಸರಿ ಸುಮಾರು ಹದಿನೈದು ಲಕ್ಷಗಳ ವೆಚ್ಚದಲ್ಲಿ ಗ್ಯಾಲರಿ ನಿರ್ಮಿಸಲಾಗಿತ್ತಾದರೂ ಪ್ರಯೋಜನಕ್ಕೆ ಬಂದಿಲ್ಲ .
ಆದರೆ ಅದರಲ್ಲಿ ಹುಲ್ಲು ಗಿಡಗಂಟಿಗಳು ಬೆಳೆದು ಗುರುತು ಸಿಗದಂತಿದೆ . ಕ್ರೀಡಾಂಗಣದ ಮಧ್ಯ ಭಾಗದಲ್ಲಿ ಖಾಸಗಿಯವರೆ ಮಕ್ಕಳಿಗೆ ಅನುಕೂಲವಾಗುವಂತೆ ವಾಲಿಬಾಲ್ ನೆಟ್ ಅಳವಡಿಸಿದ್ದಾರೆ . ಅದರ ಬಲ ಪಾರ್ಶ್ವ ದಲ್ಲಿ ಗಿಡಗಳೆ ತುಂಬಿ ಹಾಳು ಕೊಂಪೆಯಾಗಿ ಮಾರ್ಪಟ್ಟಿದೆ.  .ಗೇಟ್ ಕಿತ್ತು ಹೋದ ಪರಿಣಾಮ ಮಧ್ಯ ರಾತ್ರಿಯಲ್ಲಿ ಖಾಸಗಿ ವ್ಯಕ್ತಿ ಗಳು ಮಧ್ಯ ಸೇವಿಸಿ ಬಾಟಲಿ ಗಳನ್ನು ಒಡೆದು ಹಾಕಿ ಮ್ಯೂಸಿಕ್ ಗಳನ್ನಿಟ್ಟು ಪಾರ್ಟಿ ಮಾಡುತ್ತ ಜನರ ಶಾಂತಿ ಭಂಗ ಗೊಳಿಸುತಿದ್ದಾರೆ.

ಬಟರ್ ಪ್ಲೈ ಪಾರ್ಕ್ ನಲ್ಲಿ ಚಿಟ್ಟೆಗಳೇ ಇಲ್ಲ:

ಮಣ್ಣ ಪಳ್ಳ ದಪ್ರಸನ್ನ ಗಣಪತಿ ದೇವಾಲಯದ ಕೆಳಭಾಗದಲ್ಲಿ ಎರಡು ಎಕರೆ ವಿಶಾಲವಾದ ಪ್ರದೇಶದಲ್ಲಿ ಹಿರಿಯ ನಾಗರಿಕರಿಗಾಗಿ ಸಣ್ಣ ವಾಕಿಂಗ್ ಟ್ರಾಕ್ ನಿರ್ಮಿಸಿ ಜೊತೆಗೆ ಚಿಟ್ಟೆ ಪಾರ್ಕ್ ನಿರ್ಮಿಸಲಾಗಿತ್ತು. ಸಾಕಷ್ಟು ಹೂವಿನ ಗಿಡಗಳನ್ನು ನೀಡಲಾಗಿತ್ತು. ಆದರೆ ಅದರ ಸುತ್ತ ಮುತ್ತ ಚಿಟ್ಟೆ ಗಳು ಕಾಣಸಿಗುತಿಲ್ಲ ಆದರೆ ಬೃಹದಾಕಾರ‌ ಬೆಳೆದ ಹುಲ್ಲುಗಳಿವೆ. ಆದರೆ ಟ್ರಾಕ್ ಹುಲ್ಲಿನಿಂದ ಆವೃತವಾದ ಪರಿಣಾಮದಿಂದ ಜನರು ಸಂಚರಿಸಲು ಹಿಂದೇಟು ಹಾಕುತ್ತಿದ್ದಾರೆ.

ಕಿತ್ತು ಹೋದ ದೋಣಿ ಮುಂದೆ ಸಾಗದು:

ನೂರ ಇಪ್ಪತ್ತು ಎಕರೆ ವಿಶಾಲವಾದ ಕೆರೆಯಲ್ಲಿ ಬೋಟಿಂಗ್ ವ್ಯವಸ್ಥೆ ಮಾಡಲಾಗಿತ್ತು .ಆದರೆ ತಾಂತ್ರಿಕ ಕಾರಣಗಳಿಂದ ಹಾಗೂ ನಿರ್ವಹಣೆ ನೆಪ‌ನೀಡಿ ದೋಣಿ ವಿಹಾರ ವನ್ನು ಕೈಬಿಡಲಾಗಿದೆ. ಆದರೆ ಅಲ್ಲಿದ್ದ ದೋಣಿಗಳು ತುಕ್ಕು ಹಿಡಿದು ಕೋಟ್ಯಾಂತರ ರೂಪಾಯಿ ನಷ್ಟ ವಾಗುತಿದೆ.
ದಿನನಿತ್ಯ ಸರಿಸುಮಾರು ಮೂರು ಸಾವಿರ ಜನರು ಮಣ್ಣ ಪಳ್ಳ ಕ್ಕಾಗಿ ವಿಹಾರಿಸಲು ಜಾಗಿಂಗ್ ವಾಕಿಂಗ್ ಗಾಗಿ ಆಗಮಿಸುತಿದ್ದಾರೆ ಆದರೆ ಇಲ್ಲಿಯ ಅವ್ಯವಸ್ಥಿತ ತೊಂದರೆ ಗಳಿಗೆ ಜನ ರೋಸಿ ಹೋಗಿದ್ದಾರೆ. ಮಣ್ಣಪಳ್ಳದ ಮೇಲ್ಬಾಗದಲ್ಲಿ ಮಣಿಪಾಲ ದ ಪ್ಲಾನಿಟೊರಿಯಂ ಹಾಗು ಪಾರಂಪರಿಕ ವಾಸ್ತುಶಿಲ್ಪ ದ ಹಸ್ತಶಿಲ್ಪ ಗ್ರಾಮ ವನ್ನು ನೋಡಲು ಬರುವ ಪ್ರವಾಸಿಗರಿಗೆ ಈ ಅವ್ಯವಸ್ಥೆ ನೋಡಿ ಮರುಕ ಪಡಬೇಕಾಗಿದೆ. .

ಮಣಿಪಾಲ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ವಾಸಿಯಾಗಿದ್ದರೂ ಇಲ್ಲಿನ ಜೀವನಾಡಿಯಾದ, ನೀರಿನ ಮೂಲವಾದ ಮಣ್ಣಪಳ್ಳ ಕೆರೆ ನಿರ್ವಹಣೆ ವಿಲ್ಲದೆ ಸೊರಗುತಿರುವುದು ಜನರ ನಿದ್ದೆಗೆಡಿಸಿದೆ. ನಿರ್ವಹಣೆ ಮಾಡದ ಜಿಲ್ಲಾಡಳಿತ ದ ವಿರುಧ್ಧ ಜನರು ಗರಂ ಆಗಿದ್ದಾರೆ.

ಮೂಲ ಸೌಕರ್ಯಗಳನ್ನು ಹಾಗು ಸುತ್ತ ಮುತ್ತ ಬೆಳೆದ ಕಳೆಗಳನ್ನು ತೆಗೆದು ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡಿದರೆ ಪ್ರವಾಸಿಗರು ಹೆಚ್ಚು ಹೆಚ್ಚು ಆಗಮಿಸ ಬಹುದಾಗಿದೆ.ಕೆರೆಯ ಅಂದ ಹೆಚ್ಚಿಸಲು ಬೋಟಿಂಗ್ ವ್ಯವಸ್ಥೆ, ಗಿಡ ಬಳ್ಳಿಗಳ ಹುಲ್ಲುಗಳನ್ನು ಕತ್ತರಿಸಿ ನೈರ್ಮಲ್ಯ ಕಾಪಾಡಬೇಕಾಗಿದೆ .ನಿರ್ವಹಣೆ ಮಾಡಬೇಕಾಗಿದೆ. ಪ್ಲಾಸ್ಟಿಕ್ ಹಾಗೂ ಬಾಟಲಿಗಳನ್ನು ಹುಡಿ ಗೈಯುವರನ್ನು ಹಿಡಿದು ಕ್ರಮ ಕೈಗೊಳ್ಳಬೇಕಾಗಿದೆ.ಕ್ರೀಡಾಂಗಣ ದ ಸುತ್ತ ಮುತ್ತ ಪ್ರದೇಶದಲ್ಲಿ ಬೆಳೆದಿರುವ ಪೊದೆಗಳನ್ನು ಕತ್ತರಿಸಿ ಜನ ಸ್ನೇಹಿಯಾಗಿಸಬೇಕು. ಮಕ್ಕಳಿಗೆ ಆಟವಾಡಲು ಯೋಗ್ಯ ಕ್ರೀಡಾಂಗಣ ವಾಗವಾಗಬಹುದು.”

ಜಯಕರ್
ಸಾಮಾಜಿಕ ಕಾರ್ಯಕರ್ತರು
ಮಣ್ಣಪಳ್ಳ ಮಣಿಪಾಲ್