ವರದಿ : ಚರಣ್ ಸಂಪತ್
ಕಾರ್ಕಳ : ವಲಯ ಅರಣ್ಯ ವ್ಯಾಪ್ತಿಯಲ್ಲಿನ ಸರಿ ಸುಮಾರು ಮೂರು ನಾಲ್ಕು ವರ್ಷಗಳ ಹಿಂದೆ ರಸ್ತೆ ಬದಿ ಹಾಗೂ ಇನ್ನಿತರ ಕಡೆಗಳಲ್ಲಿ ನೆಟ್ಟಂತಹ 150ಕ್ಕೂ ಅಧಿಕ ಹಲಸಿನ ಗಿಡಗಳಿಗೆ ಇದೀಗ ಕಾಂಡ ಕೊರಕ ಹುಳ ಬಾದೆಯಿಂದ ಗಿಡಗಳು ನಿರ್ಜೀವ ಸ್ಥಿತಿಗೆ ತಲುಪಿದೆ. ಅರಣ್ಯ ಇಲಾಖೆಯ ಪಟ್ಟ ಶ್ರಮ ಇದೀಗ ಕೊರಕ ಹುಳ ಬಾದೆಯಿಂದ ನೀರಿನಲ್ಲಿ ಹೋಮ ಮಾಡಿದಂತಾಗಿದೆ. ಲವಲವಿಕೆ ಹಾಗೂ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದ್ದ ಗಿಡ ಮರಗಳು ಇದೀಗ ಪಾಕೃತಿ ವಿಕೋಪದಿಂದಾಗಿ ಕೋಮಾ ಸ್ಥಿತಿಗೆ ತಲುಪಿದೆ.
ಏನಿದು ಕೊರಕ ಹುಳ ಬಾದೆ..!
ಕೊರಕ ಹುಳಗಳು ಹೆಚ್ಚಾಗಿ ವಾತಾವರಣದ ಗೋಳಿ ಮರ, ಅಲದ ಮರ,ಬಸ್ರಿ ಮರಗಳಲ್ಲಿ ಕಂಡು ಬರುತ್ತಿದ್ದವು. ಯಾವಾಗ ಇಂತಹ ಜಾತಿಯ ಮರಗಳ ಮಾರಣ ಹೋಮ ನಡೆಯೊತ್ತೋ ಅಂದಿನಿಂದ ಈ ಹುಳಗಳ ಸಂಖ್ಯೆ ಏರುತ್ತಿದೆ. ಕಾರಣ ಹುಳಗಳು ವಾಸಿಸುತ್ತಿದ್ದ ಮರಗಳ ಪೊಟರೆ ಭಾಗದಲ್ಲಿ ಹಕ್ಕಿಗಳು ವಾಸಮಾಡುತ್ತಿದ್ದವು ಆ ಸಂದರ್ಭದಲ್ಲಿ ಹಕ್ಕಿಗಳು ಈ ಹುಳಗಳನ್ನು ತಿಂದು ಬದುಕುತ್ತಿದ್ದವು. ಹೀಗೆ ಜೈವಿಕವಾಗಿ ನಿಯಂತ್ರಣವಾಗುತ್ತಿದ್ದವು ಇದೀಗ ಗೋಳಿಮರ ಬಸಿರಿ ಹಾಗೂ ಅಲದ ಮರಗಳು ನಾಶವಾಗಿರುವುದರಿಂದ ಹಕ್ಕಿಗಳು ನಾಪತ್ತೆಯಾಗಿವೆ. ಪ್ರಕೃತಿ ಅಸಮತೋಲನವೇ ಇದಕ್ಕೆ ಸ್ಪಷ್ಟ ಕಾರಣವಾಗಿದೆ.
ಇದೀಗ ಈಹುಳಗಳು ಸಂತತಿ ಹೆಚ್ಚಾಗಿದ್ದು ಅವುಗಳು ಹಲಸಿನ ಗಿಡದ ಕಾಂಡದ ಮೂಲಕ ಸೇರಿ ಅವುಗಳ ಮೃದುವಾದ ತಿರುಳನ್ನು ತಿಂದು ಹಾಕುತ್ತಿದೆ. 48 ಗಂಟೆಯೊಳಗ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದ್ದ ಗಿಡಮರಗಳು ನಿರ್ಜೀವ ಸ್ಥಿತಿಗೆ ಬಂದು ತಲುಪುತ್ತಿದೆ.
ಕೊರಕ ಹುಳುಗಳನ್ನು ನಿಯಂತ್ರಿಸದಿದ್ದರೆ ಮುಂದಿನ ದಿನಗಳಲ್ಲಿ ಈ ಹುಳಗಳು ಪರಿಸರದಲ್ಲಿನ ಇನ್ನಿತರ ಸಸ್ಯ ಸಂಕುಲ ಗಳ ಮೇಲೆ ಗಂಭೀರ ಪರಿಣಾಮಗಳು ಬೀರಿಲಿದೆ.
ವಲಯ ಅರಣ್ಯ ಅಧಿಕಾರಿ ದಿನೇಶ್ ನೇತೃತ್ವದಲ್ಲಿ ಮುಂಜಾಗ್ರತಾ ಕ್ರಮದ ಜತೆಗೆ ಗಿಡಮರಗಳನ್ನು ಉಳಿಸುವ ಪ್ರಯತ್ನಗಳು ನಡೆಸಲಾಗುತ್ತಿದ್ದು. ಕೊರಕಹುಳಗಳಿಗೆ ಈಗಾಗಲೇ ಔಷದ ಸಿಂಪಡಿಸುವ ಕೆಲಸ ಕಾರ್ಯಗಳು ಭರದಿಂದ ಸಾಗುತ್ತಿದೆ. ಆ ಮೂಲಕ ಈಗಾಗಲೇ ಹಲವಾರು ಗಿಡಮರಗಳನ್ನು ಉಳಿಸಲಾಗಿದೆ .ಕೊರಕ ಹುಳ ಬಾಧೆ ಎಂಬುದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ . ಹುಳ ತಗುಲಿದ ಬಾಗಗಳಿಗೆ ನಮ್ಮ ಸಿಬ್ಬಂದಿ ಗಳಿಂದ ಔಷಧ, ದ್ರಾವಣಗಳನ್ನು ಸಿಂಪಡಿಸುವ ಕೆಲಸವಾಗುತ್ತಿದೆ. ಹಾಗೂ ಗಿಡಮರಗಳಿಗೆ ಸೋಂಕು ತಗುಲಿದ ಕೊಂಬೆಗಳನ್ನು ಕತ್ತರಿಸಲಾಗಿದೆ. ಎನ್ನುತ್ತಾರೆ ಅರಣ್ಯಧಿಕಾರಿ ದಿನೇಶ್
ವಾತಾವರಣದಲ್ಲಿರುವ ಗೋಳಿ,ಅಲ ಬಸ್ರಿ ಮರಗಳನ್ನು ಕಡಿದು ಹಾಕಲಾಗುತ್ತಿದೆ. ಈ ಮರಗಳನ್ನು ಹಾಗೂ ಮರಗಳಲ್ಲಿ ವಾಸಿಸುವ ಕೊರಕ ಹುಳದಂತಹ ಹುಪ್ಪಟೆಗಳನ್ನು ನಂಬಿ ಹಕ್ಕಿಗಳು ವಾಸಿಸುತ್ತಿದ್ದವು. ಇವೆಲ್ಲಾ ಒಂದಕ್ಕೊಂದು ಆಸರೆಯಾಗಿತ್ತು. ಇದರಿಂದಾಗಿ ಹುಳಗಳ ಸಂಖ್ಯೆ ಜೈವಿಕವಾಗಿ ನಿಯಂತ್ರಣವಾಗುತ್ತಿತ್ತು ಇದೀಗ ಮರಗಳು ಇಲ್ಲ ಹಕ್ಕಿಗಳೂ ಇಲ್ಲ ಅದರೆ ಹುಳುಗಳ ಸಂತತಿ ಹೆಚ್ಚಾಗಿದೆ
ಲಕ್ಷ್ಮೀ ಚರಣ್, ಪರಿಸರ ಪ್ರೇಮಿ