ಉಡುಪಿ: ಶ್ರೀ ಕೃಷ್ಣಮಠ ಪರಿಸರದ ರಥಬೀದಿಯಲ್ಲಿರುವ ಶ್ರೀ ಅನಂತೇಶ್ವರ ದೇವಸ್ಥಾನದ ವಾರ್ಷಿಕ ರಥೋತ್ಸವ ಸಂಪನ್ನಗೊಂಡಿತು.
ರಥೋತ್ಸವ ಪ್ರಯುಕ್ತ ಪ್ರಧಾನ ಹೋಮ, ಕಲಶಾಭಿಷೇಕ, ಮಹಾಪೂಜೆ, ಬಲಿ ಉತ್ಸವ, ಮಧ್ಯಾಹ್ನ ಪಲ್ಲಪೂಜೆ, ಅನ್ನಸಂತರ್ಪಣೆಯೊಂದಿಗೆ ವಿವಿಧ ಧಾರ್ಮಿಕ ಪ್ರಕ್ರಿಯೆಗಳು ನೆರವೇರಿತು.
ಈ ಸಂದರ್ಭ ದೇವಸ್ಥಾನವನ್ನು ವಿವಿಧ ಬಗೆಯ ಹೂವು ಮತ್ತು ತರಕಾರಿಗಳಿಂದ ವಿಶೇಷವಾಗಿ ಅಲಂಕಾರ ಮಾಡಲಾಯಿತು. ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು, ಪರ್ಯಾಯ ಶ್ರೀ ಶೀರೂರು ಮಠಾಧೀಶರಾದ ಶ್ರೀ ವೇದವರ್ಧನ ತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ರಥಾರೋಹಣ ನಡೆಯಿತು. ದೇವಸ್ಥಾನದ ಆಡಳಿತ ಮಂಡಳಿಯ ನಾಗರಾಜ ಆಚಾರ್ಯ, ಪ್ರಸನ್ನ ಆಚಾರ್ಯ, ವಿಷ್ಣುಮೂರ್ತಿ ಉಪಾಧ್ಯ ಉಪಸ್ಥಿತರಿದ್ದರು.



















