ಉಡುಪಿ:ಬಸ್ರೂರು ಅಪ್ಪಣ್ಣ ಹೆಗ್ಡೆ ಇನ್ನು ನೆನಪು ಮಾತ್ರ.ಬಸ್ರೂರು ಅಂದ ತಕ್ಷಣವೇ ನೆನಪಾಗುವುದು ಅಪ್ಪಣ್ಣ ಹೆಗ್ಡೆಯವರ ಹೆಸರು.ಅಪ್ಪಣ್ಣ ಹೆಗ್ಡೆವರ ಕಾರ್ಯ ಚಿಂತನೆಗಳು ಬಹು ಕ್ಷೇತ್ರ ಸ್ಪರ್ಶಿಯವಾದದ್ದು.ಶಿಕ್ಷಣ ಧಾಮಿ೯ಕತೆ ಸಾಮಾಜಿಕ ಕಾಳಜಿ ಮಾನವೀಯತೆಯ ಸಂಬಂಧ ರಾಜಕೀಯ ಮುತ್ಸದಿ ತನದ ವ್ಯಕ್ತಿತ್ವ.ಇವೆಲ್ಲ ಅವರ ಆಮೇೂಘವಾದ ವ್ಯಕ್ತಿತ್ವದ ಗುಣಗಳೇ ಹೆಗ್ಡೆ ಅವರ ಸಾಧನೆಯ ಪುಟಗಳನ್ನು ಉತ್ತುಂಗಕ್ಕೆ ಏರಿಸಿದೆ ಅಂದರೆ ತಪ್ಪಾಗಲಾರದು.
ಅಪ್ಪಣ್ಣ ಹೆಗ್ಡೆ ಅವರ ಬಾಲ್ಯದ ನೆನಪುಗಳನ್ನು ಸ್ಮರಿಸಿಕೊಂಡಾಗ ಅಪ್ಪಣ್ಣ ಹೆಗ್ಡೆ ಅವರಿಗೂ ಮಣಿಪಾಲದ ಬ್ರಹ್ಮ ದಿ.ಮಾಧವ ಪೈಗಳಿಗೂ ಉಡುಪಿ ಎಂಜಿಎಂ.ಕಾಲೇಜಿಗೂ ಒಂದು ಅನ್ಯೇೂನ್ಯವಾದ ಅವಿನಾವಭಾವ ಸಂಬಂಧವಿರುವುದನ್ನು ಸ್ವತ: ಅಪ್ಪಣ್ಣ ಹೆಗ್ಡೆ ಅವರೆ ನೆನಪಿಸಿಕೊಂಡಿದ್ದಾರೆ.
ಅಪ್ಪಣ್ಣ ಹೆಗ್ಡೆ ಅವರ ಅಮ್ಮನ ಮನೆ ಬಸ್ರೂರು..ಆದರೆ ಹೆಗ್ಡೆ ಅವರ ತಂದೆಯ ಮನೆ ಮಣಿಪಾಲ್ ಸಮೀಪದ ಪರ್ಕಳ ಹಿರೇಬೆಟ್ಟು ಕಬಿಯಾಡಿ.ತಂದೆ ದಿ.ರಾಮಣ್ಣ ಹೆಗ್ಡೆ. ಬಾಲ್ಯದ ಆಟ ಪಾಠಗಳನ್ನು ಅಮ್ಮನ ಮನೆಯಲ್ಲಿ ಪೂರೈಸಿದ ಅಪ್ಪಣ್ಣ ಹೆಗ್ಡೆ ಅವರು ತನ್ನ 8ನೇ ತರಗತಿಗೆ ಬಂದಿದ್ದು ತಂದೆಯ ಮನೆಯ ಕಡೆಗೆ.ಇಲ್ಲಿ ಕಳೆದ ಬಾಲ್ಯದ ಸವಿ ಸವಿ ನೆನಪುಗಳು ಅತ್ಯಂತ ರೇೂಚಕ ಪ್ರಸಂಗಳು.ಮಣಿಪಾಲ್ ಹೈಸ್ಕೂಲ್ಗೆ 8 ನೇ ತರಗತಿಗೆ ಪ್ರವೇಶ.ದಿನ ನಿತ್ಯವೂ ನಡೆದು ಕೊಂಡು ಶಾಲೆಗೆ ಬರುವುದು.ಸುಮಾರು 80 ವರುಷಗಳ ಹಿಂದೆ ಪಕ೯ಳ ಮಣಿಪಾಲ್ ಉಡುಪಿ ಕಡೆಯ ದಾರಿಗಳು ಹೇಗಿರ ಬಹುದು ನೀವೇ ಊಹಿಸಿ.ಎಂಜಿಎಂ.ಕಾಲೇಜಿನ್ನು ಧಾಟಿ ಮಣಿಪಾಲ್ ದ ದಾರಿಯಲ್ಲಿ ನಡೆದು ಬರುವುದೆಂದರೆ ಕಾಡಿನ ಮಧ್ಯದಲ್ಲಿ ನಡೆದು ಬರುವ ಅನುಭವ.ಪ್ರಾಣಿ ಪಕ್ಷಿಗಳ ಕಿರುಚಾಟ…ಮಧ್ಯದಲ್ಲಿ ಒಂದು ಸ್ಮಶಾನ ಭೂಮಿ..ಇಲ್ಲಿ ಅದೆಷ್ಟೋ ಕೂಗು ಅಪಸ್ವರಗಳನ್ನು ಕೇಳಿ ನಮ್ಮ ಹೆಗ್ಡೆಯವರು ಬಾಲ್ಯದಲ್ಲಿ ಹೆದರಿ ಬೆಚ್ಚಿ ಬಿದ್ದ ಪ್ರಸಂಗವನ್ನೂ ಇಂದಿಗೂ ನೆನಪಿಸಿಕೊಳ್ಳುತ್ತಾರೆ.
ಇಂಟರ್ ಮಿಡಿಯೇಟ್ ಕಲಿಕೆಗಾಗಿ ಎಂಜಿಎಂ.ಕಾಲೇಜಿಗೆ ಸೇರಿದ ಸಿಹಿ ಕಹಿ ಅನುಭವ ಇನ್ನೂ ಸ್ವಾರಸ್ಯಕರವಾಗಿದೆ.10ನೇ ತರಗತಿಯಲ್ಲಿ ಎರಡು ಪ್ರಶ್ನೆ ಪತ್ರಿಕೆಗಳು ಪರೀಕ್ಷೆಗೆ ಮೊದಲೇ ಸಿಕ್ಕಿದ ಕಾರಣ ವಿಜ್ಞಾನ ಲೆಕ್ಕದಲ್ಲಿ ಎಣಿದಷ್ಟು ಅಂಕಗಳು ಹೆಗ್ಡೆ ಅವರ ಪಾಲಿಗೆ ಬಂದವು.ಅದನ್ನೆ ನಂಬಿಕೊಂಡು ಎಂಜಿಎಂ.ಕಾಲೇಜಿನಲ್ಲಿ ಪ್ರವೇಶ ಬಯಸಿ ಬಂದ ಹೆಗ್ಡೆಯವರು ತನಗೆ ಸೈನ್ಸ್ ಬೇಕೇ ಬೇಕು ಎಂದು ಹಠ ಹಿಡಿದರು.ಆದರೆ ಅಂದಿನ ಪ್ರಾಂಶುಪಾಲರಾದ ಪ್ರೊ.ಸುಂದರರಾಯರು ನಿನಗೆ ಸೈನ್ಸ್ ಬೇಡ ಎಂದು ಹೇಳಿದರೂಕೇಳದ ಅಪ್ಪಣ್ಣ ಹೆಗ್ಡೆ ಯವರು ಅಂತೂ ಕೊನೆಗೂ ಸೈನ್ಸ್ ಸೇರಿಯೇ ಬಿಟ್ಟರು.ಆದರೆ ಒಂದೇ ತಿಂಗಳಲ್ಲಿ ಈ ವಿದ್ಯಾರ್ಥಿಗೆ ಅಥ೯ವಾಯಿತು ತನಗೆ ಸೈನ್ಸ್ ಹಿಡಿಸುವುದಿಲ್ಲ ಅನ್ನುವ ಸತ್ಯ ಸಂಗತಿ..ಮತ್ತೆ ಸುಂದರರಾಯರಲ್ಲಿ ಇದೇ ವಿದ್ಯಾರ್ಥಿ ನಿವೇದಿಸಿಕೊಳ್ಳುತ್ತಾನೆ ಸರ್ ನನಗೆ ಸೈನ್ಸ್ ಬೇಡ.ಆಗ ಕಾಲ ಮಿಂಚಿಹೇೂಗಿತ್ತು. ಅಂತೂ ಇಂತೂ ಈ ಸುಖ ಕಷ್ಟಗಳ ಜಂಜಾಟದಲ್ಲಿ ಕಾಲೇಜಿಗೆ ಗುಡ್ ಬೈ ಹೇಳಿ 1956ರಲ್ಲಿ ಮದ್ರಾಸ್ ಹೇೂಗಿ ಮಿನೆವಾ೯ ಟ್ಯೂಟೇೂರಿಯಲ್ ಕಾಲೇಜಿನಲ್ಲಿ ಇಂಗ್ಲಿಷ್ ಮತ್ತು ಸೈನ್ಸ್ ನಲ್ಲಿ ಪರೀಕ್ಷೆ ತೆಗೆದುಕೊಂಡು ಬರೇ ಇಂಗ್ಲಿಷ್ ನಲ್ಲಿ ಪಾಸಾಗಿ ಹೊರಗೆ ಬಂದರು.
ಇವರು 9 ನೇ ಕ್ಲಾಸ್ ನಲ್ಲಿ ಕಲಿಯುವಾಗ ಡಾ.ಮಾಧವ ಪೈಗಳು ತರಗತಿಗೆ ಬಂದು ಹೇಳಿದ ಉಪದೇಶದ ಮಾತು ಇಂದಿಗೂ ಹೆಗ್ಡೆ ಅವರ ಸ್ಮೃತಿ ಪಟ್ಟಲದಲ್ಲಿ ಅಚ್ಚಳಿಯದೆ ಉಳಿದಿದೆ.ಮಾಧವ ಪೈಯವರು ಹೆಗ್ಡೆ ಅವರಿಗೆ ಕೇಳುತ್ತಾರೆ “ಕಳೆದ ವರುಷ ಓದಿದ ಪುಸ್ತಕಗಳನ್ನು ಏನುಮಾಡಿದ್ದಿಯಾ?ಅದಕ್ಕೆ ವಿದ್ಯಾರ್ಥಿ ಹೆಗ್ಡೆ ಹೇಳುತ್ತಾರೆ.”ಅದನ್ನು ನನ್ನ ಸ್ನೇಹಿತ ಚಂದ್ರ ಮರಕಾಲನಿಗೆ ಕೊಟ್ಟಿದ್ದೇನೆ.ಸರ್.ಪೈಗಳು ತಕ್ಷಣವೇ ಕೇಳಿದ್ದರು ಹಣ ತೆಗೆದುಕೊಂಡು ಕೊಟ್ಟಿಯಾ..ಧರ್ಮಕ್ಕೆ ಕೊಟ್ಟಿಯಾ..ಇಲ್ಲ ಸರ್ ಧರ್ಮ ಕೊಟ್ಟೆ.”ಇದೇ ನೀನು ಮಾಡಿದ ತಪ್ಪು ಯಾವುದೇ ವಸ್ತುವನ್ನು ಪುಕ್ಕಟೆಯಾಗಿ ಕೊಟ್ಟರೆ ಅದನ್ನು ತೆಗೆದುಕೊಂಡವನಿಗೆ ಬಿಡಿಕಾಸು ಆ ವಸ್ತುವಿನ ಮೇಲೆ ಪ್ರೀತಿ ಬರುವುದಿಲ್ಲ.ಸ್ವಲ್ಪ ಹಣ ಕೊಟ್ಟು ತೆಗೆದುಕೊಂಡವನಿಗೆ ಅದರ ಮೇಲೆ ಪ್ರೀತಿ ಜವಾಬ್ದಾರಿ ಬರುತ್ತದೆ ಕಣೊ”ನಮ್ಮಮಾಧವ ಪೈಗಳ ಈ ಮಾತುಗಳನ್ನು ನಮ್ಮ ಹೆಗ್ಡೆ ಇಂದಿಗೂ ಗೌರವಿಸುತ್ತಾರೆ ಇದು ಸತ್ಯ ಅನ್ನುವುದು ಅವರ ಅನುಭಕ್ಕೂ ಬಂದಿದೆ ಅನ್ನುವ ಹಿತವಚನದ ನುಡಿಯನ್ನು ಹೆಗ್ಡೆ ಯವರು ತಮ್ಮ ಬದುಕಿನುದ್ದಕ್ಕೂ ನೆನಪಿಸಿಕೊಂಡಿದ್ದಾರೆ.
1952ನೇ ಇಸವಿ ಮೊದಲ ಚುನಾವಣಾ ಕಾಲ.ಇದೇ ಹೊತ್ತಿನಲ್ಲಿ ಹೆಗ್ಡೆಯವರು 5ನೇ ಫಾಮ೯ನಲ್ಲಿ ಕಲಿಯುತ್ತಿದ್ದರು.ಉಡುಪಿ ವಿಧಾನ ಸಭೆಯ ಅಭ್ಯರ್ಥಿಯಾಗಿ ಟಿ.ಎ.ಪೈ ಚುನಾವಣೆಗೆ ನಿಂತಿದ್ದರು.ಅಂದು ವಿದ್ಯಾರ್ಥಿಯಾಗಿದ್ದ ಹೆಗ್ಡೆ ಶಾಲೆಗೆ ಒಂದು ತಿಂಗಳು ರಜೆ ಹಾಕಿ ಟಿ.ಎ.ಪೈಗಳ ಚುನಾವಣಾ ಪ್ರಚಾರದಲ್ಲಿ ಅಳಿಲು ಸೇವೆ ನೀಡಿದ್ದನ್ನು ಇಂದಿಗೂ ಸ್ಮರಿಸಿಕೊಳ್ಳುತ್ತಾರೆ. ಅಂದಿನಿಂದ ಇಂದಿನ ತನಕವೂ ಮಣಿಪಾಲ್ ದ ಪೈ ಬಂಧುಗಳ ಕುಟುಂಬದ ಜೊತೆ ಅನ್ಯೇೂನ್ಯವಾದ ಅವಿನಾವಭಾವವಾದ ಸಂಬಂಧ ಬೆಸೆದುಕೊಂಡಿದೆ.
ಅಪ್ಪಣ್ಣ ಹೆಗ್ಡೆ ಅವರ ನೆನಪಿನ ಶಕ್ತಿಯ ಇನ್ನೊಂದು ವಿಶೇಷತೆ ಅಂದರೆ ಯಾವುದೇ ಸಭಾ ಕಾರ್ಯಕ್ರಮದಲ್ಲಿ ವೇದಿಕೆಯಲ್ಲಿ ಎಷ್ಟೇ ಮಂದಿ ಅತಿಥಿಗಳಿರಲಿ ಅವರ ಹೆಸರನ್ನು ಎಲ್ಲಿಯೂ ಬರೆದು ಕೊಳ್ಳದೆ ಚಾತು ತಪ್ಪದೆ ಅವರ ಹೆಸರುಗಳನ್ನು ನೆನಪಿಸಿಕೊಳ್ಳುವ ವಿಶೇಷ ಸಾಮಥ್ಯ೯ ಅವರಿಗಿತ್ತು.ಕುಂದಾಪುರ ಬಸ್ರೂರು ಪರಿಸರದ ಸವ೯ತ್ರ ಕ್ಷೇತ್ರದ ಇತಿಹಾಸವನ್ನು ಪ್ರಬುದ್ಧತೆಯಿಂದ ನೆನಪಿಸ ಬಲ್ಲ ದಿ.ಅಪ್ಪಣ್ಣ ಹೆಗ್ಡೆ ಅವರು ಕುಂದಾಪುರ ಬಸ್ರೂರು ಪರಿಸರದ ಜ್ಞಾನ ದೀವಿಗೆ ಎಂದರು ತಪ್ಪಾಗಲಾರದು.
ಪ್ರಾತ: ಸ್ಮರಣಿಯರಾದ ಬಸ್ರೂರು ಅಪ್ಪಣ್ಣ ಹೆಗ್ಡೆ ಆವರ ಕಾಯ ನಮ್ಮಮುಂದೆ ಇಲ್ಲ ಆದರೆ ಅವರ ಚಿಂತನೆ ಸೇವೆ ಮಾನವೀಯ ಸಂಬಂಧ ಹಾಗೂ ಅವರವಿವಿಧ ಕ್ಷೇತ್ರಗಳ ಅನುಪಮ ಅನನ್ಯವಾದ ಸಾಧನೆಗಳು ಅವರ ಹೆಸರನ್ನು ಚಿರಾಯುವಾಗಿ ಮಾಡಿವೆ ಅನ್ನುವುದರಲ್ಲಿ ಎರಡು ಮಾತಿಲ್ಲ.
















