ಕಾರ್ಕಳ: ಯುವಕ ನಾಪತ್ತೆ

ಕಾರ್ಕಳ: ಪ್ಲಿಪ್‌ಕಾರ್ಟ್ ಕಂಪೆನಿಯಲ್ಲಿ ಉದ್ಯೋಗ ಮಾಡಿಕೊಂಡಿದ್ದ ಮುಂಡ್ಕೂರು ಗ್ರಾಮದ ಯಜ್ಞೇಶ್ ಮಾಧವ ಆಚಾರ್ಯ (39) ಎಂಬವರು ಫೆ.1ರಂದು ಸಂಜೆ ವೇಳೆ ಸಾಲದ ಬಗ್ಗೆ ಪತ್ರ ಬರೆದಿಟ್ಟು ಮನೆಯಿಂದ ಹೋದವರು ಈವರೆಗೆ ವಾಪಾಸು ಬಾರದೇ ನಾಪತ್ತೆಯಾಗಿದ್ದಾರೆ.

ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.