ಉಡುಪಿ:ಮಂದಾರ್ತಿ ದುರ್ಗಾಪರಮೇಶ್ವರೀ ದೇವಸ್ಥಾನ : ಮನ್ಮಹಾರಥೋತ್ಸವ

ಉಡುಪಿ: ಶ್ರೀ ಕ್ಷೇತ್ರ ಮಂದಾರ್ತಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ 2026 ನೇ ಸಾಲಿನ ವಾರ್ಷಿಕ ಮಹೋತ್ಸವವು ಫೆಬ್ರವರಿ 10 ರಿಂದ 16 ರ ವರೆಗೆ ನಡೆಯಲಿದೆ.

ಫೆ. 10 ರಂದು ಬೆಳಗ್ಗೆ 9 ರಿಂದ ಬಾರಾಳಿ ಶ್ರೀ ಮಹಾಗಣಪತಿ ಸನ್ನಿಧಿಯಲ್ಲಿ ಗಣಹೋಮ, ಫೆ. 11 ಹಾಗೂ 12 ರಂದು ವಿಶೇಷ ಪೂಜೆ ಹಾಗೂ ರಂಗಪೂಜೆಗಳು, ಫೆ. 13 ರ ರಾತ್ರಿ 9 ರಿಂದ ಕೆಂಡಸೇವೆ, ಫೆ. 14 ರಂದು ಮಧ್ಯಾಹ್ನ 12.30 ರಿಂದ ಶ್ರೀ ಮನ್ಮಹಾರಥೋತ್ಸವ ಹಾಗೂ ಫೆ. 15 ರಂದು ರಾತ್ರಿ ದೀಪೋತ್ಸವ, ಪಾಲಕಿ ಉತ್ಸವ ಹಾಗೂ ಅಷ್ಟಾವಧಾನ ಸೇವೆಗಳ ನಂತ ಐದೂ ಮೇಳಗಳಿಂದ ಸೇವೆ ಆಟ ಜರುಗಲಿದೆ ಎಂದು ಕ್ಷೇತ್ರದ ಕಾರ್ಯನಿರ್ವಹಣಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.