ಇಂದು (ಜ.21) ಪರ್ಕಳ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮನ್ಮಹಾರಥೋತ್ಸವ

ಉಡುಪಿ: ಪರ್ಕಳ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ಮಹಿಷಮರ್ದಿನಿ ಅಯ್ಯಪ್ಪ ದೇವಸ್ಥಾನದ ಮನ್ಮಹಾರಥೋತ್ಸವ ಇಂದು (ಜ.21) ದೇವಸ್ಥಾನದ ವಠಾದಲ್ಲಿ ನಡೆಯಲಿದೆ.

ಈ ಪ್ರಯುಕ್ತ ವಾಲಿಬಾಲ್ ಫ್ರೆಂಡ್ಸ್, ಪರ್ಕಳ ಇವರ ವತಿಯಿಂದ ರಾತ್ರಿ 9.30ರಿಂದ ತುಳುನಾಡ ಗಾನ ಗಂಧರ್ವ ಬಿರುದಾಂಕಿತ ಪುತ್ತೂರು ಜಗದೀಶ್ ಆಚಾರ್ಯ ಮತ್ತು‌ ಬಳಗದವರಿಂದ ‘ಸಂಗೀತ ಗಾನ ಸಂಭ್ರಮ’ ನಡೆಯಲಿದೆ.

ಈ ಸಂದರ್ಭದಲ್ಲಿ ರಾಷ್ಟ್ರೀಯ ಮಟ್ಟದ ಕರಾಟೆ ಪಟು ಛಾಯಾ ಎಸ್ ಪೂಜಾರಿ ಹೆರ್ಗ, ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 12ನೇ ಸ್ಥಾನ ಪಡೆದ ನಿರಂಜನ್ ಚೆನ್ನದಾಸರ್ ಹಾಗೂ ಭಾರತೀಯ ಸೇನೆಗೆ ಆಯ್ಕೆಯಾದ ಅಮೋಘ್ ಭಂಡಾರಿ ಅವರನ್ನು ಸನ್ಮಾನಿಸಲಾಗುವುದು.