ಉಡುಪಿ: ಶ್ರೀ ನಿತ್ಯಾನಂದ ಸ್ವಾಮಿ ಮಂದಿರ ಮಠ ಉಡುಪಿ ತೃತೀಯ ಪುನರ್ ಪ್ರತಿಷ್ಠಾ ವರ್ಧಂತಿ ಮೊಹೋತ್ಸವ ವಿಜೃಂಭಣೆಯಿಂದ ಜ.16 ಶುಕ್ರವಾರ ಜರಗಿತು.
ಶ್ರೀದೇವರ ಸನ್ನಿಧಿಯಲ್ಲಿ ಮೋಹೋತ್ಸವ ಅಂಗವಾಗಿ ಕಾಕಡ ಆರತಿ, ಗಣಹೋಮ, ಭಕ್ತಾದಿಗಳಿಂದ ಸೀಯಾಳ ಅಭಿಷೇಕ, ಮುಂಜಾನೆಯಿಂದ ರಾತ್ರಿಯವರೆಗೆ ವಿವಿಧ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ, ಪಲ್ಲಪೂಜೆ, ಮಹಾಪೂಜೆ, ಸಾರ್ವಜನಿಕ ಅನ್ನಸಂತರ್ಪಣೆಯಲ್ಲಿ ಸಾವಿರಾರು ಭಕ್ತರು ಭೋಜನ ಸ್ವೀಕರಿಸಿದರು.

ಸಂಜೆ ವಿವಿಧ ಕುಣಿತ ಭಜನಾ ತಂಡಗಳು, ಪೂರ್ಣ ಕುಂಭ, ಮಂಗಳವಾದ್ಯ, ಮಹಿಳಾ ಚಂಡೆವಾದನದೊಂದಿಗೆ ಭಗವಾನ್ ನಿತ್ಯಾನಂದ ಸ್ವಾಮಿಯ ಮೂರ್ತಿಯೊಂದಿಗೆ ಪೇಟೆ ಉತ್ಸವ ನೆಡೆಯಿತು. ರಾತ್ರಿ ಪಲ್ಲಕ್ಕಿ ಉತ್ಸವ ಸೇವೆ ಸಲ್ಲಿಸಿದ ಗಣ್ಯರಿಗೆ ಸನ್ಮಾನ ನೆಡೆಯಿತು. ಶ್ರೀ ನಿತ್ಯಾನಂದ ಸ್ವಾಮೀಜಿಗೆ ವಿಶೇಷ ಹೂವಿನ ಅಲಂಕಾರ, ವಿಶೇಷ ಪೂಜೆ ಜರಗಿತು. ಅರ್ಚಕರಾದ ಓಂ ಪ್ರಕಾಶ್, ಅಮಿತ್ ಶುಕ್ಲಾ ಧಾರ್ಮಿಕ ಪೂಜಾ ಕಾರ್ಯ ನೆಡೆಸಿಕೊಟ್ಟರು.

ಧಾರ್ಮಿಕ ಸಭಾ ವೇದಿಕೆಯಲ್ಲಿ ಧರ್ಮದರ್ಶಿ ಕೆ ಕೆ ಅವರ್ಸೆಕರ್ ಮುಂಬಯಿ, ಟ್ರಸ್ಟಿಗಳಾದ ಕೆ ದಿವಾಕರ್ ಶೆಟ್ಟಿ ತೋಟದಮನೆ ಕೊಡವೂರು, ತೋನ್ಸೆ ನವೀನ್ ಶೆಟ್ಟಿ, ಮೋಹನ್ ಚಂದ್ರ ನಂಬಿಯಾರ್, ಪಿ ಪುರಷೋತ್ತಮ ಶೆಟ್ಟಿ, ಸೂರ್ಯ ಪ್ರಕಾಶ್, ನರಸಿಂಹ ಶೆಣೈ ಹಾಗೂ ವಿ ಜೆ ಶೆಟ್ಟಿ ಅಧ್ಯಕ್ಷರಾದ ಉದಯ ಕುಮಾರ್ ಶೆಟ್ಟಿ ಬನ್ನಂಜೆ, ಕಾರ್ಯದರ್ಶಿ ಈಶ್ವರ ಶೆಟ್ಟಿ ಚಿಟ್ಪಾಡಿ, ವಿಶ್ವನಾಥ್ ಶೆಟ್ಟಿ ಕಡೆಕಾರ್, ಡಾ ದೀಪಕ್ ಪ್ರಭು, ರವೀಂದ್ರ ಪುತ್ರನ್, ತಾರಾನಾಥ್ ಮೇಸ್ತ, ಸಮಿತಿಯ ಪದಾಧಿಕಾರಿಗಳು, ಸಾವಿರಾರು ಭಕ್ತರು ಉಪಸ್ಥಿತರಿದ್ದರು.
















