ಉಡುಪಿ:ರೋಟರಿ ಕ್ಲಬ್ ಬ್ರಹ್ಮಾವರ, ರೋಟರ್ಯಾಕ್ಟ್ ಕ್ಲಬ್ ಬ್ರಹ್ಮಾವರ,
ಇಂಟರ್ಯಾಕ್ಟ್ ಕ್ಲಬ್, ಕಳತ್ತೂರು ಸಂತೆಕಟ್ಟೆ ಪ್ರೌಢಶಾಲೆ, ಜೇಸಿಐ ಕಲ್ಯಾಣಪುರ, ಸೀನಿಯರ್ ಛೇಂಬರ್ ಇಂಟರ್ನ್ಯಾಷನಲ್ ಉಡುಪಿ ಟೆಂಪಲ್ ಸಿಟಿ ಲೀಜನ್ ಇವರ ಸಂಯುಕ್ತ ಆಶ್ರಯದಲ್ಲಿ ಪರೀಕ್ಷಾ
ಸವಾಲುಗಳು, ವೃತ್ತಿ ಮಾರ್ಗದರ್ಶನ ಮತ್ತು ಆರೋಗ್ಯ – ನೈರ್ಮಲ್ಯ ಕಾರ್ಯಕ್ರಮ ಸರಕಾರಿ ಪ್ರೌಢಶಾಲೆ ಕಳತ್ತೂರು ಸಂತೆಕಟ್ಟೆಯ ಶಾಲಾ ಸಭಾಂಗಣದಲ್ಲಿ ಜರುಗಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಸಂಧ್ಯಾರವರು ಉದ್ಘಾಟಿಸಿ ಶುಭ ಹಾರೈಸಿದರು. ಸಭಾಧ್ಯಕ್ಷತೆಯನ್ನು ರೋಟರಿ ಕ್ಲಬ್ ಬ್ರಹ್ಮಾವರದ ಅಧ್ಯಕ್ಷರಾದ ಸತೀಶ್ ಶೆಟ್ಟಿಯವರು ವಹಿಸಿ ಸ್ವಾಗತಿಸಿದರು.
ಸಂಪನ್ಮೂಲ ವ್ಯಕ್ತಿ ಜೇಸಿ ತರಬೇತುದಾರ ನರೇಂದ್ರ ಕುಮಾರ್ ಕೋಟರವರು ಪರೀಕ್ಷಾ ಸವಾಲುಗಳು ಹಾಗೂ ವೃತ್ತಿ ಮಾರ್ಗದರ್ಶನ ತರಬೇತಿಯನ್ನು ನಡೆಸಿಕೊಟ್ಟರು. ಕರ್ಜೆ ಪ್ರಾಥಮಿಕ ಆರೋಗ್ಯ ಕೇಂದ್ರದ
ಸಮುದಾಯ ಆರೋಗ್ಯಾಧಿಕಾರಿ ಶ್ರೀಮತಿ ಧನುಶ್ರೀಯವರು
ವಿದ್ಯಾರ್ಥಿಗಳಲ್ಲಿ ಆರೋಗ್ಯ ಹಾಗೂ ನೈರ್ಮಲ್ಯದ ಬಗ್ಗೆ ಮಾಹಿತಿ
ನೀಡಿದರು.
ವೇದಿಕೆಯಲ್ಲಿ ಸೀನಿಯರ್ ಛೇಂಬರ್ ಉಡುಪಿ ಟೆಂಪಲ್ ಸಿಟಿ ಲೀಜನ್ನ ಅಧ್ಯಕ್ಷ ಶಿವಾನಂದ ಶೆಟ್ಟಿಗಾರ್, ಜೇಸಿಐ ಕಲ್ಯಾಣಪುರದ ಅಧ್ಯಕ್ಷ ವಿರೇನ್ ವಿ. ಸುವರ್ಣ, ರೋಟರ್ಯಾಕ್ಟ್ ಅಧ್ಯಕ್ಷ ಆಶಿಶ್ ಅಂದ್ರಾದೆ,
ಇಂಟರ್ಯಾಕ್ಟ್ ಅಧ್ಯಕ್ಷ ರಕ್ಷಿತ್, ರೋಟರ್ಯಾಕ್ಟ್ ಸಭಾಪತಿ ಸುಂದರಾಮ್
ಶೆಟ್ಟಿ, ಇಂಟರ್ಯಾಕ್ಟ್ ಸಭಾಪತಿ ಜಗದೀಶ್ ಕೆಮ್ಮಣ್ಣು, ಇಂರ್ಯಾಕ್ಟ್ ಶಿಕ್ಷಕ
ಸಂಯೋಜಕಿ ಚಿತ್ರಕಲಾ, ಇಂಟರ್ಯಾಕ್ಟ್ ಸಂಯೋಜಕ ನವೀನ್ ಬೈಕಾಡಿ
ಉಪಸ್ಥಿತರಿದ್ದರು. ರೋಟರಿ ಕಾರ್ಯದರ್ಶಿ ರೆಕ್ಸಾನ್ ಮೋನಿಸ್
ಧನ್ಯವಾದ ಸಮರ್ಪಿಸಿದರು.
















